ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂದಿನಿ ಹಾಲಿನ ದರ 2 ರೂ. ಹೆಚ್ಚಳ

|
Google Oneindia Kannada News

milk
ಬೆಂಗಳೂರು, ಸೆ.11 : ಗಣೇಶ ಚತುರ್ಥಿ ಮುಗಿಯುತ್ತಿದ್ದಂತೆ ಕೆಎಂಎಫ್ ಹಾಲಿನ ದರ ಏರಿಕೆ ಮಾಡುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕಿದೆ. ಎಲ್ಲಾ ರೀತಿಯ ಹಾಲಿನ ದರವನ್ನು 2 ರೂ. ಏರಿಕೆ ಮಾಡಿದ್ದು, ಅರ್ಧ ಲೀಟರ್ ಮೊಸರಿನ ಬೆಲೆಯನ್ನು 1 ರೂ. ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಮಂಗಳವಾರ ರಾತ್ರಿ ಕೆಎಂಎಫ್ ಈ ಕುರಿತು ಆದೇಶ ಹೊರಡಿಸಿದ್ದು, ಸೆ.11ರ ಬುಧವಾರದಿಂದಲೇ ನೂತನ ದರ ಅನ್ವಯವಾಗಲಿದೆ ಎಂದು ತಿಳಿಸಿದೆ. ಸದ್ಯ ಹಾಲು ಮತ್ತು ಮೊಸರಿನ ಪ್ಯಾಕೆಟ್ ಮೇಲೆ ಹಳೆಯ ದರಗಳು ಮುದ್ರಣಗೊಂಡಿದೆ. 2 ದಿನದಲ್ಲಿ ಹೊಸ ದರ ಮುದ್ರಣಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದೆ.

ಟೋನ್‌, ಡಬಲ್‌ ಟೋನ್‌, ಹೋಮೋಜಿನೈಸ್ಡ್ ಟೋನ್‌, ಶುಭಂ, ಸಮೃದ್ಧಿ ಸೇರಿದಂತೆ ಎಲ್ಲ ರೀತಿಯ ಹಾಲಿನ ದರವೂ ಪ್ರತಿ ಲೀಟರ್ ಗೆ 2 ರೂ. ಹೆಚ್ಚಳವಾಗಿದೆ. ಅರ್ಧ ಲೀಟರ್ ಮೊಸರು ಪ್ಯಾಕೆಟ್ ಬೆಲೆ 1 ರೂ. ಹೆಚ್ಚಳ ಮಾಡಲಾಗಿದೆ.

ಚಿಲ್ಲರೆ ಸಮಸ್ಯೆ ನಿವಾರಿಸಲು 500 ಮಿ.ಲೀ. ಹಾಲಿನ ಮಾರಾಟ ದರ ರೌಂಡ್‌ ಆಫ್ ಮಾಡಲಾಗಿದ್ದು, ದರಕ್ಕೆ ತಕ್ಕಂತೆ 15 ರಿಂದ 20 ಮಿ.ಲೀ. ಹಾಲು ಹೆಚ್ಚುವರಿಯಾಗಿ ಪ್ಯಾಕ್‌ ಮಾಡಲಾಗುವುದು ಎಂದು ಕೆಎಂಎಫ್ ತಿಳಿಸಿದೆ.

ಸಮರ್ಥನೆ : ಹಾಲಿನ ದರ ಏರಿಕೆ ಮಾಡುವುದು ಅನಿವಾರ್ಯವಾಗಿತ್ತು ಎಂದು ಸಮರ್ಥಿಸಿಕೊಂಡಿರುವ ಕೆಎಂಎಫ್ ಅಧ್ಯಕ್ಷ ಸೋಮಶೇಖರರೆಡ್ಡಿ, ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ದರ ಹೆಚ್ಚಿಸಲಾಗಿದೆ. ಹಾಲಿನ ದರ ಹೆಚ್ಚಳ ಮಾಡದಿದ್ದರೆ ರೈತರಿಂದ ಖರೀದಿಸುವ ಹಾಲಿನ ಬೆಲೆ ಇಳಿಕೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.

ಈ ವರ್ಷದಲ್ಲಿ ಆರು ಬಾರಿಗೂ ಹೆಚ್ಚು ಡೀಸೆಲ್‌ ಮತ್ತು ಪೆಟ್ರೋಲ್‌ ದರಗಳು ಏರಿಕೆಯಾಗಿವೆ. ಕೆಎಂಎಫ್ ವತಿಯಿಂದ ದಿನಕ್ಕೆ ಎರಡು ಬಾರಿ ಸಂಗ್ರಹಿಸುವ ಹಾಲಿನ ಸಾಗಾಣಿಕೆ ವೆಚ್ಚ ಹೆಚ್ಚಾಗುತ್ತಿದ್ದು ದಿನಕ್ಕೆ 41.54 ಲಕ್ಷ ರೂ. ವೆಚ್ಚ ಭರಿಸಬೇಕಿದೆ.

ಪ್ಯಾಕಿಂಗ್‌ ವೆಚ್ಚವೂ ಅಧಿಕವಾಗಿದ್ದು ಪಶು ಆಹಾರದ ಕಚ್ಚಾ ಸಾಮಗ್ರಿಗಳ ಬೆಲೆ ಪ್ರತಿ ಟನ್‌ಗೆ 14 ಸಾವಿರ ರೂ.ನಿಂದ 19 ಸಾವಿರ ರೂ. ಆಗಿದೆ. ಹಾಲು ಉತ್ಪಾದಕರ ಅನುಕೂಲಕ್ಕಾಗಿ ಮಂಡಳಿಯು ಪಶು ಆಹಾರ ತಯಾರಿಸಿ ರಿಯಾಯಿತಿ ದರದಲ್ಲಿ ವಿತರಿಸುತ್ತಿದೆ ಎಂದು ಸೋಮಶೇಖರ ರೆಡ್ಡಿ ಮಾಹಿತಿ ನೀಡಿದರು.

ಜು.27ರಂದು ಕೆಎಂಎಫ್ ಆಡಳಿತ ಮಂಡಳಿ ಸಭೆ ನಡೆಸಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಪ್ರತಿ ಲೀ. ಹಾಲಿನ ದರದಲ್ಲಿ 2 ರೂ. ಏರಿಕೆ ಮಾಡುವ ತೀರ್ಮಾನ ಕೈಗೊಂಡು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಆದರೆ,ಲೋಕಸಭಾ ಉಪಚುನಾವಣೆ ಎದುರಾಗಿದ್ದರಿಂದ ದರ ಏರಿಕೆ ನಿರ್ಧಾರ ಮುಂದೂಡಲಾಗಿತ್ತು. ಇದೇ ಸೆ.2ರಂದು ನಡೆದ ಮತ್ತೊಂದು ಆಡಳಿತ ಮಂಡಳಿ ಸಭೆಯಲ್ಲಿ ದರ ಏರಿಕೆ ನಿರ್ಧಾರ ಅಂತಿಮಗೊಳಿಸಿ ಗಣೇಶ ಚತುರ್ಥಿ ನಂತರ ಜಾರಿ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು.

English summary
The Karnataka Milk Federation has increased the price of milk RS 2 per liter across the board. blaming the recent increases in petrol and diesel prices. The revised milk and curd prices will come into effect from Wednesday, September 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X