ಭಾಷಣ ಮಾಡುವಾಗಲೇ ಕುಸಿದುಬಿದ್ದ ಗುಜರಾತ್ ಮುಖ್ಯಮಂತ್ರಿ

ವಡೋದರ, ಫೆಬ್ರವರಿ 15: ಚುನಾವಣಾ ಪ್ರಚಾರ ಸಮಾವೇಶವೊಂದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರು ವೇದಿಕೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ವಡೋದರಾದ ನಿಜಾಂಪುರದಲ್ಲಿ ಭಾನುವಾರ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯ ಸಮಾವೇಶದಲ್ಲಿ ಮಾತನಾಡುತ್ತಿದ್ದಾಗ ಅವರು ಅಸ್ವಸ್ಥರಾಗಿದ್ದಾರೆ.

ವೇದಿಕೆಯಲ್ಲಿಯೇ ರೂಪಾಣಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಸುಧಾರಿಸಿಕೊಂಡ ಅವರು ಸ್ವತಃ ಮೆಟ್ಟಿಲಿನಿಂದ ಕೆಳಕ್ಕೆ ಇಳಿದಿದ್ದಾರೆ. ವಡೋದರಾದಲ್ಲಿ ಅವರು ಮೂರನೇ ಬಾರಿ ರಾಜಕೀಯ ಸಮಾವೇಶ ನಡೆಸುತ್ತಿದ್ದರು.

'ಸಾರ್ವಜನಿಕ ಸಭೆಯ ವೇಳೆ ಮಾತನಾಡುವಾಗ ಮುಖ್ಯಮಂತ್ರಿಗಳು ಕುಸಿದುಬಿದ್ದಿದ್ದಾರೆ. ಆಗ ಅವರ ಭದ್ರತಾ ಸಿಬ್ಬಂದಿ ಅವರನ್ನು ಹಿಡಿದುಕೊಂಡಿದ್ದಾರೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಅಹಮದಾಬಾದ್‌ಗೆ ಕರೆದೊಯ್ಯಲು ವಿಮಾನನಿಲ್ದಾಣದಕ್ಕೆ ಸಾಗಿಸಲಾಯಿತು' ಎಂದು ಬಿಜೆಪಿ ನಾಯಕ ಭರತ್ ದಾಂಗೆರ್ ತಿಳಿಸಿದ್ದಾರೆ.

'ರೂಪಾಣಿ ಅವರ ಆರೋಗ್ಯ ಎರಡು ದಿನಗಳಿಂದ ಅಷ್ಟೇನೂ ಚೆನ್ನಾಗಿರಲಿಲ್ಲ. ಆದರೆ ಶನಿವಾರ ಜಾಮ್ನಗರ ಮತ್ತು ಭಾನುವಾರ ವಡೋದರದಲ್ಲಿನ ಸಾರ್ವಜನಿಕ ಸಭೆಗಳನ್ನು ಅವರು ರದ್ದುಗೊಳಿಸುವ ಬದಲು ಅವುಗಳಲ್ಲಿ ಪಾಲ್ಗೊಂಡರು. ಈಗ ಅವರು ಚೇತರಿಸಿಕೊಂಡಿದ್ದಾರೆ' ಎಂದು ಹೇಳಿದ್ದಾರೆ.

 Gujarat CM Vijay Rupani Faints And Collapses On Stage At Poll Rally

ಅನಾರೋಗ್ಯದ ನಡುವೆಯೂ ಸತತ ಸಭೆಗಳಲ್ಲಿ ಭಾಗವಹಿಸಿದ್ದರಿಂದ ಅವರಲ್ಲಿ ಬಳಲಿಕೆ ಉಂಟಾಗಿದೆ. ಅವರ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಉಂಟಾಗಿಲ್ಲ ಎಂದು ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+