• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಂಪ್ ಭೇಟಿ ನೀಡುವ ಸ್ಟೇಡಿಯಂನ ಬೃಹತ್ ಪ್ರವೇಶ ದ್ವಾರ ಕುಸಿತ

|

ಅಹ್ಮದಾಬಾದ್, ಫೆಬ್ರವರಿ.23: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ಮುನ್ನ ದಿನ ಅಹ್ಮದಾಬಾದ್ ನಲ್ಲಿ ಗಣ್ಯವ್ಯಕ್ತಿಗಳ ಸ್ವಾಗತಕ್ಕೆ ನಿರ್ಮಿಸಲಾಗುತ್ತಿದ್ದ ಬೃಹತ್ ಪ್ರವೇಶ ದ್ವಾರವೇ ಕುಸಿದು ಬಿದ್ದಿರುವ ಘಟನೆ ನಡೆದಿದೆ.

ಸೋಮವಾರ ಅಹ್ಮದಾಬಾದ್ ನ ಮೊಟೆರಾ ಪ್ರದೇಶದಲ್ಲಿ ಇರುವ ಸರ್ದಾರ್ ಪಟೇಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸ್ಟೇಡಿಯಂದ ಒಂದು ಭಾಗದಲ್ಲಿ ವಿವಿಐಪಿ ಸ್ವಾಗತಕ್ಕೆ ಬೃಹತ್ ಪ್ರವೇಶ ದ್ವಾರವನ್ನು ನಿರ್ಮಿಸಲಾಗುತ್ತಿತ್ತು.

ನಮಸ್ತೆ ಟ್ರಂಪ್': ಅಮೆರಿಕಾ ಅಧ್ಯಕ್ಷರಿಗೆ ಖುಷಿ, ಭರವಸೆಗಳು ಹುಸಿ

ಭಾನುವಾರ ಬೆಳಗ್ಗೆ ಈ ಪ್ರವೇಶ ದ್ವಾರವೇ ಗಾಳಿಗೆ ಕುಸಿದು ಬಿದ್ದಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಅದೃಷ್ಟವಶಾತ್ ಪ್ರವೇಶದ್ವಾರ ಕುಸಿತದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಕ್ರೈಂ ಬ್ರ್ಯಾಂಚ್ ನ ಸ್ಪೆಷಲ್ ಪೊಲೀಸ್ ಕಮಿಷನರ್ ಅಜಯ್ ತೋಮರ್ ತಿಳಿಸಿದ್ದಾರೆ.

ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ:

ವಿಶ್ವದಲ್ಲೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎನಿಸಿರುವ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಸುಮಾರು 1ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದೆ. ಈ ಮೊದಲು 49 ಸಾವಿರ ಜನರ ಸಾಮರ್ಥ್ಯವನ್ನು ಹೊಂದಿದ್ದ ಅಹ್ಮದಾಬಾದ್ ಕ್ರಿಕೆಟ್ ಸ್ಟೇಡಿಯಂನ್ನು ಒಡೆದು ಪುನರ್ ನಿರ್ಮಾಣ ಮಾಡಲಾಗಿದೆ. ಸದ್ಯ 1.10 ಲಕ್ಷ ಸ್ಥಾನಗಳ ಸಾಮರ್ಥ್ಯವನ್ನು ಸ್ಟೇಡಿಯಂ ಹೊಂದಿದ್ದು, ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಡೊನೊಲ್ಡ್ ಟ್ರಂಪ್ ಈ ಸ್ಟೇಡಿಯಂನ್ನು ಉದ್ಘಾಟಿಸಲಿದ್ದಾರೆ.

English summary
Ahmedabad's Motera Stadium VVIP Entry Gate Collapse Before America President Donald Trump Visit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X