ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ 21 ದಿನದಲ್ಲಿ ನ್ಯಾಯ!

ಅಮರಾವತಿ, ಡಿಸೆಂಬರ್ 12: ಅತ್ಯಾಚಾರ ಹಾಗೂ ಮಹಿಳಾ ದೌರ್ಜನ್ಯದ ಪ್ರಕರಣಗಳನ್ನು ಬೇಗ ಇತ್ಯರ್ಥಗೊಳಿಸುವ ಸಲುವಾಗಿ ಮುಖ್ಯಮಂತ್ರಿ ಜಗನ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ.

'ಆಂಧ್ರ ಪ್ರದೇಶ ದಿಶಾ ಕಾನೂನು-2019' ಹೆಸರಿನ ಮಸೂದೆಯನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ. ಸದ್ಯ ಆಂಧ್ರ ಪ್ರದೇಶ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ನಾಳೆ ಅಧಿವೇಶನದಲ್ಲಿ 'ದಿಶಾ ಕಾನೂನು-2019' ಮಸೂದೆ ಚರ್ಚೆಗೆ ಬರುವ ಸಂಭವವಿದೆ.

Andhra Pradesh Cabinet Approves Disha Bill 2019 In Kannada

ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ, ಮಕ್ಕಳಿಗೆ ತ್ವರಿತ ನ್ಯಾಯದಾನ, ದೋಷಿಗಳಿಗೆ ಮರಣದಂಡನೆವೆರೆಗೆ ಶಿಕ್ಷೆ ನೀಡುವುದು ಈ ಮಸೂದೆಯಲ್ಲಿ ಸೇರಿಸಲಾಗಿದೆ. 21 ದಿನಗಳೊಳಗೆ ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂಬ ಮಹತ್ವದ ಅಂಶ ಇದರಲ್ಲಿ ಅಡಕವಾಗಿದೆ. ನೂತನ ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಜಗನ್ಮೋಹನ ರೆಡ್ಡಿ ಅವರು ಹಲವಾರು ಕ್ರಾಂತಿಕಾರಿ ಕ್ರಮಗಳನ್ನು ಕೈಗೊಳ್ಳುತ್ತಿರುವ ಭಾಗವಾಗಿ ಈ ಮಸೂದೆಯನ್ನು ತಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+