ಹನುಮ ಜಯಂತಿ 2022: ಗುಜರಾತ್‌ನಲ್ಲಿ 108 ಅಡಿ ಎತ್ತರದ ಹನುಮನ ಪ್ರತಿಮೆ ಲೋಕಾರ್ಪಣೆ
ಗುಜರಾತ್, ಏಪ್ರಿಲ್ 16 : ದೇಶಾದ್ಯಂತ ಬಹಳ ಸಡಗರ ಸಂಭ್ರಮದಿಂದ ಹನುಮ ಜಯಂತಿಯನ್ನ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಹನುಮ ಜಯಂತಿ ಪ್ರಯುಕ್ತವಾಗಿ 108 ಅಡಿ ಎತ್ತರದ ಹನುಮನ ಪ್ರತಿಮೆಯನ್ನ ಅನಾವರಣಗೊಳಿಸಿದ್ದಾರೆ.
शक्ति, साहस और संयम के प्रतीक भगवान हनुमान की जयंती पर सभी देशवासियों को अनेकानेक शुभकामनाएं। पवनपुत्र की कृपा से हर किसी का जीवन बल, बुद्धि और विद्या से सदा परिपूर्ण रहे।
— Narendra Modi (@narendramodi) April 16, 2022
ಗುಜರಾತ್‌ನ ಮೋರ್ಬಿ ಜಿಲ್ಲೆಯಲ್ಲಿ 108 ಅಡಿ ಎತ್ತರದ ಹನುಮನ ಪ್ರತಿಮೆಯನ್ನ ಶನಿವಾರ ಪ್ರಧಾನಿ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಲೋಕಾರ್ಪಣೆ ಮಾಡಿದ್ದಾರೆ. ವಿಶೇಷ ಎಂದರೆ ಹನುಮಾನ್ ಚಾರ್‌ಧಾಮ್ ಯೋಜನೆಯ ಭಾಗವಾಗಿ ದೇಶದ ನಾಲ್ಕು ಕಡೆ ಸ್ಥಾಪಿಸಲಾದ ನಾಲ್ಕು ಹನುಮನ ಪತ್ರಿಮೆಗಳಲ್ಲಿ ಇದು ಎರಡನೇಯ ಪ್ರತಿಮೆಯಾಗಿದೆ. ಕಳೆದ ವರ್ಷ ಶಿಮ್ಲಾದಲ್ಲಿ ಮೊದಲನೇಯ ಹನುಮನ ಪ್ರತಿಮೆ ಅನಾವರಣ ಮಾಡಲಾಗಿತ್ತು. ಇಂದು ಮೋರ್ಬಿಯಲ್ಲಿ ಎರಡನೇ ಪ್ರತಿಮೆ ಲೋಕಾರ್ಪಣೆಯಾಗಿದೆ. ಇನ್ನೆರಡು ಹನುಮನ ಪ್ರತಿಮೆ ರಾಮೇಶ್ವರ ಹಾಗೂ ಪಶ್ಚಿಮ ಬಂಗಾಳದಲ್ಲಿ ಅನಾವರಣಗೊಳ್ಳಲಿದೆ.

ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಹನುಮನ ಜಯಂತಿಯಂದು ಭಗವಂತ ಹನುಮನ ಪ್ರತಿಮೆ ಉದ್ಘಾಟನೆ ಮಾಡುವ ಅವಕಾಶ ಸಿಕ್ಕಿದ್ದು, ನನ್ನ ಸೌಭಾಗ್ಯ ಎಂದಿದ್ದಾರೆ. ಅಲ್ಲದೆ ರಾಮ ಭಕ್ತನ ಕಥೆಗಳನ್ನ ವಿವಿಧ ಭಾಷೆ, ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯಾಗಿ ಹೇಳಲಾಗಿದೆ. ಆದ್ರೆ ಎಲ್ಲಾ ಭಾಷೆಯಲ್ಲೂ ಒಂದೇ ರೀತಿಯ ಸಾರಂಶವನ್ನ ನೀಡುತ್ತದೆ. ಎಲ್ಲರನ್ನೂ ಒಟ್ಟುಗೂಡಿಸುತ್ತದೆ. ಇದು ಭಾರತೀಯ ನಂಬಿಕೆಯ ಶಕ್ತಿ, ನಮ್ಮ ಆಧ್ಮಾತ್ಮಿಕತೆ, ನಮ್ಮ ಸಂಸ್ಕೃತಿ, ನಮ್ಮ ಸಂಪ್ರದಾಯ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ.
Inaugurating a 108 feet statue of Hanuman ji in Morbi, Gujarat. https://t.co/6M0VOXXPmk
— Narendra Modi (@narendramodi) April 16, 2022

ಇನ್ನು ಹನುಮನ ಜಯಂತಿ ಪ್ರಯುಕ್ತ ದೇಶದ ಜನತೆಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿ ಶುಭ ಕೋರಿದ್ದಾರೆ. ಶಕ್ತಿ, ಧೈರ್ಯ ಮತ್ತು ಸಂಯಮದ ಸಂಕೇತವಾದ ಭಗವಾನ್ ಹನುಮಾನ್ ಜಯಂತಿಯನ್ನ ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ. ದೇಶದ ಜನರಿಗೆ ಪವನಪುತ್ರನ ಅನುಗ್ರಹ ದೊರೆಯಲಿ ಪ್ರತಿಯೊಬ್ಬರ ಜೀವನವು ಯಾವಾಗಲೂ ಶಕ್ತಿ, ಬುದ್ದಿವಂತಿಕೆ, ಜ್ಞಾನದಿಂದ ತುಂಬಿರಲಿ ಅಂತ ದೇಶದ ಜನರಿಗೆ ಹನುಮ ಜಯಂತಿಯ ಶುಭ ಕೋರಿದ್ದಾರೆ.












Click it and Unblock the Notifications