ಈತ ನಡೆಸಿದ ಅತ್ಯಾಚಾರ ಒಂದೆರಡಲ್ಲ, ಹದಿನಾರು!

ಬೆಂಗಳೂರು, ಆ. 28 : ಮಹಿಳೆಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ದೇಶದೆಲ್ಲೆಡೆ ಹುಯಿಲೆದ್ದಿರುವ ಸಂದರ್ಭದಲ್ಲಿ, ಅಪ್ರಾಪ್ತ ಬಾಲಕಿಯರ ಮೇಲೆ ಸರಣಿ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ವಿಕೃತ ಕ್ರಿಮಿಯನ್ನು ಬಂಧಿಸುವಲ್ಲಿ ಬೆಂಗಳೂರಿನ ಪೊಲೀಸರು ಯಶಸ್ವಿಯಾಗಿದ್ದಾರೆ.

30 ವರ್ಷದ ಈ ಕಾಮುಕ ಮಾಡಿದ ಹೇಯ ಕೆಲಸಗಳು ಒಂದೆರಡಲ್ಲ. ಕಳೆದೆರಡು ತಿಂಗಳಲ್ಲಿ ಅನಾಮತ್ 16 ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸರಣಿ ಅತ್ಯಾಚಾರಿಯನ್ನು ಮಂಗಳವಾರ ಬಂಧಿಸಲಾಗಿದೆ.

ಈತ ಹೊಂಚು ಹಾಕಿ 6ರಿಂದ 10 ವರ್ಷ ವಯಸ್ಸಿನ ಎಳೆಯ ಬಾಲಕಿಯರನ್ನು ಅಪಹರಿಸುತ್ತಿದ್ದ. ನಂತರ ದೂರದ ಪ್ರದೇಶಕ್ಕೆ ಕರೆದುಕೊಂಡು ಹೋಗಿ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ. ಅವರನ್ನು ದೂರದಲ್ಲೆಲ್ಲೋ ಬಿಟ್ಟು ಈತ ಪರಾರಿಯಾಗಿಬಿಡುತ್ತಿದ್ದ ಎಂದು ಬೆಂಗಳೂರಿನ ಪೊಲೀಸರು ತಿಳಿಸಿದ್ದಾರೆ.

Serial rapist arrested in Bangalore, student gangraped in Meerut

ಬೆಂಗಳೂರು ಪೊಲೀಸ್ ಕಮಿಷನರ್ ಪ್ರಕಾರ, ಈತ ಒಟ್ಟಾರೆಯಾಗಿ 31 ಅಪಹರಣ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನ ಹೇಳಿಕೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಎಸಗಿರುವುದರ ಜೊತೆಗೆ ಬೈಕ್ ಕಳ್ಳತನ, ಪಿಕ್ ಪಾಕೆಟ್ ಮತ್ತು ಕೆಲ ಹೆಂಗಸರನ್ನು ವಂಚಿಸಿದ ಆರೋಪಗಳನ್ನೂ ಎದುರಿಸುತ್ತಿದ್ದಾನೆ.

ಮೀರತ್ ನಲ್ಲಿ ಸಾಮೂಹಿಕ ಅತ್ಯಾಚಾರ : ದೇಶದೆಲ್ಲೆಡೆ ಅತ್ಯಾಚಾರದ ವಿರುದ್ಧ ಆಕ್ರೋಶ ಮುಗಿಲು ಮುಟ್ಟುತ್ತಿದ್ದರೂ ಸಾಮೂಹಿಕ ಅತ್ಯಾಚಾರಗಳು ನಡೆಯುತ್ತಲೇ ಇವೆ. ಮುಂಬೈನಲ್ಲಿ ಪತ್ರಕರ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಕೆಲವೇ ದಿನಗಳಲ್ಲಿ ಉತ್ತರಪ್ರದೇಶದ ಮೀರತ್ ನಲ್ಲಿ 17 ವರ್ಷದ ವಿದ್ಯಾರ್ಥಿನಿಯ ಮೇಲೆ ಹಾಡುಹಗಲೇ ಸಾಮೂಹಿಕ ಅತ್ಯಾಚಾರವನ್ನು ಎಸಗಲಾಗಿದೆ.

ಕಾರಿನಲ್ಲಿ ಬಂದು ವಿದ್ಯಾರ್ಥಿನಿಯನ್ನು ಅಪಹರಿಸಿದ ನಾಲ್ವರು ದುರುಳರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಆಕೆ ಸಹಾಯಕ್ಕಾಗಿ ಕೂಗಿಕೊಂಡಾಗ ಹತ್ತಿರದ ಹೊಲದಲ್ಲಿ ಕೆಲಸ ಮಾಡುತ್ತಿದ್ದವರು ಓಡಿಬಂದು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದಾರೆ. ವೈದ್ಯಕೀಯ ವರದಿಯ ಪ್ರಕಾರ, ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+