ಟಿಕ್‌ಟಾಕ್‌ನಲ್ಲಿ ಮುಖ್ಯಮಂತ್ರಿಯನ್ನು ಕೊಂಡಾಡಿದ ಉಪ ಮುಖ್ಯಮಂತ್ರಿ!
ಅಮರಾವತಿ, ಜನವರಿ 1: ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪಿ ಪುಷ್ಮಾ ಶ್ರೀವಾಣಿ ಅವರು ಸಕತ್ ಸುದ್ದಿಯಲ್ಲಿದ್ದಾರೆ. ತಮ್ಮ ಮುಖ್ಯಮಂತ್ರಿಯನ್ನು ವಿಭಿನ್ನವಾಗಿ ಹೊಗಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಜನಪ್ರಿಯ ಸಾಮಾಜಿಕ ತಾಣವಾಗಿ ಬೆಳೆಯುತ್ತಿರುವ ಟಿಕ್‌ಟಾಕ್‌ನಲ್ಲಿ ಉಪ ಮುಖ್ಯಮಂತ್ರಿ ಪಿ ಪುಷ್ಮಾ ಶ್ರೀವಾಣಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಹೊಗಳಿದ್ದಾರೆ. 'ತೆಲುಗಿನ ರಾಯಲಸೀಮಾ ಮುದ್ದುಬಿಡ್ಡಾ ಮನಾ ಜಗನ್ ಅನ್ನಾ' ಹಾಡಿಗೆ ಟಿಕ್‌ಟಾಕ್ ಮಾಡುವ ಮೂಲಕ ವಿಶೇಷವಾಗಿ ಹೊಗಳಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದಕ್ಕಾಗಿ ವೈಎಸ್‌ಆರ್ ಕಾಂಗ್ರೆಸ್ ಈ ಹಾಡನ್ನು ಹೊರತಂದಿತ್ತು.

ಹೊಸ ಹೊಸ ಯೋಜನೆಗಳ ಮೂಲಕ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ರಾಯಲಸೀಮಾದ ಹಿರೋ ಎಂದು ಅಲ್ಲಿನ ಜನರಿಂದ ಕರೆಸಿಕೊಳ್ಳುತ್ತಿದ್ದಾರೆ. ಕುರುಪಂ ಕ್ಷೇತ್ರದ ವೈಎಸ್‌ಆರ್ ಕಾಂಗ್ರೆಸ್ ಶಾಸಕಿಯಾಗಿರುವ ಪಿ ಪುಷ್ಮಾ ಶ್ರೀವಾಣಿ ಜಗನ್ಮೋಹನ ರೆಡ್ಡಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಬುಡುಕಟ್ಟು ಅಭಿವೃದ್ಧಿ ಇಲಾಖೆ ಸಚಿವರಾಗಿದ್ದಾರೆ.
Pushpa Srivani garu 😍🔥@PushpaSreevani pic.twitter.com/pU8N6QoieL
— Manvitha (@ManviDad) December 31, 2019












Click it and Unblock the Notifications