• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರ್ದಾರ್ ಪಟೇಲ್ ಏಕತಾ ಪ್ರತಿಮೆ ಬಳಿ ಉರುಳಿ ಬಿದ್ದ ಬೃಹತ್ ಡೈನೋಸರ್!

|

ಅಹಮದಾಬಾದ್, ಸೆಪ್ಟೆಂಬರ್ 10: ಪ್ರವಾಸಿಗರನ್ನು ಸೆಳೆಯಲು ಗುಜರಾತ್‌ನ ನರ್ಮದಾದಲ್ಲಿ ಏಕತಾ ಪ್ರತಿಮೆ ಸಮೀಪದಲ್ಲಿ ನಿರ್ಮಿಸಲಾಗಿದ್ದ ಬೃಹತ್ ಡೈನೋಸರ್ ಮಾದರಿಯ ಪ್ರತಿಮೆ ನೆಲಕ್ಕುರುಳಿದೆ.

ಡೈನೋಸರ್‌ಅನ್ನು ಹೋಲುವ ಬೃಹತ್ ಪ್ರತಿಮೆಯನ್ನು ಸರ್ದಾರ್ ಪಟೇಲ್ ಪ್ರತಿಮೆಯ ಸಮೀಪದಲ್ಲಿ ನಿರ್ಮಿಸಲಾಗಿತ್ತು. 30 ಅಡಿ ಎತ್ತರದ ಈ ಪ್ರತಿಮೆಯ ನಿರ್ಮಾಣಕ್ಕೆ 2 ಕೋಟಿ ರೂ. ಯೋಜನೆಯನ್ನು ರೂಪಿಸಲಾಗಿದೆ. ಏಕತಾ ಪ್ರತಿಮೆ ಈಗ ಗುಜರಾತ್‌ನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿ ಮಾರ್ಪಟ್ಟಿದೆ. ಹೀಗಾಗಿ ಪ್ರವಾಸೋದ್ಯಮವನ್ನು ಇನ್ನಷ್ಟು ಬೆಳೆಸಲು ಗುಜರಾತ್ ಸರ್ಕಾರ ಸಮೀಪದಲ್ಲಿಯೇ ಬೃಹತ್ ಗಾತ್ರದ ಡೈನೋಸರ್ಅನ್ನು ನಿರ್ಮಿಸಲಾಗಿತ್ತು.

ಭಕ್ತಿಯೋ ವ್ಯವಹಾರವೋ ಜಗತ್ತಿನ ಎಲ್ಲ ಮೂರುತಿಗಳ ಬಗ್ಗೆ ಒಂದಷ್ಟು ವಾರ್ತೆ

ಸುಮಾರು ಒಂದು ತಿಂಗಳಿನಿಂದ ನಿರ್ಮಿಸಲಾಗುತ್ತಿದ್ದ ಡೈನೋಸರ್ ಬಹುತೇಕ ಕಡೆಯ ಹಂತಕ್ಕೆ ತಲುಪಿತ್ತು. ಆದರೆ, ಕಳಪೆ ಕಾಮಗಾರಿಯಿಂದಾಗಿ ಭಾನುವಾರ ಉರುಳಿಬಿದ್ದಿದೆ. ಅದೃಷ್ಟವಷಾತ್ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರು ಯಾವುದೇ ಅಪಾಯವಾಗದೆ ಪಾರಾಗಿದ್ದಾರೆ.

ಈ ಘಟನೆಯು ಯೋಜನೆಯ ಅಗತ್ಯತೆ ಮತ್ತು ಯೋಜನೆಯ ಟೆಂಡರ್ ಪಡೆದುಕೊಂಡ ಗುತ್ತಿಗೆದಾರರ ಕುರಿತು ಪ್ರಶ್ನೆಗಳನ್ನು ಮೂಡಿಸಿದೆ. ಗುಜರಾತ್‌ನಲ್ಲಿ ಪ್ರವಾಸಿಗರನ್ನು ಸೆಳೆಯಲು ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ರಿವರ್ ರಾಫ್ಟಿಂಗ್, ಸಫಾರಿ ಪಾರ್ಕ್ ಸೇರಿದಂತೆ ಬೃಹತ್ ಸಂಖ್ಯೆಯ ಜನರನ್ನು ಸೆಳೆಯುವ ಸಲುವಾಗಿ ಅನೇಕ ಆಕರ್ಷಣೀಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ 597 ಅಡಿ ಎತ್ತರದ ಏಕತಾ ಪ್ರತಿಮೆ ವೀಕ್ಷಿಸಲು ಅಪಾರ ಸಂಖ್ಯೆಯ ಜನರು ಬರುತ್ತಿದ್ದಾರೆ. ಹೀಗಾಗಿ ಪ್ರವಾಸಿಗರನ್ನು ಮತ್ತಷ್ಟು ಸ್ಥಳಗಳತ್ತ ಸೆಳೆಯಲು ಡೈನೋಸರ್‌ ಪ್ರತಿಮೆ ನಿರ್ಮಾಣದಂತಹ ಯೋಜನೆಗಳನ್ನು ರೂಪಿಸಲಾಗಿದೆ.

ವಿಶ್ವದ ಅತೀ ಎತ್ತರದ ಪ್ರತಿಮೆಗಳು: ಭಾರತದ ಏಕತಾ ಪ್ರತಿಮೆಗೆ ಅಗ್ರಸ್ಥಾನ

ಆದರೆ ಇನ್ನೂ ನಿರ್ಮಾಣ ಹಂತದಲ್ಲಿಯೇ ಡೈನೋಸರ್ ಪ್ರತಿಮೆ ನೆಲಕಚ್ಚಿರುವುದು ಕಾಮಗಾರಿಗಳ ಗುಣಮಟ್ಟದ ಬಗ್ಗೆ ಅಸಮಾಧಾನಕ್ಕೆ ಕಾರಣವಾಗಿದೆ.

English summary
A gigantic model of dinosaur built in Gujarat's Narmada near Statue of Unity collapsed on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X