ಕೆಟ್ಟ ಹೇರ್ ಕಟ್ ನಾಂದಿಯಾಯಿತು ಗಿನ್ನೆಸ್ ವಿಶ್ವ ದಾಖಲೆಗೆ

ಅಹ್ಮದಾಬಾದ್ (ಗುಜರಾತ್), ಡಿಸೆಂಬರ್ 24: ಒಂದು ದಿನ ಮಾಡಿದ ಕೆಟ್ಟ ಹೇರ್ ಕಟ್ ಕೂಡ ಹೇಗೆ ಒಂದು ಸಾಧನೆಗೆ ಮುನ್ನುಡಿ ಬರೆಯುತ್ತದೆ ಎಂಬುದಕ್ಕೆ ಇಲ್ಲಿ ಉದಾಹರಣೆ ಇದೆ. ಆಕೆ ಹೆಸರು ನೀಲಾಂಶಿ ಪಟೇಲ್. ಹತ್ತು ವರ್ಷದ ಹಿಂದೆ ಕೆಟ್ಟದಾಗಿ ಹೇರ್ ಕಟ್ ಮಾಡಿದರು ಎಂಬ ಸಿಟ್ಟಲ್ಲಿ ಇನ್ನು ತನ್ನ ಕೇಶದ ಮೇಲೆ ಕತ್ತರಿ ಆಡಿಸಲು ಬಿಡಲ್ಲ ಎಂದು ನಿರ್ಧಾರ ಮಾಡಿದ್ದಾರೆ.

ಇದೀಗ ಹದಿನಾರು ವರ್ಷದ ಆಕೆ ಗಿನ್ನೆಸ್ ಬುಕ್ ನಲ್ಲಿ ತಮ್ಮ ಅತ್ಯಂತ ಉದ್ದದ ಕೇಶದ ಮೂಲಕ ಸ್ಥಾನ ಪಡೆದಿದ್ದಾರೆ. ಹದಿಹರೆಯದವರ (ಟೀನೇಜರ್) ವಿಭಾಗದಲ್ಲಿ ನೀಲಾಂಶಿ ಪಟೇಲ್ ಸ್ಥಾನ ಪಡೆದಿದ್ದಾರೆ. ಅವರ ತಲೆಗೂದಲ ಎತ್ತರ 5 ಅಡಿ 7 ಇಂಚು. "ನನಗೆ ಬಹಳ ಕೆಟ್ಟದಾಗಿ ಹೇರ್ ಕಟ್ ಮಾಡಿದ್ದರು. ಆ ನಂತರ ನನ್ನ ತಲೆಗೂದಲ ಮೇಲೆ ಕತ್ತರಿ ಆಡಿಸಲು ಬಿಡಲ್ಲ ಎಂದು ನಿರ್ಧರಿಸಿದೆ. ಆಗ ನನಗೆ ಆರು ವರ್ಷ ವಯಸ್ಸು. ಆಗಿನಿಂದ ಹೇರ್ ಕಟ್ ಮಾಡಿಸಿಲ್ಲ" ಎಂದು ವಿವರಣೆ ನೀಡುತ್ತಾರೆ.

ನೀಲಾಂಶಿಗೆ ತಲೆ ಸ್ನಾನ ಮಾಡುವುದಕ್ಕೆ, ಬಾಚುವುದಕ್ಕೆ ತಾಯಿ ನೆರವಾಗುತ್ತಾರಂತೆ. "ನನ್ನ ಈ ಉದ್ದ ಕೂದಲಿಂದ ಬಹಳ ಕಷ್ಟ ಎದುರಿಸಿದ್ದೀನಿ ಎಂದು ಜನರು ಭಾವಿಸುತ್ತಾರೆ. ಆದರೆ ನಾನು ಯಾವುದೇ ಸಮಸ್ಯೆ ಪಟ್ಟಿಲ್ಲ. ಆಟ ಆಡ್ತೀನಿ ಹಾಗೂ ಬೇರೆಲ್ಲವನ್ನೂ ಮಾಡ್ತೀನಿ. ಈ ಕೇಶರಾಶಿ ನನ್ನ ಪಾಲಿಗೆ ಸೌಂದರ್ಯ ಎನ್ನುತ್ತಾರೆ ನೀಲಾಂಶಿ.

Gujarats Nilanshi Patel sets world record with 5 foot 7 inch hair

ಯಾವುದಾದರೂ ಕಾರ್ಯಕ್ರಮಕ್ಕೆ ಹೋಗುವಾಗ, ಟೇಬಲ್ ಟೆನಿಸ್ ಆಡುವಾಗ ಕೂದಲನ್ನು ಸುರುಳಿ ಸುತ್ತಿ, ಬನ್ ನಂತೆ ತಲೆಯ ಮೇಲೆ ಕಟ್ಟಿಕೊಳ್ಳುತ್ತೇನೆ. ಅದು ನನಗೆ ಆರಾಮವಾಗಿ ಇರುತ್ತದೆ ಎನ್ನುತ್ತಾರೆ ನೀಲಾಂಶಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+