ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಸೋಂಕಿತನ ಭೇಟಿ: ಗುಜರಾತ್ ಮುಖ್ಯಮಂತ್ರಿ ಕ್ವಾರಂಟೈನ್ ಗೆ

|
Google Oneindia Kannada News

ಅಹಮದಾಬಾದ್, ಏಪ್ರಿಲ್ 15 (ಪಿಟಿಐ): ಮುಂಜಾಗೃತಾ ಕ್ರಮವಾಗಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಕ್ವಾರಂಟೈನ್ ಗೆ ಒಳಪಟ್ಟಿದ್ದಾರೆಂದು, ಸರಕಾರದ ಮುಖ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಬುಧವಾರ ಕೋವಿಡ್ 19 ಪರೀಕ್ಷೆಗೆ ಒಳಪಟ್ಟ ನಂತರ, ಕ್ವಾರಂಟೈನ್ ಗೆ ಒಳಪಡುವ ನಿರ್ಧಾರಕ್ಕೆ ಸಿಎಂ ರೂಪಾನಿ ಬಂದಿದ್ದಾರೆ. ಸರಕಾರದ ಎಲ್ಲಾ ಕೆಲಸಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ರೂಪಾನಿ ನಿರ್ವಹಿಸಲಿದ್ದಾರೆ.

ಗುಜರಾತ್ ಸಿಎಂ ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಶಾಸಕರಿಗೆ ಕೊರೊನಾ ದೃಢಗುಜರಾತ್ ಸಿಎಂ ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಶಾಸಕರಿಗೆ ಕೊರೊನಾ ದೃಢ

ಗಾಂಧಿನಗರದಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ, ಕಾಂಗ್ರೆಸ್ ನಾಯಕರು ಸಿಎಂ ರೂಪಾನಿಯನ್ನು ಭೇಟಿ ಮಾಡಿದ್ದರು. ಇವರಲ್ಲಿ ಶಾಸಕ ಇಮ್ರಾನ್ ಖೇಡಾವಾಲಾ ಕೂಡಾ ಒಬ್ಬರು.

Coronavirus: Gujarat CM Vijay Rupani in self-quarantine after meeting with Covid-19 positive MLA

ಮಂಗಳವಾರ ಬೆಳಿಗ್ಗೆ ಕರೆಯಲಾಗಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ಕಾಂಗ್ರೆಸ್ ಶಾಸಕ ಖೇಡಾವಾಲಾ ಅವರಿಗೆ ಸಂಜೆ ವೇಳೆಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿತ್ತು.

ಖಾದಿಯಾ-ಜಮಾಲ್‌ಪುರ ಕ್ಷೇತ್ರದ ಶಾಸಕರಾಗಿರುವ ಖೇಡಾವಾಲಾ ಅವರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಜರಾತ್ ನಲ್ಲಿ ಕೊರೊನಾಗೆ ಇಬ್ಬರು ಇದುವರೆಗೆ ಬಲಿಯಾಗಿದ್ದಾರೆ.

Fake News: ಒಂದೊಂದು ಧರ್ಮದವರಿಗೆ ಒಂದೊಂದು ಐಸೋಲೇಟೆಡ್ ವಾರ್ಡ್!Fake News: ಒಂದೊಂದು ಧರ್ಮದವರಿಗೆ ಒಂದೊಂದು ಐಸೋಲೇಟೆಡ್ ವಾರ್ಡ್!

"ಸಿಎಂ ವಿಜಯ್ ರೂಪಾನಿ ಆರೋಗ್ಯವಾಗಿದ್ದಾರೆ, ಅವರಿಗೆ ಯಾವುದೇ ರೋಗದ ಲಕ್ಷಣಗಳಿಲ್ಲ. ಆದರೆ, ಸುರಕ್ಷಿತಾ ಕ್ರಮವಾಗಿ ಅವರನ್ನು ಭೇಟಿಯಾಗಲು ನಿರ್ಬಂಧನೆ ವಿಧಿಸಲಾಗಿದೆ" ಎಂದು ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಹೇಳಿದ್ದಾರೆ.

English summary
Coronavirus: Gujarat CM Vijay Rupani in self-quarantine after meeting with Covid-19 positive MLA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X