ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೀಸ್ತಾ ಸೆಟಲ್ವಾಡ್ ಮತ್ತಿತರರ ವಿರುದ್ಧ ಗುಜರಾತ್ ಎಸ್‌ಐಟಿಯಿಂದ ಚಾರ್ಜ್‌ಶೀಟ್

|
Google Oneindia Kannada News

ಅಹ್ಮದಾಬಾದ್, ಸೆ. 21: ಗುಜರಾತ್ ಗಲಭೆ ಘಟನೆ ಸಂಬಂಧ ಅಮಾಯಕರನ್ನು ಸಿಲುಕಿಸಲು ಸಾಕ್ಷ್ಯಾಧಾರ ತಿರುಚಿದ ಆರೋಪದ ಪ್ರಕರಣದಲ್ಲಿ ತೀಸ್ತಾ ಸೆಟಲ್ವಾಡ್ ಸೇರಿದಂತೆ ಮೂವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಗುಜರಾತ್ ಪೊಲೀಸ್‌ನ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಂಗಳವಾರ ಅಹ್ಮದಾಬಾದ್ ಕೋರ್ಟ್‌ಗೆ ತೀಸ್ತಾ ಸೆಟಲ್ವಾಡ್, ನಿವೃತ್ತ ಡಿಜಿಪಿ ಆರ್.ಬಿ. ಶ್ರೀಕುಮಾರ್, ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ವಿರುದ್ಧ ಆರೋಪಪಟ್ಟಿ ಸಲ್ಲಿಕೆ ಮಾಡಿತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

2002ರಲ್ಲಿ ಗುಜರಾತ್ ಗಲಭೆ ಘಟನೆಗಳು ಸಂಭವಿಸಿದ್ದವು. ಮುಸ್ಲಿಮರ ಮೇಲೆ ದಾಳಿ ಮಾಡಲು ಗಲಭೆಕೋರರಿಗೆ ಸರಕಾರಿ ಯಂತ್ರಗಳೇ ಕುಮ್ಮಕ್ಕು ಕೊಟ್ಟಿದ್ದವು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಅಂದಿನ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಮತ್ತಿತರ ಮೇಲೆ ಪ್ರಕರಣಗಳು ದಾಖಲಾಗಿದ್ದವು. ಆದರೆ, ಗಲಭೆ ನಡೆಸಿದ್ದ ಎಸ್‌ಐಟಿ ಮೋದಿ ಮತ್ತಿತರರಿಗೆ ಕ್ಲೀನ್ ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಂಡಿತು.

2016ರ ಪ್ರಕರಣದಲ್ಲಿ ಗುಜರಾತ್ ಶಾಸಕ ಜಿಗ್ನೇಶ್‌ಗೆ 6 ತಿಂಗಳ ಜೈಲು2016ರ ಪ್ರಕರಣದಲ್ಲಿ ಗುಜರಾತ್ ಶಾಸಕ ಜಿಗ್ನೇಶ್‌ಗೆ 6 ತಿಂಗಳ ಜೈಲು

ಸುಪ್ರೀಂಕೋರ್ಟ್ ತೀರ್ಪು ಬಂದ ಬೆನ್ನಲ್ಲೇ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಆರ್.ಬಿ. ಶ್ರೀಕುಮಾರ್ ಮತ್ತು ಸಂಜೀವ್ ಭಟ್ ಮೇಲೆ ಅಹ್ಮದಾಬಾದ್ ಕ್ರೈಂ ಬ್ರ್ಯಾಂಚ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ 1990ರ ಲಾಕಪ್ ಡೆತ್ ಕೇಸ್ ಪ್ರಕರಣವೊಂದರಲ್ಲಿ ತಪ್ಪಿತಸ್ಥರಾಗಿ ಬಂಧನದಲ್ಲಿದ್ದಾರೆ. ತೀಸ್ತಾ ಸೆಟಲ್ವಾಡ್ ಮತ್ತು ಶ್ರೀಕುಮಾರ್ ಇಬ್ಬರನ್ನೂ ಜೂನ್ 25ರಂದು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಸೆಪ್ಟೆಂಬರ್ 2ರಂದು ತೀಸ್ತಾಗೆ ಜಾಮೀನು ಸಿಕ್ಕಿ ಬಿಡುಗಡೆಯಾಗಿದ್ದಾರೆ.

Gujarat SIT Files Chargesheet at Ahmedabad Court Against Teesta Setalvad and 2 Others

ಶ್ರೀಕುಮಾರ್ ಕೂಡ ಜಾಮೀನಿಗೆ ಮನವಿ ಮಾಡಿದ್ದು ಅವರ ಅರ್ಜಿ ವಿಚಾರಣೆ ಮುಂದಿನ ವಾರ, ಅಂದರೆ ಸೆಪ್ಟೆಂಬರ್ 28ರಂದು ಹೈಕೋರ್ಟ್ ಕೈಗೆತ್ತಿಕೊಳ್ಳಲಿದೆ.

ಸುಪ್ರೀಂಕೋರ್ಟ್ ಹೇಳಿದ್ದೇನು?
ಗುಜರಾತ್ ಗಲಭೆ ಘಟನೆಯೊಂದರಲ್ಲಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಹತ್ಯೆಯಾಗಿದ್ದರು. ಅವರ ಪತ್ನಿ ಜಾಕಿಯಾ ಜಾಫ್ರಿ ಪ್ರಕರಣ ದಾಖಲಿಸಿದ್ದರು. ಅಂದಿನ ಸಿಎಂ ನರೇಂದ್ರ ಮೋದಿ ಮತ್ತಿತರರು ಗಲಭೆಗಳಿಗೆ ಕುಮ್ಮಕ್ಕು ಕೊಟ್ಟಿದ್ದಾರೆ ಎಂದು ಆರೋಪಿಸಿ, ಮತ್ತು ಎಸ್‌ಐಟಿಯಿಂದ ಕ್ಲೀನ್ ಚಿಟ್ ಸಿಕ್ಕಿದ್ದನ್ನು ಆಕ್ಷೇಪಿಸಿ ಜಾಕಿಯಾ ಜಾಫ್ರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದರು.

ತೀಸ್ತಾ ಸೆಟಲ್ವಾಡ್ ಯಾರು? ಈಕೆಯ ಹೋರಾಟ, ವಿವಾದಗಳ ಸುತ್ತಮುತ್ತ...ತೀಸ್ತಾ ಸೆಟಲ್ವಾಡ್ ಯಾರು? ಈಕೆಯ ಹೋರಾಟ, ವಿವಾದಗಳ ಸುತ್ತಮುತ್ತ...

ಅದರ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ, "ಗುಜರಾತ್ ರಾಜ್ಯದ ಅಸಂತುಷ್ಟ ಅಧಿಕಾರಿಗಳು ಮತ್ತಿತರರು ಸೇರಿಕೊಂಡು ಸುಳ್ಳು ಮಾಹಿತಿ ಹಬ್ಬಿಸಿ ಅಪಪ್ರಚಾರ ಮಾಡಿದಂತೆ ತೋರುತ್ತದೆ... ಈ ರೀತಿ ಅಧಿಕಾರ ದುರುಪಯೋಗದಲ್ಲಿ ನಿರತರಾದವರು ನ್ಯಾಯಾಂಗದ ವಿಚಾರಣೆಗೆ ಒಳಗಾಗಬೇಕಾಗುತ್ತದೆ" ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿತ್ತು.

ಅದರ ಬೆನ್ನಲ್ಲೇ ತೀಸ್ತಾ ಸೆಟಲ್ವಾಡ್, ಶ್ರೀಕುಮಾರ್ ಮತ್ತು ಸಂಜೀವ್ ಭಟ್ ವಿರುದ್ಧ ಐಪಿಸಿ ಸೆಕ್ಷನ್ 468, 471, 194, 211, 218 ಮತ್ತು 129(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಸೆಕ್ಷನ್ 471 ಫೋರ್ಜರಿಗೆ ಸಂಬಂಧಿಸಿದ್ದಾಗಿದೆ. ಸೆಕ್ಷನ್ 211 ಗಾಯಗೊಳಿಸುವ ಉದ್ದೇಶದ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ್ದಾಗಿದೆ. ಸೆಕ್ಷನ್ 218 ಎಂಬುದು ವ್ಯಕ್ತಿಯನ್ನು ಶಿಕ್ಷೆಯಿಂದ ಉಳಿಸಲು ತಪ್ಪಾದ ಮಾಹಿತಿ ನೀಡುವ ಸರಕಾರಿ ನೌಕರನಿಗೆ ಸಂಬಂಧಿಸಿದ್ದಾಗಿದೆ.

Gujarat SIT Files Chargesheet at Ahmedabad Court Against Teesta Setalvad and 2 Others

ಬಿಲ್ಕಿಸ್ ಬಾನೋ ಪ್ರಕರಣದ ಕೈದಿಗಳ ಬಿಡುಗಡೆ
ಗುಜರಾತ್ ಗಲಭೆ ಘಟನೆಗಳಲ್ಲಿ ಒಂದಾದ ಬಿಲ್ಕಿಸ್ ಬಾನೋ ಗ್ಯಾಂಗ್‌ರೇಪ್ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿ ಅಪರಾಧಿಗಳನ್ನು ಕಳೆದ ತಿಂಗಳು ಗುಜರಾತ್ ಸರಕಾರ ಬಿಡುಗಡೆ ಮಾಡಿದ್ದು ದೊಡ್ಡ ವಿವಾದಕ್ಕೆ ಮತ್ತು ಚರ್ಚೆಗೆ ಕಾರಣವಾಗಿತ್ತು.

ಈ ಅಪರಾಧಿಗಳು 14 ವರ್ಷ ಜೈಲುಶಿಕ್ಷೆ ಪೂರ್ಣಗೊಳಿಸಿರುವುದು, ಅವರ ವಯಸ್ಸು, ಅಪರಾಧದ ಸ್ವರೂಪ, ಕಾರಾಗೃಹದಲ್ಲಿ ಅವರ ನಡವಳಿಕೆ ಮತ್ತಿತರ ಸಂಗತಿಗಳನ್ನು ಪರಿಗಣಿಸಿ ಗೋಧ್ರಾ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.

2002, ಮಾರ್ಚ್ 3ರಂದು ಬಿಲ್ಕಿಸ್ ಬಾನೊ ಅವರನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿತ್ತು. ಅಕೆಯ 3 ವರ್ಷದ ಮಗು ಸೇರಿ 14 ಮಂದಿಯನ್ನು ದುರುಳರು ಹತ್ಯೆಗೈದಿದ್ದರು. ಅತ್ಯಾಚಾರವಾದಾಗ ಬಿಲ್ಕಿಸ್ ಬಾನೊ ಗರ್ಭಿಣಿಯಾಗಿದ್ದರು..

(ಒನ್ಇಂಡಿಯಾ ಸುದ್ದಿ)

English summary
Gujarat SIT has filed chargesheet against activist Teesta Setalwad, Ret DGP RB Shreekumar and Former IPS officer Sanjiv Bhatt in the case connected to forgery and cheating during 2002 Gujarat riot incidents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X