ವಿಡಿಯೋ ಕಾಲ್‌ ವೇಳೆ ಆಕಸ್ಮಿಕವಾಗಿ ನೇಣು ಬಿಗಿದುಕೊಂಡ ವ್ಯಕ್ತಿ

ಅಮರಾವತಿ, ಮೇ 5: ಪತ್ನಿ ಜೊತೆ ವಿಡಿಯೋ ಕಾಲ್ ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿ ಪಶ್ಚಿಮ ಗೋದಾವರಿ ಜಿಲ್ಲೆಯ ತಲ್ಲಪುಡಿ 'ಮಂಡಲ್' (ಬ್ಲಾಕ್) ನ ಮಲಕಪಳ್ಳಿ ಗ್ರಾಮದ ನಿವಾಸಿ ಜಿ.ಗಣೇಶ್ ಎಂದು ತಿಳಿದು ಬಂದಿದೆ. ಈತನ ಪತ್ನಿ ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದು, ಹಿಂತಿರುಗಲು ನಿರಾಕಿಸಿದ್ದಳು. ನೀನು ಬಂದಿಲ್ಲ ಅಂದ್ರೆ ಸಾಯುತ್ತೇನೆ ಎಂದು ಬೆದರಿಸಲು ಹೋಗಿ ಹಗ್ಗಕ್ಕೆ ಕುತ್ತಿಗೆ ನೀಡಿ ದುರಂತ ಸಾವು ಕಂಡಿದ್ದಾನೆ.

ಗಂಡ ಹೆಂಡತಿ ಅಸಮಾಧನ ಹೊಂದಿದ್ದರು ಎಂದು ಕುಟುಂಬದ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಡಿಯೋ ಕಾಲ್ ಸಂದರ್ಭದಲ್ಲಿ ಇಬ್ಬರು ಜಗಳವಾಡುತ್ತಿದ್ದರು, ವಾದ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

Andhra Man Accidentally Hangs Self During Video Call

ಪೊಲೀಸರು ಶವವನ್ನು ಕೋವೂರಿನ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ಪ್ರಕರಣ ದಾಖಲಿಸಿದ್ದಾರೆ. ಗಣೇಶ್ ಅವರ ಮೊಬೈಲ್ ಫೋನ್‌ನಲ್ಲಿ ದಾಖಲಾದ ವಿಡಿಯೋ ಕರೆ ಮತ್ತು ದಂಪತಿಗಳ ಸಂಭಾಷಣೆಯ ಆಧಾರದ ಮೇಲೆ ಅವರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ಏಪ್ರಿಲ್‌ ತಿಂಗಳಲ್ಲಿ, ತಿರುಪತಿಯಲ್ಲಿ ಯುವಕನೊಬ್ಬ ಸ್ನೇಹಿತನಿಗೆ ವಿಡಿಯೋ ಕಾಲ್ ಮಾಡಿದ್ದ ವೇಳೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ. ಆತನ ಸ್ನೇಹಿತ ಅವನನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ, ಆಕಸ್ಮಿಕವಾಗಿ ಆತ ಸಾವನ್ನಪ್ಪಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+