ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ರವಾನೆ ಆರೋಪ: ಬಿಎಸ್‌ಎಫ್‌ ಸಿಬ್ಬಂದಿ ಬಂಧನ

|
Google Oneindia Kannada News

ಭುಜ್‌, ಅಕ್ಟೋಬರ್‌ 25: ಪಾಕಿಸ್ತಾನಕ್ಕೆ ಗೂಢಾಚಾರಿಕೆ ಮಾಡಿದ ಆರೋಪದಲ್ಲಿ ಮತ್ತು ನೆರೆಯ ದೇಶಕ್ಕೆ ವಾಟ್ಸಾಪ್, ಎಟಿಎಸ್ ಮೂಲಕ ರಹಸ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ ಗುಜರಾತ್‌ನ ಭುಜ್ ಬೆಟಾಲಿಯನ್‌ನಲ್ಲಿ ನಿಯೋಜಿಸಲಾಗಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿಯನ್ನು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧನ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬಂಧಿತ ಬಿಎಸ್‌ಎಫ್‌ ಸಿಬ್ಬಂದಿಯನ್ನು ಮೊಹಮ್ಮದ್‌ ಸಜ್ಜದ್‌ ಎಂದು ಗುರುತಿಸಲಾಗಿದೆ. ಈತನನ್ನು ಬಿಎಸ್‌ಎಫ್‌ ಪ್ರಧಾನ ಕಚೇರಿಯಲ್ಲಿ ಬಂಧನ ಮಾಡಲಾಗಿದೆ. ಮೊಹಮ್ಮದ್‌ ಸಜ್ಜದ್‌ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಸರೋಲಾ ಗ್ರಾಮದವರಾಗಿದ್ದಾರೆ. ಈ ವರ್ಷದ ಜುಲೈನಲ್ಲಿ ಭುಜ್‌ನಲ್ಲಿರುವ 74 ನೇ ಬಿಎಸ್‌ಎಫ್‌ ಬೆಟಾಲಿಯನ್‌ಗೆ ನಿಯೋಜನೆ ಆಗಿದ್ದಾರೆ. 2012 ರಲ್ಲಿ ಬಿಎಸ್‌ಎಫ್‌ ಕಾನ್‌ಸ್ಟೇಬರ್‌ ಆಗಿ ಸೇರಿಕೊಂಡರು ಎಂದು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಹೇಳಿದೆ.

ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿದ ಗ್ಯಾಸ್ ಏಜೆನ್ಸಿ ಮಾಲೀಕ ಅರೆಸ್ಟ್!ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿದ ಗ್ಯಾಸ್ ಏಜೆನ್ಸಿ ಮಾಲೀಕ ಅರೆಸ್ಟ್!

ಆತ ಪಾಕಿಸ್ತಾನಕ್ಕೆ ಭಾರತಕ್ಕೆ ಸಂಬಂಧಿಸಿದ ರಹಸ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದ. ಇದಕ್ಕಾಗಿ ಆತನಿಗೆ ಹಣ ಲಭ್ಯವಾಗುತ್ತಿತ್ತು. ಆತನ ಸಹೋದರ ವಾಜೀದ್‌ ಹಾಗೂ ಸಹೋದ್ಯೋಗಿ ಇಕ್ಬಾಲ್ ರಶೀದ್‌ ಖಾತೆಗೆ ಪಾಕಿಸ್ತಾನದಿಂದ ಹಣ ಬರುತ್ತಿತ್ತು ಎಂದು ವರದಿಯು ವಿವರಿಸಿದೆ. ಇನ್ನು ಮೊಹಮ್ಮದ್‌ ಸಜ್ಜದ್‌ನಿಂದ ಎರಡು ಫೋನ್‌ಗಳು, ಅದರಲ್ಲಿದ್ದ ಸಿಮ್‌ ಕಾರ್ಡ್‌ಗಳು, ಎರಡು ಹೆಚ್ಚುವರಿ ಸಿಮ್‌ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

BSF personnel Arrested In Gujarats Bhuj For Spying For Pakistan

ಜಮ್ಮುವಿನ ಪ್ರಾದೇಶಿಕ ಕಚೇರಿಯಿಂದ ಸಜ್ಜದ್‌ಗೆ ಪಾಸ್‌ಪೋರ್ಟ್ ಲಭ್ಯವಾಗಿದೆ. ಅದೇ ಪಾಸ್‌ಪೋರ್ಟ್‌ನಲ್ಲಿ ಸಜ್ಜದ್‌ ಡಿಸೆಂಬರ್‌ 1, 2011 ಮತ್ತು ಜನವರಿ 16, 2012 ರ ನಡುವೆ ಪಾಕಿಸ್ತಾನಕ್ಕೆ ಹೋಗಿದ್ದಾರೆ, ಅಲ್ಲಿ ಸುಮಾರು 46 ದಿನಗಳು ಇದ್ದರು. ಅಟ್ಟಾರಿ ರೈಲು ನಿಲ್ದಾಣದಿಂದ ರೈಲು ಹತ್ತಿ ಪಾಕಿಸ್ತಾನಕ್ಕೆ ತೆರಳಿದ್ದರು.

ಇನ್ನು ಮೊಹಮ್ಮದ್‌ ಸಜ್ಜದ್‌ ಎರಡು ಫೋನ್‌ಗಳನ್ನು ಬಳಸಿದ್ದಾರೆ. ಜನವರಿ 2021 ರಂದು ಒಂದು ಫೋನ್‌ನಿಂದ ಒಂದು ಸಿಮ್‌ ಕಾರ್ಡ್ ಅನ್ನು ಸಕ್ರಿಯಗೊಳಿಸಿದ್ದರು. ಆ ಸಂಖ್ಯೆಯ ಕಾಲ್‌ ಡೇಟಾ ರೆಕಾರ್ಡ್ ಅನ್ನು ಎಟಿಎಸ್ ಪರಿಶೀಲನೆ ಮಾಡಿದಾಗ ಈ ಸಿಮ್‌ ಕಾರ್ಡ್ ತ್ರಿಪುರಾದ ಸತ್ಯಗೋಪಾಲ್‌ ಘೋಷ್ ಎಂಬ ವ್ಯಕ್ತಿಯ ಹೆಸರಿನಲ್ಲಿ ಇದೆ ಎಂದು ತಿಳಿದು ಬಂದಿದೆ. ಬಳಿಕ ನವೆಂಬರ್‌ 7, 2020 ರಂದು ಮೊದಲ ಬಾರಿಗೆ ಈ ಸಿಮ್‌ ಅನ್ನು ಸಕ್ರಿಯಗೊಳಿಸಲಾಗಿದೆ.

ಐಎಸ್‌ಐಗಾಗಿ ಬೇಹುಗಾರಿಕೆ: ಪೋಖ್ರಾನ್ ಕ್ಯಾಂಪ್‌ನ ತರಕಾರಿ ಸರಬರಾಜುದಾರ ಬಂಧನಐಎಸ್‌ಐಗಾಗಿ ಬೇಹುಗಾರಿಕೆ: ಪೋಖ್ರಾನ್ ಕ್ಯಾಂಪ್‌ನ ತರಕಾರಿ ಸರಬರಾಜುದಾರ ಬಂಧನ

ವಾಟ್ಸ್‌ಆಪ್‌ ಮೂಲಕ ರಹಸ್ಯ ಮಾಹಿತಿ ರವಾನೆ

ಸಜ್ಜನ್‌ನ ಈ ಸಂಖ್ಯೆಗೆ ಎರಡು ಕರೆಗಳು ಬಂದಿದೆ. ಆ ಬಳಿಕ ಸಿಮ್‌ ನಿಷ್ಕೀಯವಾಗಿದೆ. ಜನವರಿ 15, 2021 ರಂದು ಆ ಸಂಖ್ಯೆ ಮತ್ತೆ ಸಕ್ರಿಯಗೊಂಡಿದೆ. ಸುಮಾರು 12:38 ಗಂಟೆಗೆ ಎಸ್‌ಎಂಎಸ್‌ ಬಂದಿದೆ. ಅದು ವ್ಯಾಟ್ಸ್‌ಆಪ್‌ಗಾಗಿ ಪಡೆದ ಒಟಿಪಿ ಆಗಿದೆ. ಬಳಿಕ ಆ ಸಂಖ್ಯೆ ನಿಷ್ಕ್ರೀಯವಾಗಿದೆ. ಈ ಆರೋಪಿ ಸಜ್ಜದ್‌ ಈ ಸಂಖ್ಯೆಯಲ್ಲಿ ಒಟಿಪಿಯನ್ನು ಸ್ವೀಕರಿಸಿ ಅದನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದಾನೆ. ಅಲ್ಲಿ ರಹಸ್ಯ ಮಾಹಿತಿಯನ್ನು ಕಳುಹಿಸಲು ಬಳಸುವ ವಾಟ್ಸ್‌ಆಪ್‌ ಅನ್ನು ಸಕ್ರಿಯಗೊಳಿಸಿದ್ದಾನೆ ಎಂದು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಆರೋಪ ಮಾಡಿದೆ. ಈ ವಾಟ್ಸ್‌ಆಪ್‌ ಈಗಲೂ ಸಕ್ರಿಯವಾಗಿದೆ ಇದೆ. ಪಾಕಿಸ್ತಾನದ ಸಜ್ಜದ್‌ ಜೊತೆ ಸಂಪರ್ಕದಲ್ಲಿದ್ದ ಕೆಲವರು ಈಗಲೂ ಆ ವಾಟ್ಸ್‌ಆಪ್‌ ಅನ್ನು ಬಳಕೆ ಮಾಡುತ್ತಿದ್ದಾರೆ.

ಬಿಎಸ್‌ಎಫ್‌ಗೆ ತಪ್ಪು ಜನ್ಮ ದಿನಾಂಕ ನೀಡಿದ್ದ ಸಜ್ಜದ್‌

ಇನ್ನು ಇಷ್ಟು ಮಾತ್ರವಲ್ಲದೇ ಬಿಎಸ್‌ಎಫ್‌ಗೆ ಮೊಹಮ್ಮದ್‌ ಸಜ್ಜದ್‌ ತಪ್ಪು ದಿನಾಂಕವನ್ನು ನೀಡಿದ್ದಾನೆ. ಈ ಮೂಲಕ ಬಿಎಸ್‌ಎಫ್‌ ಅನ್ನು ಮೊಹಮ್ಮದ್‌ ಸಜ್ಜದ್‌ ದಾರಿ ತಪ್ಪಿಸಿದ್ದಾನೆ. ಆಧಾರ್‌ ಕಾರ್ಡ್‌ನಲ್ಲಿ ಜನವರಿ 1, 1992 ರಂದು ಜನಿಸಿದ್ದಾರೆ ಎಂದು ಇದೆ. ಆದರೆ ಪಾಸ್‌ಪೋರ್ಟ್‌ನಲ್ಲಿ ಜನವರಿ 30, 1985 ರಂದು ಜನಿಸಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ. ಈ ಬಗ್ಗೆ ಅಧಿಕ ತನಿಖೆ ನಡೆಯುತ್ತಿದೆ ಎಂದು ಭಯೋತ್ಪಾದನಾ ನಿಗ್ರಹ ದಳ ತಿಳಿಸಿದೆ.

Recommended Video

Chahal ಅವರು ನಿನ್ನೆ ಪಂದ್ಯದಲ್ಲಿ ಇರಬೇಕಿತ್ತು ಎಂದ ಅಭಿಮಾನಿಗಳು | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
BSF personnel Mohammad Sajjad Arrested In Gujarat's Bhuj For Spying For Pakistan. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X