ಬೆಂಗಳೂರಿಗರೇ ಶೀಘ್ರ ಆಧಾರ್ ಕಾರ್ಡ್ ಪಡೆದುಕೊಳ್ಳಿ

ರಾಜ್ಯದ ತುಮಕೂರು, ಮೈಸೂರು ಸೇರಿದಂತೆ ದೇಶದ 20 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತಂದು ಯಶಸ್ವಿಯಾಗಿರುವ ಕೇಂದ್ರ ಸರ್ಕಾರ, 2014ರ ಜ.1ರೊಳಗೆ ದೇಶದ 289 ಜಿಲ್ಲೆಗಳಿಗೆ ಯೋಜನೆ ವಿಸ್ತರಿಸಲು ಚಿಂತನೆ ನಡೆಸಿದೆ.
ಕೇಂದ್ರ ಸರ್ಕಾರದ ಸರ್ಕಾರದ ಪ್ರಸ್ತಾಪದಂತೆ, ಅ.1ರಿಂದ ಉಡುಪಿ ಸೇರಿದಂತೆ ದೇಶದ 44 ಜಿಲ್ಲೆ, ನ.1ರಿಂದ ಉತ್ತರ ಕನ್ನಡ ಸೇರಿದಂತೆ ದೇಶದ 46 ಜಿಲ್ಲೆ, ಡಿ.1ರಿಂದ ಬೆಂಗಳೂರು ಸೇರಿದಂತೆ 40 ಜಿಲ್ಲೆ ಮತ್ತು 2014ರ ಜ.1ರಿಂದ ಬೆಳಗಾವಿ ಸೇರಿದಂತೆ ದೇಶದ 105 ಜಿಲ್ಲೆಗಳಲ್ಲಿ ಯೋಜನೆ ಜಾರಿಗೆ ಬರಲಿದೆ.
ಈ ಯೋಜನೆ ಜಾರಿಯಾಗುವ 289 ಜಿಲ್ಲೆಗಳ ಅಡುಗೆ ಅನಿಲ ಗ್ರಾಹಕರು ಇನ್ನು ಮುಂದೆ ಗೃಹೋಪಯೋಗಿ ಎಲ್‌ಪಿಜಿ ಸಿಲಿಂಡರ್ ಅನ್ನು ಮಾರುಕಟ್ಟೆ ದರದಲ್ಲಿ ಖರೀದಿ ಮಾಡಬೇಕಾಗುತ್ತದೆ. ನಂತರ ಕೇಂದ್ರ ಸರ್ಕಾರ, ಎಲ್‌ಪಿಜಿಯ 435 ರೂ. ಸಬ್ಸಿಡಿ ಹಣವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲಿದೆ.
ಆಧಾರ್ ನಂಬರ್ ಬೇಕು : ಬ್ಯಾಂಕ್ ಖಾತೆಗೆ ನೇರವಾಗಿ ಸಬ್ಸಿಡಿ ಹಣ ಪಡೆಯಬೇಕಿದ್ದರೆ ಗ್ರಾಹಕರು ತಮ್ಮ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಬ್ಯಾಂಕ್ ಖಾತೆಯೊಂದಿಗೆ ನಮೂದಿಸಿರಬೇಕು. ಆಧಾರ್ ಸಂಖ್ಯೆ ನಮೂದಿಸಲು ಯೋಜನೆ ಜಾರಿಗೆ ಬಂದ ನಂತರ ಮೂರು ತಿಂಗಳ ವಿಯಾಯಿತಿ ನೀಡಿದೆ. (ಆಧಾರ್ LPG ಸಬ್ಸಿಡಿ ಪ್ರಕ್ರಿಯೆ ತಿಳಿಯುವುದು ಹೇಗೆ?)
ಮೂರು ತಿಂಗಳ ನಂತರ ಆಧಾರ್ ಸಂಖ್ಯೆ ಹೊಂದಿದ್ದ ಗ್ರಾಹಕರ ಖಾತೆಗಷ್ಟೇ ಸಬ್ಸಿಡಿ ಹಣ ವರ್ಗಾವಣೆಯಾಗಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಹೊಸದಾಗಿ 289 ಜಿಲ್ಲೆಗಳಲ್ಲಿ ಯೋಜನೆ ಜಾರಿಯಾದ ಬಳಿಕ ದೇಶದ ಬಹುತೇಕ ಎಲ್ಲಾ ರಾಜ್ಯಗಳ ರಾಜಧಾನಿಗಳೂ ಈ ಯೋಜನೆ ವ್ಯಾಪ್ತಿಗೆ ಒಳಪಡುತ್ತವೆ.












Click it and Unblock the Notifications