ಲಂಡನ್ನಿನಲ್ಲಿ ತುಂಡುಡುಗೆಯಲ್ಲಿ ಡ್ಯಾನ್ಸ್ ಹಬ್ಬ
ಬೆಂಗಳೂರು, ಆ.27: ಲಂಡನ್ನಿನ ಬೀದಿಗಳಲ್ಲಿ ಈಗ ಹಬ್ಬದ ಸಂಭ್ರಮ 1966ರಿಂದ ನಡೆದುಕೊಂಡು ಬರುತ್ತಿರುವ ವಾರ್ಷಿಕ ಕುಣಿತ ಹಬ್ಬ ಎಲ್ಲರನ್ನು ಆಕರ್ಷಿಸುತ್ತದೆ.
'ನ್ಯಾಟಿಂಗ್ ಹಿಲ್ ಕಾರ್ನಿವಲ್' ಹೆಸರಿನಲ್ಲಿ ವಿಶಿಷ್ಟ ಬಗೆಯ ರಂಗು ರಂಗಿನ ವೇಷ ಧಾರಿಗಳು ಬೀದಿಯಲ್ಲಿ ಹಾಡುತ್ತಾ ಕುಣಿಯುತ್ತಾ ಸಾಗುತ್ತಾರೆ. ಯುರೋಪ್ ನಲ್ಲೇ ಅತಿದೊಡ್ಡ ಕಾರ್ನಿವಲ್ ಗಳಲ್ಲಿ ಒಂದೆನಿಸಿರುವ ನ್ಯಾಟಿಂಗ್ ಹಿಲ್ ಕಾರ್ನಿವಲ್ ಸೋಮವಾರ ರಂಗು ಮೂಡಿಸಿದ ಚಿತ್ರವೊಂದು ಸಿಕ್ಕಿದೆ ನೋಡಿ...
ಉಳಿದಂತೆ ದೆಹಲಿ, ಪೂರ್ವ ಭಾರತದ ಪ್ರದೇಶದಲ್ಲಿ ಮತ್ತೆ ಮಳೆರಾಯನ ಆರ್ಭಟ ಜೋರಾಗಿದೆ. ಇಂಡಿಯನ್ ಬಾಡ್ಮಿಂಟನ್ ಲೀಗ್, ಲಾಕ್ಮೆ ಫ್ಯಾಷನ್ ವೀಕ್, ವಿಶ್ವಹಿಂದೂ ಪರಿಷತ್ ಸಂಚಲನ ನಂತರ ಸಪ್ಪೆಗೆ ಕುಳಿತ ಸಾಧುಗಳು, ಮುಂಬೈ ಅತ್ಯಾಚಾರ ವಿರುದ್ಧ ಪ್ರತಿಭಟನೆ ಸೇರಿದಂತೆ ಇನ್ನಷ್ಟು ಚಿತ್ರಗಳು ಇಂದಿನ ಚಿತ್ರ ಸರಣಿಯಲ್ಲಿದೆ ತಪ್ಪದೇ ನೋಡಿ

ಲಂಡನ್ನಿನಲ್ಲಿ ಹಬ್ಬ
ಲಂಡನ್ನಿನ ಬೀದಿಗಳಲ್ಲಿ ಈಗ ಹಬ್ಬದ ಸಂಭ್ರಮ 1966ರಿಂದ ನಡೆದುಕೊಂಡು ಬರುತ್ತಿರುವ ವಾರ್ಷಿಕ ಕುಣಿತ ಹಬ್ಬ ಎಲ್ಲರನ್ನು ಆಕರ್ಷಿಸುತ್ತದೆ.

ಸಂಸದ ಕಮ್ ಸಾಧು
ನವದೆಹಲಿ : ಸಾಧು ಸಂತರು ಅಯೋಧ್ಯೆ ಬಳಿ ಯಾತ್ರೆ ಕೈಗೊಂಡಿದ್ದಾಗ ಬಿಜೆಪಿ ಸಂಸದ ಯೋಗಿ ಆದಿತ್ಯಾ ನಾಥ್ ಅವರು ಮುಂಗಾತು ಅಧಿವೇಶನದಲ್ಲಿ ಚರ್ಚೆ ನಡೆಸುತ್ತಾ ಸಂಸತ್ ಕಲಾಪಕ್ಕೆ ಗೈರು ಹಾಜರಾಗಿದ್ದದ್ದು ವಿಶೇಷ

ಹಿಂದೂ ವಿಶ್ವಕೋಶ
ವಾಷಿಂಗ್ಟನ್: ಚಿದಾನಂದ ಸರಸ್ವತಿಜೀ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹಾಗೂ ಗ್ರಂಥ ಸಂಪಾದಕರ ಜತೆ ದಕ್ಷಿಣ ಕರೋಲಿನಾದಲ್ಲಿ ಹಿಂದೂ ವಿಶ್ವಕೋಶ ಅನಾವರಣ. ಹೆಚ್ಚಿನ ವಿವರ ಇಲ್ಲಿದೆ ಓದಿ

ಅಯೋಧ್ಯೆ
ವಿಎಚ್ ಪಿ ಉದ್ದೇಶಿತ ಯಾತ್ರೆ ವಿಫಲವಾದ ಮೇಲೆ 80 ಕೋಸಿ ಯಾತ್ರ ಕೈಗೊಂಡಿದ್ದ ಸಾಧುಗಳು ಬೇಸರದಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ.












Click it and Unblock the Notifications