• search

ಬ್ಲಡ್ ಟ್ರಾನ್ಪೂಷನ್‌ನಿಂದ ಬಳಲುವ ಏಳು ವರ್ಷ ವಯಸ್ಸಿನ ಮಗನಿಗೆ ಶಸ್ತ್ರಚಿಕಿತ್ಸೆಯ ತುರ್ತು ಆಗತ್ಯವಿದೆ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  "ನಿಜಾನಾ ಅಪ್ಪ ? ಡಾಕ್ಟರ್ ಅಂಕಲ್ ನನ್ನ ಕಾಯಿಲೇನಾ ವಾಸಿ ಮಾಡಿದ್ಮೇಲೆ, ಪ್ರತೀ ತಿಂಗ್ಳೂ ಮತ್ತೆ ಮತ್ತೆ ನಾನು ಆಸ್ಪತ್ರೆಗೆ ಬರ್ಬೇಕಾಗಿಲ್ಲ ಅಲ್ವಾ ಅಪ್ಪ ?" ನನ್ನ ಏಳು ವರ್ಷ ವಯಸ್ಸಿನ ಮಗ ಸುಪೇಶ್, ತಾನೇಕೆ ತನ್ನ ಇತರ ಒಡಹುಟ್ಟಿದವರಿಗಿಂತ ವಿಭಿನ್ನವಾಗಿದ್ದೇನೆ ಅಂತಾ ಆವಾಗಾವಾಗ್ಗೆ ನನ್ಹತ್ರ ಕೇಳ್ತಾನೇ ಇರ್ತಾನೆ. "ಅಪ್ಪಾ, ರೋಹನ್, ರಾಧಿಕಾ, ಮತ್ತೆ ರಚನಾಗೆ ನನ್ ಥರಾ ಪದೇ ಪದೇ ಆಸ್ಪತ್ರೆಗೆ ಹೋಗ್ಬೇಕಾಗಿಲ್ಲ. ಯಾಕಪ್ಪಾ ನನಗ್ ಮಾತ್ರ ಹೀಗೆ ?" ಇದು ಸುಪೇಶನ ಮಾಮೂಲಿ ಪ್ರಶ್ನೆ. ಪ್ರತೀ ಬಾರಿಯೂ ತಾನೋರ್ವನೇ ಆಸ್ಪತ್ರೆಗೆ ಹೋಗಬೇಕಾಗಿರುವುದು ಎಂಬ ಸಂಗತಿಯಿಂದ ಆತ ಅದೆಷ್ಟು ಬೇಸರಗೊಂಡಿದ್ದಾನೆ ಎಂದರೆ, ವೈದ್ಯರು ನನಗೆ ಸಲಹೆ ಮಾಡಿದ ಪರಿಹಾರೋಪಾಯವೊಂದನ್ನ, ಅವನಿಗೆ ಹೇಳಿ ನಾನು ಅವನನ್ನು ಸಮಾಧಾನಪಡಿಸಬೇಕಾಯಿತು.

  ಅಷ್ಟಕ್ಕೂ ವೈದ್ಯರು ಸೂಚಿಸಿದ ಪರಿಹಾರೋಪಾಯ "ಅಸ್ಥಿಮಜ್ಜೆಯ ಟ್ರಾನ್ಸ್ ಪ್ಲಾಂಟೇಷನ್" ಅಥವಾ ಅಸ್ಥಿಮಜ್ಜೆಯನ್ನು ಕಸಿಮಾಡುವುದಾಗಿದೆ. ಈ ವಿಚಾರವನ್ನ ನಾನವನಿಗೆ ಹೇಳಿದಂದಿನಿಂದ, ಪ್ರತೀ ದಿನ ರಾತ್ರಿ ಮಲಗೋದಕ್ಕೆ ಮುಂಚೆ ಅವನು, "ಅಪ್ಪಾ ನಾಳೇನೇ ನನ್ನ ಆಪರೇಷನ್ ಮಾಡಿದ್ರೆ ಒಳ್ಳೇದಲ್ವಾ ?" ಅಂತಾ ಕೇಳ್ತಾನೇ ಇರ್ತಾನೆ. ಯಾವಾಗಲೂ ಇದಕ್ಕುತ್ತರ ಸಿಹಿಯಾದ "ಇಲ್ಲ" ಅನ್ನೋದೇ ಆಗಿರುತ್ತೆ. ಅಂದ್ರೆ ಇವತ್ತಿನವರೆಗೂ ಏನೇನೋ ಸಬೂಬು ಹೇಳಿ ಅವನನ್ನ ಸಾಗಹಾಕ್ತಾ ಬಂದಿದ್ದೀನಿ. ತನ್ನ ಬಡ ತಂದೆ ತನ್ನಲ್ಲಿರೋದನ್ನೆಲ್ಲಾ ಮಾರಿದ್ರೂನೂ ತನಗೆ ಚಿಕಿತ್ಸೆ ಕೊಡಿಸಲು ಆತನಿಂದ ಸಾಧ್ಯವಿಲ್ಲ ಅನ್ನೋ ಸತ್ಯಾನಾ ಅರ್ಥಮಾಡ್ಕೊಳ್ಳೋಕೆ ಅವನ ವಯಸ್ಸು ಇನ್ನೂ ತೀರಾ ಚಿಕ್ಕದು. ಥಲಸ್ಸೇಮಿಯಾ ಅನ್ನೋ ಹೆಸರಿನ ಈ ರೋಗದಿಂದ ನನ್ನ ಮಗನನ್ನ ಬಚಾವ್ ಮಾಡೋಕೆ ನಾನು ಭರಿಸಬೇಕಾಗಿರೋ ವೆಚ್ಚ ಒಂದಲ್ಲ, ಎರಡಲ್ಲ, ಬರೋಬ್ಬರಿ ಇಪ್ಪತ್ತೆರಡು ಲಕ್ಷ ರೂಪಾಯಿಗಳನ್ನ.

  Blood Transfusions

  "ಶಕ್ತಿಯನ್ನ ಪಡ್ಕೊಳ್ಳೋಕೆ ನಾವು ಹೋಗೋದು ಯಾವಾಗ ?" ಪ್ರತೀ ತಿಂಗಳೂ ನನ್ನ ಮಗ ಪಡ್ಕೊಳ್ಳೋ ಬ್ಲಡ್ ಟ್ರಾನ್ಸ್ ಪ್ಯೂಷನ್ ನ ಅವ್ನು ಕರೆಯೋದು "ಶಕ್ತಿ" ಅಂತಾ. ಸುಪೇಶನ ಜೀವನ ಬರೀ ಒಂದು ಆಟದ ಥರಾ ಆಗೋಗ್ಬಿಟ್ಟಿದೆ. ಮಾಸಾಂತ್ಯವನ್ನ ಸಮೀಪಿಸುತ್ತಿದ್ದ ಹಾಗೆಲ್ಲಾ ಅವನ ದೈಹಿಕ ಶಕ್ತಿಯ ಮಟ್ಟ ಕ್ಷೀಣಿಸುತ್ತಾ ಸಾಗುತ್ತೆ ಹಾಗೂ ಇದ್ರಿಂದ ಅವ್ನು ಆಯಾಸದಿಂದ ಬಳಲಿದಂತವನಾಗುತ್ತಾನೆ. ಯಾತನಾಮಯವಾಗಿರೋ ಬ್ಲಡ್ ಟ್ರಾನ್ಸ್ ಪ್ಯೂಷನ್ ಗೆ ಒಳಪಟ್ಟ ಮೇಲಷ್ಟೇ ಅವ್ನು ಪುನ: ಜೀವಕಳೆಯನ್ನ ಹೊಂದೋದು. ಈ ಬ್ಲಡ್ ಟ್ರಾನ್ ಪ್ಯೂಷನ್ ಗಳೇ ಅವನ ಪಾಲಿನ "ಶಕ್ತಿಗುಳಿಗೆಗಳು". ಈ ರೋಗದಿಂದ ಶಾಶ್ವತವಾಗಿ ಪಾರಾಗೋದಕ್ಕೆ ಹಾಗೂ ಅಂತಿಮವಾಗಿ ಮಿಕ್ಕುಳಿದ ಮಕ್ಕಳ ಹಾಗೆ ಸಹಜವಾಗಿ ಅವ್ನು ಜೀವನ ಮಾಡುವಂತಾಗಬೇಕಾದರೆ, ಅವ್ನು ಅಸ್ಥಿಮಜ್ಜೇನಾ ಕಸಿ ಮಾಡಿಸ್ಕೊಳ್ಳೋದು ತುಂಬಾನೇ ಅಗತ್ಯವಾಗಿದೆ. ಬ್ಲಡ್ ಟ್ರಾನ್ ಪ್ಯೂಷನ್ ಗಳಿಗೆ ಒಳಪಡದೇ ಜೀವನ ನಡೆಸಿ ಗೊತ್ತೇ ಇಲ್ಲ ಸುಪೇಶನಿಗೆ. ನಾನಂತೂ ಮಗನ ಸೌಖ್ಯಕ್ಕಾಗಿ ಅವ್ನಿಗೆ ಬ್ಲಡ್ ಟ್ರಾನ್ಸ್ ಪ್ಯೂಷನ್ ಮಾಡ್ಸೋಕೆ ಯಾವಾಗಲೂ ಕಾತರನಾಗಿರುತ್ತೇನೆ.

  ಉದಾರೀ ಸಜ್ಜನರಾಗಿರೋ ನಿಮ್ಮಂತವರ 'ದೇಣಿಗೆ'ಯ ಸಹಾಯದಿಂದ , ಸುಪೇಶನಿಗೆ ಅಸ್ಥಿಮಜ್ಜೆಯ ಕಸಿ (ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್) ಮಾಡಿಸಬಹುದು.

  Blood Transfusions

  ನನ್ನ ಹೆಸರು ಸಂದೀಪ್ ಸರ್ಲ್ಕಾರ್ ಅಂತ. ನಾನು ನನ್ನ ಹೆಂಡತಿ ಮತ್ತು ನಾಲ್ವರು ಮಕ್ಕಳೊಂದಿಗೆ ಅಕೋಲಾದಲ್ಲಿ ವಾಸವಾಗಿದ್ದೇನೆ. ವೃತ್ತಿಯಿಂದ ನಾನೋರ್ವ ಕೃಷಿಕ. ಹಾಗೂ ಹೀಗೂ ಕಷ್ಟಪಟ್ಟು ತಿಂಗಳಿಗೆ ಎಂಟು ಸಾವಿರ ರೂಪಾಯಿಗಳಷ್ಟು ದುಡಿಯುತ್ತೇನೆ. ಇದುವರೆಗೂ ಸುಪೇಶ ಎಂಭತ್ತು ಬ್ಲಡ್ ಟ್ರಾನ್ ಪ್ಯೂಷನ್ ಗಳಿಗೆ ಒಳಪಟ್ಟಿದ್ದಾನೆ ಹಾಗೂ ಇದಕ್ಕಾಗಿ ಇದುವರೆಗೆ ನನಗೆ ತಗಲಿರುವ ಒಟ್ಟು ಖರ್ಚು ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳಷ್ಟಾಗಿದೆ. ಇಷ್ಟು ಹಣಕ್ಕಾಗಿ ನಾನೀಗಾಗಲೇ ಸಾಕಷ್ಟು ಬಾಗಿಲುಗಳನ್ನ ತಟ್ಟಿಯಾಗಿದೆ. ನಿಜಕ್ಕೂ ಇದೊಂದು ಭಯಾನಕ ಹೋರಾಟವಾಗಿತ್ತು. ಹಣದ ಕೊರತೆಯ ಕಾರಣಕ್ಕಾಗಿ ಒಂದೇ ಒಂದು ಟ್ರಾನ್ಸ್ ಪ್ಯೂಷನ್ ಅನ್ನು ನಾನು ತಪ್ಪಿಸಿದರೂ, ನನ್ನ ರೂಪೇಶ ಬದುಕುಳಿಯಲಾರ. ನನಗೀಗ ನಿಜಕ್ಕೂ ಭಯ ಹುಟ್ಟಿಕೊಂಡಿದೆ. ರೂಪೇಶನಿಗೆ ಮುಂದೆ ಬ್ಲಡ್ ಟ್ರಾನ್ಸ್ ಫ್ಯೂಷನ್ ಮಾಡಿಸಲು ನನಗೇನಾದ್ರೂ ಸಾಧ್ಯವಾಗದೇ ಹೋದರೆ ಅವನ ಗತಿಯೇನು ? ಬ್ಲಡ್ ಟ್ರಾನ್ಸ್ ಫ್ಯೂಷನ್ ಗೆ ಒಳಪಡದೇ ಹೋದರೆ, ರೂಪೇಶನಿಗೆ ನಡೆಯುವುದಕ್ಕೂ ಆಗುವುದಿಲ್ಲ. ತಿಂಗಳ ಕೊನೆ ಹತ್ತಿರ ಬರುತ್ತಾ ಇದ್ದಂತೆ, ಬಹಳಷ್ಟು ಸಮಯವನ್ನ ಅವನು ಹಾಸಿಗೆಯಲ್ಲಿ ಮಲಗಿಕೊಂಡೇ ಕಳೆಯುತ್ತಾನೆ. ಆತನ ಪಾಲಿನ ಜೀವರಕ್ಷಕದಂತಿರುವ ಈ ಟ್ರಾನ್ಸ್ ಫ಼್ಯೂಷನ್ ಗಳಿಗೆ ಆತ ಒಳಪಡದೇ ಹೋದರೆ, ಅವನ ಬದುಕೇ ಶಾಶ್ವತವಾಗಿ ಮುಕ್ತಾಯಗೊಳ್ಳುತ್ತದೆ.

  Blood Transfusions

  ನಾಲ್ಕು ತಿಂಗಳ ಮಗುವಾದಾಗಿನಿಂದಲೂ ನನ್ನ ಮಗ ಥಲಸ್ಸೇಮಿಯಾ ರೋಗದಿಂದ ಬಳಲುತ್ತಿದ್ದಾನೆ. ಇಸವಿ 2010 ರಲ್ಲಿ, ಆತ ಬರೀ ಮೂರು ತಿಂಗಳ ಮಗುವಾಗಿದ್ದಾಗಲೇ ಎದೆಹಾಲಿನ ಸೇವನೆಯನ್ನ ನಿಲ್ಲಿಸಿಬಿಟ್ಟ. ಇದರಿಂದ ಚಿಂತಾಕ್ರಾಂತರಾದ ನಾವು ಅವನನ್ನು ಕೂಡಲೇ ವೈದ್ಯರ ಬಳಿ ಕರೆದೊಯ್ದೆವು. ಬಹುತೇಕ ಒಂದು ತಿಂಗಳವರೆಗೂ, ಬೇರೆ ಬೇರೆ ಪರೀಕ್ಷೆಗಳಿಗೆ ಒಳಪಟ್ಟ ಬಳಿಕವೂ ಸಹ ಆತನಿಗಿರುವ ಥಲಸ್ಸೇಮಿಯಾ ರೋಗವನ್ನ ಪತ್ತೆ ಮಾಡಲು ಸಾಧ್ಯವಾಗಲೇ ಇಲ್ಲ. ಇಂದಿಗೆ ಏಳು ವರ್ಷಗಳಷ್ಟು ಸುದೀರ್ಘ ಅವಧಿಯಿಂದ ಅವನು ಈ ರೋಗದೊಂದಿಗೆ ಹೋರಾಡುತ್ತಿದ್ದಾನೆ.

  ಸಂದೀಪ್ ಅವರು ಬಡ ಕುಟುಂಬವೊಂದಕ್ಕೆ ಸೇರಿರುವ ಕೃಷಿಕರಾಗಿದ್ದು, ಅವರು ತನ್ನ ಮಗನ ಚಿಕಿತ್ಸೆಯ ಖರ್ಚುವೆಚ್ಚಗಳನ್ನು ಹೊಂದಿಸುವುದಕ್ಕಾಗಿ ಪರದಾಡುತ್ತಿದ್ದಾರೆ. ನಿಮ್ಮ ಕೈಲಾದಷ್ಟು ಸಣ್ಣಪುಟ್ಟ 'ದೇಣಿಗೆ' ಗಳೊಂದಿಗೆ ನೀವು ಸಂದೀಪ್ ಅವರಿಗೆ ಸಹಕರಿಸಬಹುದು.

  ವೈದ್ಯರು ವಿವರಿಸೋ ಪ್ರಕಾರ, ಸುಪೇಶನಿಗೆ ಪ್ರತಿ ತಿಂಗಳೂ ಜೀವನಪರ್ಯಂತ ಬ್ಲಡ್ ಟ್ರಾನ್ಸ್ ಫ್ಯೂಷನ್ ಗಳ ಅವಶ್ಯಕತೆ ಇರುತ್ತದೆ. ಇಂತಾ ಪ್ರತೀ ಬ್ಲಡ್ ಟ್ರಾನ್ಸ್ ಫ್ಯೂಷನ್ ಗೆ ನನಗೆ ಒಂದೂವರೆ ಸಾವಿರ ರೂಪಾಯಿಗಳಷ್ಟು ಹಣ ಖರ್ಚಾಗುತ್ತದೆ. ಸುಪೇಶನು ಎದುರಿಸುತ್ತಿರುವ ಈ ದುರದೃಷ್ಟಕರ ಪರಿಸ್ಥಿತಿಗೆ ಶಾಶ್ವತ ಪರಿಹಾರ ಅಂತಂದ್ರೆ ಅದು ಅಸ್ಥಿಮಜ್ಜೆಯ ಕಸಿ ಆಗಿದೆ. ರೂಪೇಶನಿಗೆ ಥಲಸ್ಸೇಮಿಯಾ ಕಾಣಿಸಿಕೊಂಡ ದಿನಗಳಲ್ಲಿಯೇ ನನಗೆ ಈ ಪರಿಹಾರೋಪಾಯದ ಬಗ್ಗೆ ತಿಳಿದಿತ್ತಾದರೂ ಸಹ, ಆತನ ರಕ್ತದ ಗುಂಪಿಗೆ ಸರಿಹೊಂದುವ ದಾನಿಯ ಪತ್ತೆಯಾಗಿರಲಿಲ್ಲ. ಆದರೆ, ಇದೀಗ ನಾವು ಓರ್ವ ದಾನಿಯನ್ನ ಕಂಡುಕೊಂಡಿದ್ದೇವೆ. ನನ್ನ ಕಿರಿಯ ಮಗಳು, ಮೂರೂವರೆ ವರ್ಷ ವಯಸ್ಸಿನ ರಚನಾಳ ಅಸ್ಥಿಮಜ್ಜೆ, ರೂಪೇಶನ ರಕ್ತದ ಗುಂಪಿನೊಂದಿಗೆ ಸರಿಹೊಂದುತ್ತದೆ. "ನಿನ್ನ ತಂಗಿ ನಿನ್ನ ಜೀವವನ್ನ ಉಳಿಸಲಿದ್ದಾಳೆ" ಅಂತಾ ನಾವು ರೂಪೇಶನಿಗೆ ಹೇಳಿದಾಗ, ಅವನು ಅದಕ್ಕೆ ಕೊಟ್ಟ ಉತ್ತರ, "ಅವಳು ನನ್ನ ಜೀವವನ್ನು ಉಳಿಸುತ್ತಿರುವುದರಿಂದ, ಮುಂದಿನ ರಕ್ಷಾಬಂಧನದ ದಿನದಂದು ನಾನವಳಿಗೆ ರಾಖಿಯನ್ನ ಕಟ್ಟುತ್ತೇನೆ" ಅಂತ.

  Blood Transfusions

  ನನ್ನ ಸ್ವಂತ ಕುಟುಂಬದಿಂದಲೇ ಅಸ್ಥಿಮಜ್ಜೆ ದಾನಿಯನ್ನ ಕಂಡುಕೊಂಡಿರುವುದು, ನಾವು ಹೋರಾಡುತ್ತಿರುವ ಈ ಕಾರ್ಗತ್ತಲಿನ ವಿರುದ್ಧದ ನಮ್ಮ ಒಂದು ಪುಟ್ಟ ಆಶಾಕಿರಣವಾಗಿದೆ. ಪದೇ ಪದೇ ಆಸ್ಪತ್ರೆಯ ಭೇಟಿಗಳಿಂದ ಮತ್ತು ಯಾತನಾಮಯ ಸೂಜಿಗಳಿಂದ ನಾನು ನನ್ನ ಮಗನನ್ನ ಮುಕ್ತಗೊಳಿಸಲು ಬಯಸುತ್ತೇನಾದರೂ ಸಹ, ಆರ್ಥಿಕ ಮುಗ್ಗಟ್ಟಿನ ಕಾರಣದಿಂದ, ಅದನ್ನು ಸಾಧ್ಯವಾಗಿಸುವಲ್ಲಿ ನಾನು ದಯನೀಯವಾಗಿ ಸೋಲುತ್ತಿದ್ದೇನೆ. ದಯವಿಟ್ಟು ನನಗೆ ನೆರವಾಗಿ.

  'ಕೆಟ್ಟೋ' ದ ಮೂಲಕ ಸಂದೀಪ್ ಅವರು ಚಂದಾ ಎತ್ತಲು ಮುಂದಾಗಿದ್ದು, ಇಲ್ಲಿ 'ದೇಣಿಗೆ' ಸಲ್ಲಿಸುವುದರ ಮೂಲಕ ನೀವು ಅವರಿಗೆ ಸಹಾಯ ಮಾಡಬಹುದು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  His 7-Year-Old Son Needs A Surgery To Escape Lifelong Painful Blood Transfusions

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more