ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಕೋ ಜೈಶಂಕರ್ ಸೆರೆಸಿಕ್ಕಿದ್ದು ಹೇಗೆ?

|
Google Oneindia Kannada News

ಬೆಂಗಳೂರು, ಸೆ.6 : ಪರಪ್ಪನ ಅಗ್ರಹಾರ ಜೈಲಿನಿಂದ ಸಿನೀಮಯ ರೀತಿಯಲ್ಲಿ ಪರಾರಿಯಾಗಿದ್ದ ಸೈಕೋ ಕಿಲ್ಲರ್ ಜಯಶಂಕರ್ ತನ್ನ ಸ್ನೇಹಿತರಿಗೆ ಕರೆ ಮಾಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಜಯಶಂಕರ್ ಸ್ನೇಹಿತರ ಪೋನ್ ಕರೆಯ ಮಾಹಿತಿ ಮೇರೆಗೆ ಅವನನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಹೇಳಿದ್ದಾರೆ.

Jaishankar

ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ಪ್ರತಿಕಾಗೋಷ್ಠಿ ನಡೆಸಿ ರಾಘವೇಂದ್ರ ಔರಾದ್ಕರ್, ಜೈ ಶಂಕರ್ ಬಂಧನದ ಮಾಹಿತಿಯನ್ನು ನೀಡಿದರು. ತಾನು ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಕೂಡ್ಲು ಗೇಟ್ ಬಳಿ ಇದ್ದೇನೆ ಎಂದು ಸ್ನೇಹಿತರಿಗೆ ಕರೆ ಮಾಡಿದ್ದ. ಈ ಫೋನ್ ಕರೆ ಆಧರಿಸಿ ಆತನನ್ನು ಬಂಧಿಸಲಾಗಿದೆ ಎಂದು ಔರಾದ್ಕರ್ ತಿಳಿಸಿದರು.

ಪರಪ್ಪನ ಅಗ್ರಹಾರ ಜೈಲಿನಿಂದ ತಪ್ಪಿಸಿಕೊಳ್ಳುವಾಗ ಜೈ ಶಂಕರ್ ಕಾಲಿಗೆ ಗಾಯಗಳಾಗಿತ್ತು. ಆತನ ಮೊಣಕಾಲು ಊದಿಕೊಂಡಿತ್ತು. ಆದ್ದರಿಂದ ಆತ ಹೆಚ್ಚು ದೂರ ಪ್ರಯಾಣಿಸಲಾಗದೆ ಬೆಂಗಳೂರಿನಲ್ಲೇ ಉಳಿದಿದ್ದ ಎಂದು ಆಯುಕ್ತರು ಹೇಳಿದರು.

ಜಯಶಂಕರ್ ಪತ್ತೆಗಾಗಿ 4 ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಹಿಂದೆ ಚಿತ್ರದುರ್ಗ, ತುಮಕೂರಿನಲ್ಲಿ ಜೈಶಂಕರ್ ಬಂಧಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸರು ತಂಡದಲ್ಲಿದ್ದರು ಎಂದು ಔರಾದ್ಕರ್ ಮಾಹಿತಿ ನೀಡಿದರು.

ನಮ್ಮ ಮಾಹಿತಿದಾರರು ಜೈಶಂಕರ್ ಬೆಂಗಳೂರಿನಲ್ಲಿದ್ದಾನೆ ಎಂದು ಮಾಹಿತಿ ಒದಗಿಸಿದ್ದರು. ಜೊತೆಗೆ ನಾವು ಜೈಶಂಕರ್ ಸ್ನೇಹಿತರ ಮೊಬೈಲ್ ನಂಬರ್ ಗಳನ್ನು ಕರೆಗಳ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೆವು. ಇವುಗಳ ಆಧಾರದ ಮೇಲೆಯೇ ಆತನನ್ನು ಬಂಧಿಸಲಾಗಿದೆ ಎಂದರು.

ಶುಕ್ರವಾರ ಜೈಶಂಕರ್ ನಾನು ಬೆಂಗಳೂರಿನಲ್ಲಿದ್ದೇನೆ ಎಂದು ಸ್ನೇಹಿತರಿಗೆ ಕರೆ ಮಾಡಿದ ಕರೆಯ ಮಾಹಿತಿ ಆಧಿರಿಸಿ, ಆತನನ್ನು ಬಂಧಿಸಲಾಗಿದೆ ಎಂದು ಹೇಳಿದರು. ಭದ್ರತಾ ದೃಷ್ಟಿಯಿಂದ ಕಾರ್ಯಾಚರಣೆಯ ಸಂಪೂರ್ಣ ವಿವರ ನೀಡಲು ಸಾಧ್ಯವಿಲ್ಲ ಎಂದರು. (ಸೈಕೋ ಜಯಶಂಕರ್ ಯಾರು?)

ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಕೆ.ಜೆ.ಜಾರ್ಜ್ ಜೈ ಶಂಕರ್ ನನ್ನು ಬಂಧಿಸುವಂತೆ ಆದೇಶಿಸಿದ್ದರು. ಪೊಲೀಸ್ ಇಲಾಖೆ ಕನ್ನಡ, ತಮಿಳು, ಇಂಗ್ಲಿಶ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ಜೈಶಂಕರ್ ಕುರಿತು ಮಾಹಿತಿ ನೀಡುವಂತೆ 10 ಸಾವಿರ ಪೋಸ್ಟರ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿತ್ತು ಎಂದು ತಿಳಿಸಿದರು.

ಪೊಲೀಸರ ತಂಡ : ಸೈಕೋ ಜಯಶಂಕರ್ ಬಂಧನದ ತಂಡದ ನೇತೃತ್ವವನ್ನು ಬಿ.ಕೆ.ಸಿಂಗ್ ವಹಿಸಿದ್ದರು. ತಂಡದಲ್ಲಿ ಬೆಂಗಳೂರಿನ ಇನ್ಸ್ ಪೆಕ್ಟರ್ ಗಳಾದ ಬಾಲಾಜಿ ಸಿಂಗ್, ಲಕ್ಷ್ಮೀನಾರಾಯಣ್, ಶ್ರೀನಿವಾಸ್, ಬಾಪು, ಮಹೇಶ್, ಶಿರಾದ ರವಿ ಮತ್ತು ಚಿತ್ರದುರ್ಗದ ಪಿಎಸ್ಐ ಉಮೇಶ್ ಮುಂತಾದವರಿದ್ದರು ಎಂದು ಮಾಹಿತಿ ನೀಡಿದರು.

ಗುಡಿಸಲಿನಲ್ಲಿ ಅಡಗಿದ್ದ : ಜೈ ಶಂಕರ್ ಕೂಡ್ಲುಗೇಟ್ ಬಳಿಯಿದ್ದ ಪಾಳುಬಿದ್ದಂತಿದ್ದ ಗುಡಿಸಲಿನಲ್ಲಿ ವಾಸವಾಗಿದ್ದ. ಕೂಡ್ಲುಗೇಟ್ ಬಳಿಯ ಕೆರೆಯಲ್ಲಿ ಮೀನುಹಿಡಿಯುವವರು ಮಾಡಿಕೊಂಡಿದ್ದ ಗುಡಿಸಿಲಿನಲ್ಲಿ ಜೈ ಶಂಕರ್ ತಂಗಿದ್ದ.

ಗುಡಿಸಿಲಿನ ಅಕ್ಕಪಕ್ಕದ ಜನರಿಗೆ ತಾನು ತಮಿಳುನಾಡಿನ ಸರ್ಕಾರಿ ಬಸ್ ಚಾಲಕನಾಗಿದ್ದು, ಬಸ್ ಅಪಘಾತ ಸಂಭವಿದೆ. ಆದ್ದರಿಂದ ಪೊಲೀಸರು ನನ್ನು ಬಂಧಿಸಲು ಹುಡುಕುತ್ತಿದ್ದಾರೆ. ನನಗೆ ಇಲ್ಲಿ ವಾಸಿಸಲು ಅವಕಾಶ ನೀಡಿ ಎಂದು ಸುಳ್ಳು ಹೇಳಿ ಗುಡಿಸಲು ಸೇರಿದ್ದ.

ಶುಕ್ರವಾರ ಅಲ್ಲಿನ ಜನರಿಗೆ ನೀರು ಮತ್ತು ಊಟ ತೆಗೆದುಕೊಂಡು ಬರುವಂತೆ ಹಣ ನೀಡಿದ್ದ. ನಂತರ ಅವರ ಮೊಬೈಲ್ ಮೂಲಕ ತನ್ನ ಸ್ನೇಹಿತರಿಗೆ ಕರೆ ಮಾಡಿ ತಾನು ಇಲ್ಲಿದ್ದೇನೆ ಎಂದು ಮಾಹಿತಿ ನೀಡಿದ್ದ.

ಈ ಕರೆಯ ಮಾಹಿತಿ ಆಧಾರದ ಮೇಲೆಯೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಜೈಶಂಕರ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದ ಜೈಶಂಕರ್ ನನ್ನು ಐದು ದಿನಗಳಲ್ಲಿಯೇ ಬಂಧಿಸಿದ ಪೊಲೀಸರ ಸಾಹಸ ಮೆಚ್ಚಲೇಬೇಕು.

English summary
Notorious criminal and serial rapist Jaishankar, who made a sensational escape from the high-security central prison Parappana Agrahara on September 1, was arrested on Friday, September 6. Jaishankar was arrested from Kudligate in Bangalore said, Bangalore Police Commissioner Raghavendra Auradkar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X