ಪ್ರೇಯಸಿ ಆತ್ಮಹತ್ಯೆ; ಪ್ರಿಯಕರ ಟೆಕ್ಕಿಯೂ ಆತ್ಮಹತ್ಯೆ

ಇತ್ತ, ತನ್ನ ಪ್ರೇಮ- ಪ್ರೇಯಸಿ ತನಗೆ ದಕ್ಕಲಿಲ್ಲ ಎಂದು ಯುವಕನೂ ಬುಧವಾರ ಸಂಜೆ ಬೆಳಗ್ಗೆ ನೇಣು ಹಾಕಿಕೊಂಡು ಸಾವಿನಲ್ಲಿ ಇಬ್ಬರೂ ಒಂದಾಗಿದ್ದಾರೆ
ಯಲಹಂಕ ನ್ಯೂಟೌನ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಸೋಮೇಶ್ವರ ನಗರವಾಸಿ ಸೂರಜ್ ಕುಮಾರ್ (27) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ. ಟೆಕ್ಕಿಯಾಗಿರುವ ಸೂರಜ್ ಸಣ್ಣ ಸಾಫ್ಟ್ ವೇರ್ ಕಂಪನಿ ನಡೆಸುತ್ತಿದ್ದ. ಈತ ಯುವತಿಯೊಬ್ಬಳನ್ನು ಏಳು ವರ್ಷಗಳಿಂದಲೂ ಪ್ರೀತಿಸುತ್ತಿದ್ದ.
ಆದರೆ ಇವರ ಮದುವೆಗೆ ಎರಡೂ ಕುಟುಂಬದವರಿಂದ ವಿರೋಧವಿತ್ತು ಎನ್ನಲಾಗಿದೆ. 3 ದಿನಗಳ ಹಿಂದೆ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರಿಂದ ಸೂರಜ್ ತೀವ್ರವಾಗಿ ಮನನೊಂದಿದ್ದ. ನಿನ್ನೆ ಸಂಜೆ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
'ಆತ್ಮಹತ್ಯೆಗೂ ಮುನ್ನ ಪತ್ರವೊಂದನ್ನು ಬರೆದಿದ್ದು, ಪ್ರೀತಿಸಿದ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವಳಿಲ್ಲದೆ ನನಗೆ ಬದುಕಲು ಸಾಧ್ಯವಾಗುತ್ತಿಲ್ಲ' ಎಂದು ತಿಳಿಸಿದ್ದಾನೆ. ತನ್ನ ಹೆಸರಲ್ಲಿ ಯಾವುದೇ ಸಾಲ ಇಲ್ಲ ಎಂದು ತಂದೆ, ತಾಯಿ, ತಮ್ಮನಿಗೆ ತಿಳಿಸುತ್ತಾ ಅವರ ಕ್ಷಮೆ ಕೋರಿದ್ದಾನೆ.
ಈ ಸಂಬಂಧ ಯಲಹಂಕ ನ್ಯೂಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.












Click it and Unblock the Notifications