• search
 • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮಿತ್ ಶಾ ನಿಜವಾದ ಕರ್ಮಯೋಗಿ ಮತ್ತು ಭಾರತದ ಉಕ್ಕಿನ ಮನುಷ್ಯ: ಅಂಬಾನಿ

|

ಗಾಂಧೀನಗರ್ (ಗುಜರಾತ್), ಆಗಸ್ಟ್ 30: "ಕೇಂದ್ರ ಗೃಹ ಸಚಿವ ಅಮಿತ್ ಶಾ ನಿಜವಾದ ಕರ್ಮಯೋಗಿ ಮತ್ತು ಭಾರತದ ಉಕ್ಕಿನ ಮನುಷ್ಯ" ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಗುರುವಾರ ಹಾಡಿ ಹೊಗಳಿದ್ದಾರೆ. ಅಂದಹಾಗೆ, ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲಾಗುತ್ತದೆ.

ಪಂಡಿತ್ ದೀನ್ ದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮುಕೇಶ್ ಅಂಬಾನಿ, ಅಮಿತ್ ಭಾಯ್ ನೀವು ನಿಜವಾದ ಕರ್ಮ ಯೋಗಿ. ನೀವು ದೇಶದ ನಿಜವಾದ ಉಕ್ಕಿನ ಮನುಷ್ಯ. ಮೊದಲಿಗೆ ಗುಜರಾತ್ ಗೆ, ಈಗ ಭಾರತಕ್ಕೆ ನಿಮ್ಮಂಥ ನಾಯಕರು ಸಿಕ್ಕಿರುವುದು ಆಶೀರ್ವಾದದಂತೆ ಎಂದು ಅವರು ಹೇಳಿದ್ದಾರೆ.

ಭಾರತ ಈಗ ಸುರಕ್ಷಿತವಾದ ಕೈಗಳಲ್ಲಿ ಇದೆ ಎಂದ ಅಂಬಾನಿ, ಅಡೆತಡೆಗಳ ಕಾರಣಕ್ಕೆ ನಿಮ್ಮ ಗುರಿಯನ್ನು ಕಡಿಮೆ ಮಾಡಿಕೊಳ್ಳಬೇಡಿ. ದೊಡ್ಡ ಕನಸುಗಳನ್ನು ಕಾಣಲು ಹಿಂಜರಿಯಬೇಡಿ. ನಿಮ್ಮ ಗುರಿ ಹಾಗೂ ಕನಸುಗಳನ್ನು ಈಡೇರಿಸಲು ನಾಳಿನ ಭಾರತವು ಅಗಾಧ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಅವರು ಹೇಳಿದರು.

   ಮೋದಿ ಮತ್ತು ಅಮಿತ್ ಶಾ ರನ್ನು ಕೊನೆಯ ಬಾರಿ ಹೊಗಳಿದ್ದ ಅರುಣ್ ಜೇಟ್ಲಿ..? | Arun Jaitley

   ಕೇಂದ್ರ ಸಚಿವರಾದ ಅಮಿತ್ ಶಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. 2014ರ ತನಕ ಭಾರತದ ಆರ್ಥಿಕತೆ ರಕ್ಷಣೆಗೆ ಯಾವುದೇ ಪ್ರಯತ್ನ ಆಗಿಲ್ಲ. ಕಳೆದ ಐದು ವರ್ಷಗಳಲ್ಲಿ ನಾವು ಭಾರತವನ್ನು ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನಾಗಿ ಮಾಡಿದ್ದೇವೆ ಎಂದರು.

   ಭಾರತವನ್ನು ಐದು ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆ ಮಾಡಬೇಕು ಎಂಬ ನರೇಂದ್ರ ಮೋದಿ ಸರಕಾರದ ಗುರಿಯನ್ನು ಮುಕೇಶ್ ಅಂಬಾನಿ ಬೆಂಬಲಿಸಿದರು.

   English summary
   Reliance industries chairman Mukesh Ambani praises union minister Mukesh Ambani as true Karmayogi, true Iron man of India.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X