• search

ರಣಭೇರಿ ಖ್ಯಾತಿಯ ನಟಿ ಆಂಧ್ರ ರಾಜಕೀಯದಲ್ಲಿ ಜಯಭೇರಿ ಬಾರಿಸುವಳೆ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಅಮರಾವತಿ, ಅಕ್ಟೋಬರ್ 08: ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ವಿವಿಧ ಪಕ್ಷಗಳು ಚಿತ್ರರಂಗದ ಸ್ಟಾರ್ ಗಳನ್ನು ಸೆಳೆಯಲು ತೊಡಗಿದ್ದಾರೆ. ಈ ನಡುವೆ ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿ ಸ್ಟಾರ್ ನಟ, ನಟಿಯರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಟಿಡಿಪಿ ಹಾಗೂ ವೈಎಸ್ಸಾರ್ ಕಾಂಗ್ರೆಸ್ ಮುಂದಾಗಿವೆ.

  ಚಿತ್ರರಂಗಕ್ಕೂ ರಾಜಕೀಯಕ್ಕೂ ಅವಿನಾಭಾವ ಸಂಬಂಧವಿದೆ. ಈಗ ದಕ್ಷಿಣ ಭಾರತದಲ್ಲಿ ಒಂದು ಕಾಲ ಮಿಂಚಿದ ನಟಿ ವಾಣಿ ವಿಶ್ವನಾಥ್ ಅವರು ಮತ್ತೊಮ್ಮೆ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಮುಂದಾಗಿದ್ದಾರೆ.

  ತಮಿಳು ಸ್ಟಾರ್ ವಿಜಯ್ ರಾಜಕೀಯ ಪ್ರವೇಶಿಸಿದರೂ ಮೋದಿ ಪರ ನಿಲ್ಲಲ್ಲ

  ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ನಟಿ ವಾಣಿ ಸಿದ್ಧತೆ ನಡೆಸಿದ್ದಾರೆ. ವಾಣಿ ವಿಶ್ವನಾಥ್ ಅವರು ತೆಲುಗುದೇಶಂ ಪಕ್ಷದಿಂದ ಕಣಕ್ಕಿಳಿಯಲು ಮುಂದಾಗಿದ್ದಾರೆ. ಈ ಬಗ್ಗೆ ವಾಣಿ ವಿಶ್ವನಾಥ್ ಅವರು ಮನೋರಮಾ ನ್ಯೂಸ್ ಜತೆ ಮಾತನಾಡುತ್ತಾ ಹೇಳಿದ್ದಾರೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿರುವ ನಟಿ ವಾಣಿ ಅವರು ರಾಜಕೀಯಕ್ಕೆ ಪ್ರವೇಶಿಸಿದರೆ, ಟಿಡಿಪಿ ಲಾಭವಾಗಲಿದೆ ಎಂಬ ನಂಬಿಕೆ ಹುಟ್ಟುಕೊಂಡಿದೆ.

  ಆಂಧ್ರಪ್ರದೇಶದಲ್ಲಿ ಎಲ್ಲಿಂದ ಸ್ಪರ್ಧೆ?

  ಆಂಧ್ರಪ್ರದೇಶದಲ್ಲಿ ಎಲ್ಲಿಂದ ಸ್ಪರ್ಧೆ?

  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರು ಚಿತ್ತೂರು ಜಿಲ್ಲೆಯ ನಗರಿ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಪ್ರಸ್ತುತ ಈ ಕ್ಷೇತ್ರ ವೈಎಸ್ಆರ್ ಕಾಂಗ್ರೆಸ್ ವಶದಲ್ಲಿದ್ದು, ನಟಿ ರೋಜಾ ಪ್ರತಿನಿಧಿಸುತ್ತಿದ್ದಾರೆ. ಕಳೆದ ವರ್ಷವೇ ತೆಲುಗು ದೇಶಂ ಪಾರ್ಟಿ ಸೇರಲು ವಾಣಿ ಮುಂದಾಗಿದ್ದರು. ಆದರೆ, ಸಂಸಾರ, ಸಿನಿಮಾ ನಡುವೆ ರಾಜಕೀಯ ಪ್ರವೇಶ ವಿಳಂಬವಾಗಿತ್ತು.

  ಲೋಕಸಭೆ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕಿ

  ಲೋಕಸಭೆ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕಿ

  ಟಿಡಿಪಿ ಸೇರುವ ಪ್ರಕ್ರಿಯೆ ಆರಂಭವಾಗಿದ್ದು, ಪಕ್ಷದ ಅಧ್ಯಕ್ಷ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ನಾಯ್ಡು ಅವರ ನಾಯಕತ್ವದಲ್ಲಿ ಬಲವಾದ ನಂಬಿಕೆಯಿದೆ. 2019ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕಿಯಾಗಿ ಪಾಲ್ಗೊಳ್ಳಲು ನಾನು ಸಿದ್ಧ ಎಂದಿದ್ದಾರೆ.

  ಮಾಲಿವುಡ್ ನ ಆಕ್ಷನ್ ಕ್ವೀನ್ ವಾಣಿ

  ಮಾಲಿವುಡ್ ನ ಆಕ್ಷನ್ ಕ್ವೀನ್ ವಾಣಿ

  ಮಲಯಾಳಂ ಹಾಗೂ ತೆಲುಗು ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ವಾಣಿ ಅವರು ಸಾಹಸ ಪ್ರಧಾನ ಚಿತ್ರಗಳಲ್ಲಿ ಮಿಂಚಿದವರು. ಕನ್ನಡದಲ್ಲಿ ಪರಶುರಾಮ್, ರಣಭೇರಿ, ಬಾಂಬೆ ದಾದಾ ಮುಂತಾದ ಚಿತ್ರಗಳಲ್ಲಿ ನಟಿಸಿದವರು.

  1992ರಲ್ಲಿ ಎನ್ ಟಿ ರಾಮರಾವ್ ಜತೆ ಸಾಮ್ರಾಟ್ ಅಶೋಕ ಚಿತ್ರ, ಚಿರಂಜೀವಿ ಜತೆ ಘರನಾ ಮೊಗಡು ಸೇರಿದಂತೆ 37ಕ್ಕೂ ಅಧಿಕ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಂನಲ್ಲಿ 52ಕ್ಕೂ ಅದಿಹ್ಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ವಾಣಿ ತಂದೆ ಭವಿಷ್ಯ ನುಡಿದಿದ್ದರು.

  ವಾಣಿ ತಂದೆ ಭವಿಷ್ಯ ನುಡಿದಿದ್ದರು.

  ತ್ರಿಸ್ಸೂರ್ ಮೂಲದ ವಿಶ್ವನಾಥನ್ ಹಾಗೂ ಗಿರಿಜಾ ದಂಪತಿಯ ಪುತ್ರಿಯಾಗಿ 1971ರ ಮೇ 13ರಂದು ಜನಿಸಿದ ವಾಣಿ ಅವರು 13 ವರ್ಷ ವಯಸ್ಸಿನಲ್ಲಿದ್ದಾಗ ಅವರ ತಂದೆ ಭವಿಷ್ಯ ನುಡಿದಿದ್ದರು. ಮುಂದೆ ನಟಿಯಾಗಿ ನಂತರ ರಾಜಕಾರಣಿಯಾಗಲಿದ್ದಾರೆ ಎಂದಿದ್ದರು.

  ಮಲಯಾಳಮ್ ನಟ ಬಾಬುರಾಜ್ ಅವರನ್ನು ಮದುವೆಯಾಗಿರುವ ವಾಣಿ ಅವರಿಗೆ ಆರ್ಚಾ, ಆಧ್ರಿ ಹೆಸರಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  South Indian actor Vani Viswanath is all set to enter politics through Andhra Pradesh. Viswanath on Sunday confirmed that she is joining Chandrababu led Telugu Desham Party(TDP)

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more