ಆಂಧ್ರಕ್ಕೆ ಒಲಿದ ಬುಲೆಟ್ ರೈಲಿಗಿಂತ ವೇಗವಾದ ಸಂಚಾರ
ಅಮರಾವತಿ, ಸೆ. 07: ಭಾರತದಲ್ಲಿ ಬಹುಕೋಟಿ ರೂ. ಮೊತ್ತದ ಬುಲೆಟ್ ರೈಲು ಯೋಜನೆ ಬಗ್ಗೆ ಅಪಸ್ವರ ಕೇಳಿ ಬರುತ್ತಿರುವ ಸಂದರ್ಭದಲ್ಲೇ ಹೈಪರ್ಲೋಪ್ ಸಂಚಾರ ವ್ಯವಸ್ಥೆ ಬಗ್ಗೆ ಚರ್ಚೆ ನಡೆಯುತ್ತಿದೆ.
ಬುಲೆಟ್ ರೈಲಿಗಿಂತಲೂ ವೇಗವಾಗಿ, ಅತ್ಯಂತ ಕಡಿಮೆ ವೆಚ್ಚದ ಯೋಜನೆ ಇದಾಗಿದ್ದು, ದೇಶದಲ್ಲಿ ಮೊದಲ ಬಾರಿಗೆ ವಿಜಯವಾಡ ಹಾಗೂ ಅಮರಾವತಿ ನಡುವೆ ಸಂಚರಿಸಲಿದೆ. ಮೆಟ್ರೋ ರೈಲು ಬರುವುದಕ್ಕೂ ಮುನ್ನ ಅಮರಾವತಿಯಲ್ಲಿ ಹೈಪರ್ ಲೂಪ್ ಕಾಣುವ ಸಾಧ್ಯತೆಯಿದೆ. ಸುಮಾರು 35 ಕಿ.ಮೀ ದೂರವನ್ನು 5 ನಿಮಿಷದಲ್ಲಿ ಕ್ರಮಿಸಬಹುದಾಗಿದೆ.
ಆಂಧ್ರಪ್ರದೇಶದ ಆರ್ಥಿಕ ಅಭಿವೃದ್ಧಿ ಮಂಡಳಿ(ಎಪಿ -ಇಡಿಬಿ) ಹಾಗೂ ಅಮೆರಿಕದ ಹೈಪರ್ ಲೂಪ್ ಸಾರಿಗೆ ತಂತ್ರಜ್ಞಾನ ಸಂಸ್ಥೆ (ಎಚ್ ಟಿಟಿ) ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಯೋಜನೆಯ ವೆಚ್ಚದ ಬಗ್ಗೆ ಮಾಹಿತಿ ಇನ್ನೂ ಸಿಕ್ಕಿಲ್ಲ. ಸುಮಾರು ಆರು ತಿಂಗಳ ಕಾಲ ಸಮೀಕ್ಷೆ ನಡೆಸಿ ನಂತರ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಇಡಿಬಿ ಸಿಇಒ ಕಿಶೋರ್ ಹೇಳಿದ್ದಾರೆ.

ಅಮರಾವತಿಗಾಗಿ ನಾಯ್ಡು ಕನಸು
ಪ್ರತ್ಯೇಕ ರಾಜ್ಯವಾದ ಬಳಕ್ ಆಂಧ್ರಪ್ರದೇಶದ ಹೊಸ ರಾಜಧಾನಿಯಾಗಿ ನಿರ್ಮಾಣಗೊಂಡಿರುವ ಅಮರಾವತಿಯಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶ್ರಮಿಸುತ್ತಿದ್ದಾರೆ. ವಿಶ್ವ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಎಚ್ ಟಿಟಿ ಅಧಿಕಾರಿಗಳ ಜತೆ ನಾಯ್ಡು ಮಾತುಕತೆ ನಡೆಸಿದ್ದರು. ಈಗ ಎಚ್ ಟಿಟಿ ಸಹ ಸ್ಥಾಪಕ ಬಿಬಾಪ್ ಗ್ರೆಸ್ಟಾ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಏನಿದು ಹೈಪರ್ ಲೂಪ್ ಸಾರಿಗೆ
ಹೈಪರ್ಲೋಪ್ ಟ್ರಾನ್ಸ್ಪೋರ್ಟ್ ಸಿಸ್ಟಮ್ (ಎಚ್ಟಿಎಸ್) ಸಂಸ್ಥೆ ಈ ರೈಲನ್ನು ಅಭಿವೃದ್ಧಿ ಪಡಿಸುತ್ತಿದೆ. ಇದು ಗಂಟೆಗೆ 1,216 ಕಿ.ಮೀ. ವೇಗದಲ್ಲಿ ಚಲಿಸಲಿದೆ. ಉದಾಹರಣೆಗೆ ಬೆಂಗಳೂರು ಹಾಗೂ ಚೆನ್ನೈ ನಡುವಿನ 345 ಕಿ.ಮೀ. ದೂರವನ್ನು ಈ ರೈಲು 30 ನಿಮಿಷದಲ್ಲಿ ಕ್ರಮಿಸಲಿದೆ ಎಂದು ಈ ಸೂಪರ್ ಸಾನಿಕ್ ರೈಲಿನ ನಿರ್ಮಾಣಗಾರ ಎಲಾನ್ ಹೇಳಿದ್ದಾರೆ.

ಹಳಿಗಳ ಮೇಲೆ ಚಲಿಸುವುದಿಲ್ಲ
ಸೂಪರ್ ಸಾನಿಕ್ ರೈಲು ಹಳಿಗಳ ಮೇಲೆ ಚಲಿಸುವುದಿಲ್ಲ. ಕಾಂಕ್ರಿಟ್ ಪಿಲ್ಲರ್ ನಿರ್ಮಿಸಿ, ಅದರ ಮೇಲೆ ಕೊಳವೆಯ ಮಾದರಿಯಲ್ಲಿ ಮಾರ್ಗ ನಿರ್ವಿುಸಲಾಗುತ್ತದೆ. ಇದು ಅರೆನಿರ್ವಾತ ಪ್ರದೇಶವಾಗಿರಲಿದ್ದು, ಒತ್ತಡದ ಬಲದಿಂದ ರೈಲು ಸೂಪರ್ ಸಾನಿಕ್ ವೇಗ ಪಡೆಯಲಿದೆ.
ಟ್ಯೂಬ್ ರೈಲು ಎನ್ನಬಹುದು
ಕೊಳವೆ ರೀತಿಯ ಮಾರ್ಗಗಳ ಮೇಲೆ ಸೋಲಾರ್ ಪ್ಯಾನಲ್ಗಳನ್ನು ಅಳವಡಿಸಿ, ಇದರಿಂದ ಉತ್ಪಾದಿಸಲಾದ ವಿದ್ಯುತ್ನಿಂದ ರೈಲು ಓಡುತ್ತದೆ. ರೈಲಿನ ತುದಿಯಲ್ಲಿ ಲೈನರ್ ಮೋಟಾರ್ ಅಳವಡಿಸಲಾಗುತ್ತಿದ್ದು, ಇದು ಇಂಜಿನ್ ರೀತಿಯಲ್ಲಿ ಕೆಲಸ ಮಾಡಲಿದೆ. ಈ ರೈಲಿಗೆ ಇಂಧನ ಅಗತ್ಯವಿಲ್ಲ, ಹೀಗಾಗಿ ಇಂಧನ ಉಳಿತಾಯ ಸಾಧ್ಯ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications