• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

15,000 ನವಜಾತ ಶಿಶುಗಳು ಸಾವು, 72 ಸಾವಿರ ಮಕ್ಕಳು ಆಸ್ಪತ್ರೆಗೆ ದಾಖಲು

|

ಅಹ್ಮದಾಬಾದ್, ಮಾರ್ಚ್.04: ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಗುಜರಾತ್ ನಾದ್ಯಂತ ಕಳೆದ ಎರಡು ವರ್ಷಗಳಲ್ಲಿ 15 ಸಾವಿರಕ್ಕೂ ಅಧಿಕ ನವಜಾತ ಶಿಶುಗಳು ಪ್ರಾಣ ಬಿಟ್ಟಿರುವ ಬಗ್ಗೆ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.

ಗುಜರಾತ್ ಅಧಿವೇಶನದ ಪ್ರಶ್ನಾವಳಿ ಅವಧಿಯಲ್ಲಿ ಕಾಂಗ್ರೆಸ್ ಶಾಸಕ ಕೇಳಿದ ಪ್ರಶ್ನೆಗೆ ಉಪ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರಾಗಿರುವ ನಿತಿನ್ ಪಟೇಲ್ ಉತ್ತರ ನೀಡಿದರು. ಕಳೆದ ಎರಡು ವರ್ಷಗಳಲ್ಲಿ ನವಜಾತ ಶಿಶುಗಳ ಆರೈಕೆ ಕೇಂದ್ರಕ್ಕೆ 71,774 ನವಜಾತ ಶಿಶುಗಳು ದಾಖಲಾಗಿದ್ದವು ಎಂದು ತಿಳಿಸಿದರು.

1 ವರ್ಷದ ಕಂದಮ್ಮನ ಮಡಿಲಲ್ಲಿ ಹೊತ್ತು ಕರ್ತವ್ಯಕ್ಕೆ ಮಹಿಳಾ ಪೇದೆ ಹಾಜರ್!

ನವಜಾತ ಶಿಶುಗಳ ಸಾವಿನ ಸಂಖ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ನೇಮಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಮುಖ್ಯ ಕರ್ತವ್ಯ ಎಂದು ಪಟೇಲ್ ತಿಳಿಸಿದ್ದಾರೆ.

15,031 ನವಜಾತ ಶಿಶುಗಳು ಸಾವು

15,031 ನವಜಾತ ಶಿಶುಗಳು ಸಾವು

ಕಳೆದ 2018 - 2019ರಲ್ಲಿ ಗುಜರಾತ್ ನಲ್ಲಿ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 1,06,000 ಮಕ್ಕಳು ಜನಿಸಿದ್ದು, ಈ ಪೈಕಿ 71,774 ನವಜಾತ ಶಿಶುಗಳು ಅನಾರೋಗ್ಯದಿಂದ ಬಳಲುತ್ತಿದ್ದವು. ಇದರಲ್ಲಿ 15,013 ನವಜಾತಶಿಶುಗಳು ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಬಿಟ್ಟಿವೆ ಎಂದು ತಿಳಿದು ಬಂದಿದೆ.

ಚಿಕಿತ್ಸೆ ಫಲಿಸದೇ ಶೇ.21ರಷ್ಟು ನವಜಾತಶಿಶುಗಳ ಸಾವು

ಚಿಕಿತ್ಸೆ ಫಲಿಸದೇ ಶೇ.21ರಷ್ಟು ನವಜಾತಶಿಶುಗಳ ಸಾವು

ಗುಜರಾತ್ ಸರ್ಕಾರಿ ಆಸ್ಪತ್ರೆಗಳು ಮತ್ತು ನವಜಾತ ಶಿಶುಗಳ ಆರೈಕೆ ಕೇಂದ್ರಗಳಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ 71,774 ನವಜಾತ ಶಿಶುಗಳ ಪೈಕಿ 15,013 ನವಜಾತ ಶಿಶುಗಳು ಸರಿಯಾದ ಚಿಕಿತ್ಸೆ ಸಿಗದೇ ಪ್ರಾಣ ಬಿಟ್ಟಿದ್ದಾರೆ. ಇದು ಒಟ್ಟು ಸಂಖ್ಯೆಗೆ ಶೇ.21ರಷ್ಟು ಎಂದು ಹೇಳಲಾಗುತ್ತಿದೆ.

ಪ್ರತಿದಿನ 20 ನವಜಾತ ಶಿಶುಗಳ ಮರಣ

ಪ್ರತಿದಿನ 20 ನವಜಾತ ಶಿಶುಗಳ ಮರಣ

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಅಭಾವ ಹೆಚ್ಚಾಗಿದೆ. ಚಿಕಿತ್ಸೆ ನೀಡುವುದಕ್ಕೂ ವೈದ್ಯರಿಲ್ಲದೇ ನವಜಾತ ಶಿಶುಗಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ. ಇದುವರೆಗಿನ ಅಂಕಿ-ಅಂಶಗಳನ್ನು ಪರಿಶೀಲಿಸಿದಾಗ ಪ್ರತಿದಿನ 20ಕ್ಕೂ ಹೆಚ್ಚು ನವಜಾತ ಶಿಶುಗಳ ಮೃತಪಟ್ಟಿದ್ದಾರೆ.

ಗುಜರಾತ್ ನ ಯಾವ ನಗರದಲ್ಲಿ ಎಷ್ಟು ಮಕ್ಕಳು ಸಾವು?

ಗುಜರಾತ್ ನ ಯಾವ ನಗರದಲ್ಲಿ ಎಷ್ಟು ಮಕ್ಕಳು ಸಾವು?

ಇನ್ನು, ಅತಿಹೆಚ್ಚು ನವಜಾತ ಶಿಶುಗಳು ಮೃತಪಟ್ಟಿರುವ ನಗರಗಳ ಪಟ್ಟಿಯಲ್ಲಿ ಅಹ್ಮದಾಬಾದ್ ಮೊದಲ ಸ್ಥಾನದಲ್ಲಿದೆ. ರಾಜಧಾನಿ ಅಹ್ಮದಾಬಾದ್ ಆಸ್ಪತ್ರೆಯಲ್ಲಿ ದಾಖಲಾದ12,637 ನವಜಾತ ಶಿಶುಗಳ ಪೈಕಿ 4,322 ನವಜಾತ ಶಿಶುಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ವಡೋದರಾ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾದ 6,576 ನವಜಾತ ಶಿಶುಗಳ ಪೈಕಿ 2,362 ನವಜಾತ ಶಿಶುಗಳು ಪ್ರಾಣ ಬಿಟ್ಟಿವೆ. ಸೂರತ್ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾದ 9,667 ನವಜಾತ ಶಿಶುಗಳ ಪೈಕಿ 1,986 ನವಜಾತ ಶಿಶುಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ.

English summary
15,013 Newborn Babies Death In Last 2 Years In Gujrat Government Hospitals. Now More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X