ಬಿಸಿಲ ಝಲ ತಾಳಲಾರದೆ ಕಾರಿಗೆಲ್ಲ ಸಗಣಿ ಮೆತ್ತಿದ ಯುವಕ
ಅಹ್ಮದಾಬಾದ್, ಮೇ 22: ಈ ಬೇಸಿಗೆಯಲ್ಲಿ ಬಿಸಿಲ ಝಳ ತಡೆಯಲಾರದೆ ಉಸ್ಸಪ್ಪಾ, ಎನ್ನುತ್ತಿರುವವರಿಗಾಗಿ ಅಹ್ಮದಾಬಾದಿನ ವ್ಯಕ್ತಿಯೊಬ್ಬರು ಹೊಸ ಐಡಿಯಾ ಹುಡುಕಿದ್ದಾರೆ... ಖರ್ಚಿಲ್ಲ ಏನಿಲ್ಲ! ಯಥೇಚ್ಛವಾಗಿ ಸಗಣಿ ಇದ್ದರೆ ಸಾಕು!
ಹೌದು, ಗುಜರಾತಿನ ಅಹ್ಮದಾಬಾದಿನ ಸೆಜೆಲ್ ಶಾ ಎಂಬ ವ್ಯಕ್ತಿ ತಮ್ಮ ಕಾರಿಗೆ ಸಂಪೂರ್ಣವಾಗಿ ಸಗಣಿ ಮೆತ್ತಿಸಿಕೊಂಡಿದ್ದಾರೆ. ಇದರಿಂದ ಕಾರಿನ ಒಳಗೆ ತಂಪಾಗಿರುತ್ತದೆ ಎನ್ನುತ್ತಾರೆ ಶಾ.
ಆದರೆ ಸೆಜಲ್ ಅವರ ಈ ಉಪಾಯವನ್ನು ಹಲವರು ಟೀಕಿಸಿ, ಅಪಹಾಸ್ಯವನ್ನೂ ಮಾಡಿದ್ದಾರೆ.

ಗ್ರಾಮೀಣ ಭಾರತದಲ್ಲಿ ಮನೆಯಗಳಲ್ಲಿ ಈಗಲೂ ಸಗಣಿಯಿಂದ ಮನೆಯನ್ನು ಸ್ವಚ್ಛಗೊಳಿಸುವ ಪರಿಪಾಠವಿದೆ. ಇದರಿಂದ ಮನೆ ತಂಪಾಗಿರುತ್ತದೆ ಎಂಬುದನ್ನು ಗ್ರಾಮೀಣ ಜನರು ಅನುಭವದಿಂದ ಕಂಡುಕೊಂಡಿದ್ದಾರೆ.
ಇದನ್ನೇ ಗಮದಲ್ಲಿಟ್ಟುಕೊಂಡು ಸೇಜಲ್ ತಮ್ಮ ಕಾರಿಗೂ ಸಗಣಿ ಮೆತ್ತಿಸಿಕೊಂಡಿದ್ದಾರೆ.












Click it and Unblock the Notifications