Get Updates
Get notified of breaking news, exclusive insights, and must-see stories!

ಜನತಾ ಕರ್ಫ್ಯೂ ದಿನ ರಸ್ತೆಗೆ ಬಂದ 40 ಮಂದಿ ವಿರುದ್ಧ ಎಫ್‌ಐಆರ್

ಅಹಮದಾಬಾದ್‌, ಮಾರ್ಚ್ 23: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಜನತಾ ಕರ್ಫ್ಯೂ ಯಶಸ್ವಿಯಾಗಿ ಮುಗಿದಿದೆ. ಆದರೆ, ಆ ದಿನ ಸಂಜೆ ಮೋದಿ ಅವರ ಸೂಚನೆ ಮತ್ತು ಕಾನೂನು ಉಲ್ಲಂಘಿಸಿದ 40 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಘಟನೆ ಅಹಮದಾಬಾದ್‌ ಖಾದಿಯಾ ಪ್ರದೇಶದಲ್ಲಿ ನಡೆದಿದೆ.

ಮಾರ್ಚ್ 22 ರಂದು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಜನತಾ ಕರ್ಫ್ಯೂ ಜಾರಿಯಲ್ಲಿತ್ತ. ಅಂದು ಸಂಜೆ 5 ಗಂಟೆಗೆ, ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಮತ್ತು ಅದಕ್ಕೆ ಸಹಕರಿಸುತ್ತಿರುವ ಎಲ್ಲ ಸಿಬ್ಬಂದಿ ವರ್ಗಕ್ಕೂ ಧನ್ಯವಾದ ಹೇಳವ ಸಲುವಾಗಿ 5 ನಿಮಿಷಗಳ ಕಾಲ ನಿಮ್ಮ ಮನೆಯ ಬಾಗಿಲು, ಕಿಟಕಿ ಅಥವಾ ಬಾಲ್ಕನಿ, ಮಹಡಿ ಬಳಿ ಬಂದು ಚಪ್ಪಾಳೆ ಹೊಡೆಯಬೇಕು ಅಥವಾ ಗಂಟೆ ಬಾರಿಸಬೇಕು ಎಂದು ಮೋದಿ ವಿನಂತಿಸಿಕೊಂಡಿದ್ದರು.

ಆದರೆ, ದೇಶದ ಹಲವು ಕಡೆ ಜನತಾ ಕರ್ಫ್ಯೂ ಮುಗಿಯುವ ಮುನ್ನವೆ ಸಂಜೆ 5 ಗಂಟೆಗೆ ಬೀದಿಗಿಳಿದು ಮೆರವಣಿಗೆ ಸಾಗಿ ಕೊರೊನಾ ಹಬ್ಬ ಆಚರಿಸಿದ್ದಾರೆ. ಈ ಮೂಲಕ ಕೊರೊನಾ ವಿರುದ್ಧ ಹೋರಾಡಲು ಕರೆ ನೀಡಿದ್ದ ಮೋದಿ ಅವರ ಸೂಚನೆ ಉಲ್ಲಂಘನೆ ಮಾಡಲಾಗಿದೆ.

FIR Filed Against 40 People Who Had Gathered Outside On 22 March

ಖುದ್ದು ಮೋದಿ ಅವರೇ ಯಾರು ರಾತ್ರಿ 9 ಗಂಟೆಯವರೆಗೂ ಮನೆಯಿಂದ ಹೊರಗೆ ಬರಬೇಡಿ ಎಂದು ತಿಳಿಸಿದ್ದರು. ಆದರೂ, ಅನೇಕ ಮಂದಿ ಸಂಜೆ 5 ಗಂಟೆಗೆ ಸಮೂಹದಲ್ಲಿ ಬಂದು ರಸ್ತೆಗಳಲ್ಲಿ ಮೆರವಣಿಗೆ ಸಾಗಿದ್ದಾರೆ. ಹೀಗೆ, ರಸ್ತೆಗಿಳಿದು ಜನತಾ ಕರ್ಫ್ಯೂ ಉಲ್ಲಂಘನೆ ಮಾಡಿದ 40 ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ.

ಅಂದ್ಹಾಗೆ, ಜನತಾ ಕರ್ಫ್ಯೂ ನಡೆದ ಆ ದಿನ ಅಹಮದಾಬಾದ್‌ನಲ್ಲಿ ಸೆಕ್ಷನ್ 144 ಜಾರಿಯಲ್ಲಿತ್ತು. ಹಾಗಾಗಿ, ಸೆಕ್ಷನ್ 144 ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪದಲ್ಲಿ ಈ ಕೇಸ್ ದಾಖಲು ಮಾಡಲಾಗಿದೆ ಎಂದು ಅಹಮದಾಬಾದ್‌ ನಗರ ಪೊಲೀಸ್ ಆಯುಕ್ತ ಆಶಿಶ್ ಭಾಟಿಯಾ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+