ದೀಪಾವಳಿ ವೇಳೆಗೆ ಚಿನ್ನದ ಬೆಲೆ 40 K

ನವದೆಹಲಿ, ಸೆ.1: ಶ್ರಾವಣ ಮಾಸ ಬಂದಾಗ ಮಾವು ಚಿಗುರಲೇಬೇಕು ಎಂಬ ಸಾಲಿನ ಜತೆಗೆ ಹಬ್ಬದ ಸೀಸನ್ ಶುರುವಾದಂತೆ ಚಿನ್ನದ ಬೆಲೆಯೂ ಏರಲೇಬೇಕು ಎಂಬ ಅಲಿಖಿತ ನಿಯಮ ಭಾರತದಲ್ಲಿ ಜಾರಿಯಲ್ಲಿದೆ.

ಮದುವೆ ಮುಂತಾದ ಶುಭ ಸಂದರ್ಭಗಳಿಗೆ ಚಿನ್ನ ಕೊಳ್ಳುವ ಐಡಿಯಾ ಇದ್ದರೆ ಈಗಲೇ ಖರೀದಿಸಿಬಿಡಿ. ಇಲ್ಲವೇ ವಿತ್ತ ಸಚಿವ ಪಿ ಚಿದಂಬರಂ ಮಾತು ಕೇಳಿ ಖರೀದಿಸದೇ ಸುಮ್ಮನಿದ್ದು ಬಿಡಿ. ದೀಪಾವಳಿ ತನಕ ಕಾಯುವ ಯೋಜನೆ ಹಾಕಿಕೊಂಡರೆ ಬಂತು ತೊಂದರೆ. ದೀಪಾವಳಿ ವೇಳೆಗೆ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 40,000 ರುಗೆ ಏರುವುದು ಖಾತ್ರಿಯಾಗಿದೆ.

ಕಳೆದ ಶನಿವಾರ ರೂಪಾಯಿ ಚೇತರಿಸಿಕೊಂಡ ಪರಿಣಾಮ 32,325 ರೂ.ಗಳಷ್ಟಿದ್ದ 10 ಗ್ರಾಂ ಚಿನ್ನ 31,700 ರೂ.ಗಳಿಗೆ ಇಳಿದಿತ್ತು. ಆದರೆ ಮತ್ತೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಬೆಲೆ ಜಿಗಿತಗೊಳ್ಳಲಿದೆಯಂತೆ. ಕಾರಣ ಮಾರುಕಟ್ಟೆಯಲ್ಲಿ ಹೆಚ್ಚುವ ಬೇಡಿಕೆ ಮತ್ತು ರೂಪಾಯಿ ಅಪಮೌಲ್ಯದ ಪರಿಣಾಮ ಆಮದಿನಲ್ಲಿ ಆಗಿರುವ ವ್ಯತ್ಯಯ ಕಾರಣವಂತೆ.

ಪ್ರತಿ ವರ್ಷ ದೀಪಾವಳಿ ಸೇರಿದಂತೆ ಆಗಸ್ಟ್ ನಂತರದ ಹಬ್ಬದ ಸೀಸನ್ ಬಂದರೆ ಸಹಜವಾಗಿಯೇ ಚಿನ್ನದ ಖರೀದಿಯಲ್ಲಿ ಶೇ.30ರಿಂದ 35ರಷ್ಟು ಹೆಚ್ಚಳವಾಗಲಿದೆ. ಅದರಲ್ಲೂ ವಿಶೇಷವಾಗಿ ಲಕ್ಷ್ಮೀ ದಿನವೆಂದೇ ನಂಬಿರುವ ದೀಪಾವಳಿ ಅಮಾವಾಸ್ಯೆಯಲ್ಲಂತೂ ಹಳದಿ ಲೋಹದ ಖರೀದಿ ಭಾರೀ ಜೋರಾಗಿ ನಡೆಯಲಿದೆ.

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಬಹುತೇಕ ದಕ್ಷಿಣದ ರಾಜ್ಯಗಳಲ್ಲಿ ಜುಲೈ ಅಂತ್ಯದಿಂದ ಮದುವೆ ಸೀಜನ್ ಆರಂಭಗೊಳ್ಳಲಿದೆ. ಹೀಗಾಗಿ ಚಿನ್ನದ ಖರೀದಿ ಹೆಚ್ಚುವುದು ಖಂಡಿತ.

Get ready to spend as much as 40 K per 10 gm in Diwali

ಕಳೆದ ವರ್ಷ ಮುಂಬೈ ಚಿನಿವಾರ ಪೇಟೆಯೊಂದರಲ್ಲೇ ದೀಪಾವಳಿ ಋತುವಿನಲ್ಲಿ ಶೇ.40ರಷ್ಟು ಚಿನ್ನ ಖರೀದಿ ಪ್ರಮಾಣ ಏರಿತ್ತು. ಈ ಬಾರಿ ರೂಪಾಯಿ ಅಪಮೌಲ್ಯ ಪರಿಣಾಮದಿಂದ ಹಳದಿ ಲೋಹ ದರ ಹೆಚ್ಚಿಸಿಕೊಂಡಿದ್ದು , ಖರೀದಿ ಉತ್ಸಾಹ ಅಷ್ಟು ಮಟ್ಟಿಗೆ ಕಂಡು ಬರುವುದು ಕಷ್ಟವಾದರೂ ಶೇ.30ರಷ್ಟು ವಹಿವಾಟು ಹೆಚ್ಚುವ ಸಾಧ್ಯತೆಗಳಿವೆ.

ರೂಪಾಯಿ ಅಪಮೌಲ್ಯ ಪರಿಣಾಮ ಆ.1ರಿಂದ ಆ.28ರ ವೇಳೆಗೆ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 3,000ದಷ್ಟು (10 ಗ್ರಾಂ) ಏರಿಕೆ ಕಂಡು ಬಂದಿದೆ.

ಆಮದು ಹೇಗಿದೆ?: ರೂಪಾಯಿ ಅಪಮೌಲ್ಯದ ಪರಿಣಾಮ ಚಿನ್ನದ ಆಮದಿನ ಮೇಲೂ ಹೊಡೆತ ಬೀಳುವಂತೆ ಮಾಡಿದೆ. ಮೇ ತಿಂಗಳಲ್ಲಿ 162 ಟನ್ ‌ಗಳಷ್ಟು ಆಮದು ಮಾಡಿಕೊಂಡಿದ್ದ ಚಿನಿವಾರ ಪೇಟೆ ಉದ್ಯಮಿಗಳು ಜುಲೈಗೆ ಕೇವಲ 47 ಟನ್ ಮತ್ತು ಆಗಸ್ಟ್ ಮೂರನೆ ವಾರಕ್ಕೆ 5 ಟನ್ ಗಳಷ್ಟು ಚಿನ್ನವನ್ನು ವಿದೇಶದಿಂದ ಖರೀದಿ ಮಾಡಿದ್ದಾರೆ.

ರೂಪಾಯಿ ಕುಸಿತದ ಸಮಸ್ಯೆಯಿಂದ ಹೊರ ಬರಲು ಕೆಲ ಗ್ರಾಹಕರು ತಮ್ಮ ಹಳೆಯ ಚಿನ್ನವನ್ನು ನೀಡಿ ಹೊಸ ಚಿನ್ನ ಖರೀದಿಸುವ ಉತ್ಸಾಹ ತೋರಿದ್ದಾರೆ. ಹಾಗಾಗಿ ಈಗಷ್ಟೇ ಮಾರುಕಟ್ಟೆಗೆ ಬಂದಿರುವ ಚಿನ್ನದ ಬೇಡಿಕೆಯೂ ಕುಗ್ಗಬಹುದು.

ಆದರೆ ನವೆಂಬರ್ ನಂತರ ದೇಶಾದ್ಯಂತ ದೀಪಾವಳಿ ಸೇರಿದಂತೆ ಆಚರಿಸುವ ಸಾಲು ಸಾಲು ಹಬ್ಬಗಳ ವೇಳೆ ಗ್ರಾಮೀಣ ಭಾಗದಿಂದ ನಗರಗಳ ಗ್ರಾಹಕರು ಚಿನ್ನ ಕೊಳ್ಳಲು ಮುಗಿ ಬೀಳಲಿದ್ದಾರೆ. ಚಿನ್ನ ಖರೀದಿಯಲ್ಲಿ ಭಾರತದ ಗ್ರಾಮೀಣ ಪ್ರದೇಶದ ಜನ ಶೇ.70ರಷ್ಟು ಖರೀದಿ ಮಾಡಿದರೆ ನಗರ ಪ್ರದೇಶದ ಜನ ಶೇ.30ರಷ್ಟು ಚಿನ್ನವನ್ನು ಖರೀದಿಸುತ್ತಾರೆ.

ಕಳೆದ ವರ್ಷ 10 ಗ್ರಾಂ ಚಿನ್ನದ ಬೆಲೆ 27,130 ರಷ್ಟಿತ್ತು, ಇದೀಗ 32,500 ಕ್ಕೆ ಬಂದು ನಿಂತಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಗಟ್ಟಿ ಮತ್ತು ನಾಣ್ಯ ಸ್ವರೂಪದ ಚಿನ್ನವನ್ನು ಸರ್ಕಾರವೇ ನಾಗರಿಕರಿಂದ ಖರೀದಿಸುತ್ತಿದ್ದರೆ, ಇತ್ತ ತಿರುಪತಿ ಸೇರಿದಂತೆ ದೇಶದ ಪ್ರತಿಷ್ಠಿತ ದೇಗುಲಗಳ ಚಿನ್ನ ಖರೀದಿ ಮಾಡಿ ಅದನ್ನು ಮಾರುಕಟ್ಟೆಗೆ ಹೊಸ ಸ್ವರೂಪದಲ್ಲಿ ಬಿಡುಗಡೆ ಮಾಡುವ ಪ್ರಕ್ರಿಯೆಗೂ ಚಾಲನೆ ಕೊಟ್ಟಿದೆ.

ಇದೆಲ್ಲವೂ ಕನಿಷ್ಟ ಎರಡು, ಮೂರು ತಿಂಗಳ ಕಾಲಾವಕಾಶ ತೆಗೆದುಕೊಳ್ಳಲಿದ್ದು, ಅಷ್ಟರವರೆಗೂ ಚಿನ್ನ ಖರೀದಿ ಅನಿವಾರ್ಯವಾದವರು ಹೆಚ್ಚು ಬೆಲೆ ತೆರಲೇಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+