ಆಟದ ಹೆಲಿಕಾಪ್ಟರಿಗೆ ಹದಿಹರಯದ ಬಾಲಕ ಬಲಿ
ನ್ಯೂಯಾರ್ಕ್, ಸೆ.10: ಕ್ರೂರ ವಿಧಿಯಾಟದಲ್ಲಿ ಆಟದ ಹೆಲಿಕಾಪ್ಟರಿಗೆ ಹದಿಹರಯದ ಬಾಲಕ ಬಲಿಯಾಗಿದ್ದಾನೆ.
ಅವನು ರಿಮೋಟ್ ಕಂಟ್ರೋಲ್ ನಿಯಂತ್ರಿತ ಆಟದ ಹೆಲಿಕಾಪ್ಟರ್ ಜತೆ ಆಟವಾಡುತ್ತಿದ್ದ ಆದರೆ ಅದು ಸಡನ್ನಾಗಿ ಅವನ ಮೈಮೇಲೆ ಬಂದುಬಿಟ್ಟಿದೆ. ಕ್ಷಣಾರ್ಧದಲ್ಲಿ ಏನು ಮಾಡಲು ತೋಚದ ಬಾಲಕ ಮಾರಕ ಹೆಲಿಕಾಪ್ಟರಿಗೆ ಸ್ಥಳದಲ್ಲೇ ಬಲಿಯಾಗಿದ್ದಾನೆ. ಹೆಲಿಕಾಪ್ಟರ್ ಬಗ್ಗೆ ವಿಪರೀತ ಹುಚ್ಚು ಬೆಳೆಸಿಕೊಂಡಿದ್ದ ಪಿರೋಜೆಕ್, ಸೀವ್ಯೂ ರೋಟರಿ ವಿಂಗ್ಸ್ ಕ್ಲಬ್ ನಲ್ಲಿ ಹೆಚ್ಚಿನ ತರಬೇತಿ ಪಡೆಯುತ್ತಿದ್ದ. (ಕೆಳಗಿನ ಚಿತ್ರ ಸಾಂದರ್ಭಿಕ)

ಕಳೆದ ವಾರ ರೋಮನ್ ಪಿರೋಜೆಕ್ ಎಂಬ ಬಾಲಕ ಬ್ರೋಕ್ಲಿನ್ ಬಳಿ ಶೋರ್ ಪಾರ್ಕ್ ವೇನಲ್ಲಿ ಹೆಲಿಕಾಪ್ಟರ್ ಜತೆ ಆಟವಾಡುತ್ತಿದ್ದ. ಆದರೆ ಅದರಲ್ಲಿ ಏನು ತಾಂತ್ರಿಕ ದೋಷ ಕಾಣಿಸಿಕೊಂಡಿತೋ ಸರಕ್ಕಂತ ವಾಪಸಾದ ಹೆಲಿಕಾಪ್ಟರ್ ಅವನ ಕತ್ತನ್ನು ಸೀಳಿದೆ. ತೀವ್ರವಾಗಿ ರಕ್ತಸ್ರಾವಕ್ಕೀಡಾದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
'ಬಾಲಕನೊಬ್ಬ ಪಾರ್ಕಿನಲ್ಲಿ ಹೆಲಿಕಾಪ್ಟರಿನೊಂದಿಗೆ ಆಟವಾಡುತ್ತಿರುವಾಗ ಅದು ಅವನ ಕತ್ತು ಸೀಳಿತ್ತು. ತಕ್ಷಣ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆ ವೇಳೆಗೆ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು' ಎಂದು ವೈದ್ಯರು ತಿಳಿಸಿದ್ದಾರೆ.
ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಹಾರುವ ಆಟದ ವಸ್ತುಗಳ ಬಳಕೆಗೆ ನಿಷೇಧ ಹೇರಿದ್ದಾರೆ. ಈ ಎಲೆಕ್ಟ್ರಾನಿಕ್ ಹೆಲಿಕಾಪ್ಟರಿನಲ್ಲಿ ಏನು ದೋಷವಿತ್ತು ಎಂಬುದನ್ನು ಪತ್ತೆ ಹಚ್ಚಿ ಮುಂದೆ ಇಂತಹ ದುರಂತಗಳು ನಡೆಯದಂತೆ ಕಟ್ಟುನಿಟ್ಟಿನ ಪ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ- PTI












Click it and Unblock the Notifications