ಕಚ್‌ನಲ್ಲಿ ಪಾಕ್‌ ರಹಸ್ಯ ಡ್ರೋಣ್ ಹೊಡೆದುರುಳಿಸಿದ ಭಾರತ ಸೇನೆ

Recommended Video

      Surgical Strike 2: ಪಾಕಿಸ್ತಾನಿ ಡ್ರೋಣ್ ಗುಜರಾತ್‍ನ ಕಛ್‍ನಲ್ಲಿ ಉಡೀಸ್ | Oneindia Kannada

      ಅಹಮದಾಬಾದ್, ಫೆಬ್ರವರಿ 26: ಪಾಕಿಸ್ತಾನಿ ಸ್ಪೈ ಡ್ರೋನ್‌ ಒಂದನ್ನು ಭಾರತೀಯ ಸೇನೆ ಗುಜರಾತ್‌ನ ಕಚ್ ಭಾಗದಲ್ಲಿ ಹೊಡೆದುರುಳಿಸಿದ್ದಾರೆ.

      ಒಂದೆಡೆ ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಆಕ್ರಮಿತ ಪ್ರದೇಶದ ಮೇಲೆ ಮಿಂಚಿನ ಸರ್ಜಿಕಲ್ ಸ್ಟ್ರೈಕ್ ನಡೆಸಿದರೆ ಇನ್ನೊಂದೆಡೆ ನಮ್ಮ ದೇಶದ ಮೇಲೆ ನಿಗಾ ಇಡಲು ಪಾಕಿಸ್ತಾನ ಬಳಸಿದ್ದ ರಹಸ್ಯ ಡ್ರೋಣ್ ಒಂದನ್ನು ಭಾರತೀಯ ಸೇನೆಯು ಹೊಡೆದುರುಳಿಸಿದೆ.

      Pakistani drone shot down in Gujarat

      ಪುಲ್ವಾಮಾ ಉಗ್ರರ ದಾಳಿಗೆ ಪ್ರತೀಕಾರವಾಗಿ ಫೆಬ್ರವರಿ 26 ಮಂಗಳವಾರ ಮುಂಜಾನೆ ಪಾಕ್ ಅಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳಿಗೆ ಭಾರತೀಯ ವಾಯುಪಡೆಯು ದಾಳಿಯನ್ನು ನಡೆಸಿತ್ತು. ಇದರಲ್ಲಿ 200ರಿಂದ 300ರಷ್ಟು ಉಗ್ರರನ್ನು ಹತ್ಯೆಗೈಯಲಾಗಿದೆಯೆಂದು ಅಂದಾಜಿಸಲಾಗಿದೆ.

      ಕಳೆದ ಕೆಲವು ದಿನಗಳಿಂದ ಉಗ್ರರ 13 ಅಡಗುತಾಣಗಳ ಮೇಲೆ ಭಾರತೀಯ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸುತ್ತಿತ್ತು. ಇದರಲ್ಲಿ ಬಾಲಾಕೋಟ್ ನಲ್ಲಿರುವ ಅಡಗುತಾಣವನ್ನೂ ಭಾರತೀಯ ಸೇನೆ ಹೊಡೆದುರುಳಿಸಿದೆ.

      ಗುಜರಾತ್‌ನ ಕಚ್ ನ ಅಬಾಸಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈಗಾಗಲೇ ತನಿಖೆ ಆರಂಭವಾಗಿದೆ. ಅದ ಪಾಕಿಸ್ತಾನಿ ಸ್ಪೈ ಡ್ರೋಣ್ ಹೌದು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಬೆಳಗ್ಗೆ ಸುಮಾರು 6.30ರ ವೇಳೆ ಹೊಡೆದುರುಳಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+