ಗಜ ಪಯಣ ಆರಂಭ: ಮೈಸೂರು ದಸರಾ ಸಡಗರ ಕಲರವ

ಬೆಂಗಳೂರು, ಆಗಸ್ಟ್ 28: ವಿಶ್ವಪ್ರಸಿದ್ಧ ಮೈಸೂರು ದಸರಾದ ಸಡಗರ ಸಂಭ್ರಮಕ್ಕೆ ಇಂದು ಅಧಿಕೃತ ಚಾಲನೆ ದೊರೆಯಲಿದೆ. ದಸರಾ ಮಹೋತ್ಸವದ ಅಂಗವಾಗಿ ಅಂಬಾರಿ ಹೊರಲು ಆನೆ ಪಡೆ ಸಜ್ಜಾಗಿದ್ದು, ಇಂದು ಆನೆಗಳನ್ನು ಅರಮನೆಯ ಆವರಣಕ್ಕೆ ಸ್ವಾಗತಿಸಲಾಗುವುದು. ಹುಣಸೂರು ತಾಲ್ಲೂಕಿನ ವೀರನ ಹೊಸಹಳ್ಳಿಯ ನಾಗಾಪುರ ಗಿರಿಜನ ಶಾಲೆ ಆವರಣದಿಂದ ಇಂದು (ಆ 28) ಗಜ ಪಯಣ ಆರಂಭವಾಗಲಿದೆ.

ಈ ಮಧ್ಯೆ, ಇತ್ತೀಚಿನ ವರ್ಷಗಳಲ್ಲಿ ದಸರಾ ಸಂದರ್ಭದಲ್ಲಷ್ಟೇ ಕಾನಿಸಿಕೊಳ್ಳುವ ಪ್ರಾಣಿ ಹಿಂಸೆ ವಿವಾದ ಈ ಬಾರಿಯೂ ಭುಗಿಲೆದ್ದಿತ್ತು. ಆದರೆ ಮೈಸೂರಿನವರೇ ಆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಈ ವಿಷಯದಲ್ಲಿ ವಿಶಿಷ್ಟ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಮುಂದುವರಿಸಿಕೊಂಡು ಹೋಗುವ ದೃಢ ಸಂಕಲ್ಪ ಮಾಡಿದೆ. ಹಾಗಾಗಿ ಅಂಬಾರಿ ಸವಾರಿ ಅಬಾಧಿತವಾಗಿ ಸಾಂಗೋಪಾಂಗವಾಗಿ ನೆರವೇರಲಿದೆ.

ಆನೆ ಅಂಬಾರಿ: ಹೈಕೋರ್ಟ್ ನಿಲುವೇನು?

ಆನೆ ಅಂಬಾರಿ: ಹೈಕೋರ್ಟ್ ನಿಲುವೇನು?

ದಸರಾ ಮಹೋತ್ಸವದಲ್ಲಿ ಆನೆಯ ಮೇಲೆ 750 ಕೆಜಿ ತೂಕದ ಅಂಬಾರಿ ಹೊರಿಸುವುದು ತರವಲ್ಲ. ಅದು ಪ್ರಾಣಿ ಹಿಂಸೆ ಆಗುತ್ತದೆ. ಕಡಿಮೆ ತೂಕದ ಚಿನ್ನ ಲೇಪಿತ ಅಂಬಾರಿಯನ್ನೇಕೆ ಬಳಸಬಾರದು? ಎಂಬೆಲ್ಲ ಪ್ರಶ್ನಾ(ಹಾ)ವಳಿ/ಸಲಹೆ/ ಸೂಚನೆಗಳ ಬಳಿಕ ಖುದ್ದು ಹೈಕೋರ್ಟ್ ಉತ್ತರಿಸಿದ್ದು - ಇದು ಧರ್ಮಸೂಕ್ಷ್ಮ ಮತ್ತು ಅನಾದಿಕಾಲದಿಂದಲೂ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ. ಅದಕ್ಕೆ ಚ್ಯುತಿ ತರುವುದು ಬೇಡ. ಹಾಗಾಗಿ ಈ ವಿಷಯದಲ್ಲಿ ತಾನು ಮಧ್ಯಪ್ರವೇಶಿಲು ಇಚ್ಛಿಸುವುದಿಲ್ಲ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿಎಚ್ ವಘೇಲಾ ಹಾಗೂ ನ್ಯಾ ಬಿವಿ ನಾಗರತ್ನ ಅವರ ವಿಭಾಗೀಯ ಪೀಠ ಹೇಳುತ್ತಿದ್ದಂತೆ...

ಸಂಪ್ರದಾಯಕ್ಕೆ ಚ್ಯುತಿ ತರುವುದು ಬೇಡ

ಸಂಪ್ರದಾಯಕ್ಕೆ ಚ್ಯುತಿ ತರುವುದು ಬೇಡ

ಅತ್ತ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ ಶ್ರೀನಿವಾಸ ಪ್ರಸಾದ್ ಅವರು ದಸರಾ ಮಹೋತ್ಸವದಲ್ಲಿ ಅಂಬಾರಿಯನ್ನು ಆನೆಯೇ ಹೊರಲಿದೆ ಎಂದು ಸ್ಪಷ್ಟನೆಯ ರೂಪದಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ದಸರಾ ಅಂಬಾರಿಯನ್ನು ವಾಹನದ ಮೇಲಿಟ್ಟು ಆನೆಯಿಂದ ಎಳೆಸುವಂತೆ ಹೈಕೋಟ್ ಸಲಹೆ ನೀಡಿತ್ತು. ಆದರೆ ಅಂಬಾರಿಯನ್ನು ಆನೆಯ ಮೇಲೆ ಹೊರಿಸುವ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಹಬ್ಬದ ಆಕರ್ಷಣೆಯೇ ಜಂಬೂಸವಾರಿ ಆಗಿದೆ. ಹೀಗಾಗಿ ಆನೆಗಳಿಗೆ ಪೌಷ್ಟಿಕ ಆಹಾರ ನೀಡಿ ಅವುಗಳನ್ನು ಅಂಬಾರಿ ಹೊರಲು ಪೂರ್ವಭಾವಿಯಾಗಿ ಸಜ್ಜುಗೊಳಿಸಲಾಗುವುದು ಎಂಬುದನ್ನು ಕೋರ್ಟಿಗೆ ಸರ್ಕಾರ ಮನದಟ್ಟು ಮಾಡಿದೆ. ಹಾಗಾಗಿ ಆನೆಯೇ ಜಂಬೂಸವಾರಿ ಮುಂದವರಿಯಲಿದೆ' ಎಂದು ವಿವರಿಸಿದರು.

ಆನ್‌ ಲೈನ್‌ ಮಾಧ್ಯಮದ ಮೂಲಕ ಹೆಚ್ಚು ಪ್ರಚಾರ:

ಆನ್‌ ಲೈನ್‌ ಮಾಧ್ಯಮದ ಮೂಲಕ ಹೆಚ್ಚು ಪ್ರಚಾರ:

ನಾಡಹಬ್ಬ ದಸರೆಗೆ ಬರುವ ಪ್ರವಾಸಿಗಳಿಗಾಗಿ ವಿಶೇಷ 'ಪ್ಯಾಕೇಜ್‌ ಟೂರ್‌' ಸೌಲಭ್ಯ ಕಲ್ಪಿಸಲಾಗುವುದು ಎಂದು ಪ್ರವಾಸೋದ್ಯಮ ಖಾತೆ ಸಚಿವ ಆರ್ ವಿ ದೇಶಪಾಂಡೆ ಅವರು ಬೆಂಗಳೂರಿನಲ್ಲಿ ಹೇಳಿದ್ದಾರೆ.
ಹಬ್ಬದ ಬಗ್ಗೆ ದೇಶ-ವಿದೇಶಗಳಲ್ಲಿ ವ್ಯಾಪಕ ಪ್ರಚಾರ ನಡೆಸಲು ತೀರ್ಮಾನಿಸಲಾಗಿದೆ. ದೇಶದ ಎಲ್ಲ ಮಹಾನಗರಗಳಲ್ಲಿ ದಸರಾ ಬಗ್ಗೆ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಇಲಾಖೆ ವೆಬ್‌ಸೈಟ್‌ ಸೇರಿದಂತೆ ಆನ್‌ ಲೈನ್‌ ಮಾಧ್ಯಮದ ಮೂಲಕವೂ ಹೆಚ್ಚಿನ ಪ್ರಚಾರ ಕೈಗೊಳ್ಳಲಾಗುವುದು ಎಂದು ದೇಶಪಾಂಡೆ ತಿಳಿಸಿದರು.

KSTDC ಪ್ಯಾಕೇಜ್‌ ಟೂರುಗಳು: ಆರ್ ವಿ ದೇಶಪಾಂಡೆ

KSTDC ಪ್ಯಾಕೇಜ್‌ ಟೂರುಗಳು: ಆರ್ ವಿ ದೇಶಪಾಂಡೆ

ಸುದ್ದಿಗಾರರೊಂದಿಗೆ ವಿಕಾಸಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು, ದಸರ ಹಬ್ಬಕ್ಕೆ ಬರುವವರಿಗೆ ಮೈಸೂರು ಸುತ್ತಲಿನ ಪ್ರವಾಸಿ ತಾಣಗಳ ವೀಕ್ಷಣೆಗೆ ಕೆಎಸ್‌ಡಿಸಿ ನೆರವಿನೊಂದಿಗೆ ಪ್ರತ್ಯೇಕ ಟೂರ್‌ ಪ್ಯಾಕೇಜ್‌ ಮಾಡಲಾಗುವುದು. ಜತೆಗೆ ಏಕರೂಪದ ಟಿಕೆಟ್‌ ವ್ಯವಸ್ಥೆ ಮಾಡಲಾಗುವುದು. ಪ್ರವಾಸಿಗರಿಗೆ ಉತ್ತಮ ಆತಿಥ್ಯ ಒದಗಿಸುವಂತೆ ಸ್ಥಳೀಯ ಹೋಟೆಲ್‌ಗ‌ಳು, ಹೋಮ್‌ ಸ್ಟೇ ಹಾಗೂ ರೆಸಾರ್ಟ್‌ ಗಳಿಗೆ ಸೂಕ್ತ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ದಸರ ಹಬ್ಬಕ್ಕೆ ರಾಜ್ಯದೆಲ್ಲೆಡೆಯಿಂದ 300ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯ ಒದಗಿಸುವಂತೆ ಸಾರಿಗೆ ಇಲಾಖೆಗೆ ಮನವಿ ಮಾಡಲಾಗುವುದು. ಅಲ್ಲದೆ, ಹಬ್ಬದ ಪ್ರಯುಕ್ತ ಮೈಸೂರಿಗೆ ಹೆಚ್ಚಿನ ವಿಮಾನಯಾನ ಸೇವೆ ಒದಗಿಸುವಂತೆ ಕೆಲವೊಂದು ವಿಮಾನಯಾನ ಕಂಪನಿಗಳ ಜತೆಗೆ ಮಾತುಕತೆ ನಡೆಸಲಾಗುವುದು ಎಂದರು.

ದಸರಾ ವಸ್ತುಪ್ರದರ್ಶನ ಈ ಬಾರಿ ಹೆಚ್ಚು ವೃತ್ತಿಪರ

ದಸರಾ ವಸ್ತುಪ್ರದರ್ಶನ ಈ ಬಾರಿ ಹೆಚ್ಚು ವೃತ್ತಿಪರ

ಈ ಬಾರಿ ದಸರಾ ವಸ್ತು ಪ್ರದರ್ಶನವನ್ನು ಹೆಚ್ಚು ವೃತ್ತಿಪರವಾಗಿ ಆಯೋಜಿಸಲಾಗುವುದು. ಈ ಸಂಬಂಧ ಕೈಗಾರಿಕೋದ್ಯಮಿಗಳ ಜತೆ ಚರ್ಚಿಸಲಾಗಿದ್ದು, ಸುಮಾರು 150 ಕ್ಕೂ ಹೆಚ್ಚು ಕೈಗಾರಿಕಾ ಮಳಿಗೆಗಳಿಗೆ ಸ್ಥಳಾವಕಾಶ ನೀಡಲಾಗುವುದು. ಅಲ್ಲದೆ, ರಾಜ್ಯದಲ್ಲಿರುವ ಪ್ರಮುಖ 8 ಪ್ರವಾಸಿ ತಾಣಗಳ ಮಾದರಿಗಳನ್ನು ಸಿದ್ಧಪಡಿಸಲಾಗುವುದು ಎಂದು ಅವರು ನುಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+