Get Updates
Get notified of breaking news, exclusive insights, and must-see stories!

ಪ್ರಮೇಹ ಮೋಕ್ಷಂ ಸೇವಿಸಿ ಮಧುಮೇಹದಿಂದ ಮುಕ್ತಿ

ಬೆಂಗಳೂರು, ಆ.25: ಮಧುಮೇಹಕ್ಕೆ ಪ್ರಮೇಹ ಮೋಕ್ಷಂ-'ಮಧುಮೇಹದಿಂದ ಸಂಪೂರ್ಣ ಸ್ವಾತಂತ್ರ್ಯ' ಎಂಬ ಪರಿಣಾಮಕಾರಿ ಗಿಡಮೂಲಿಕೆಯ ಔಷಧವನ್ನು ಝೆಡಿಸ್ ಹೆಲ್ತ್ ಕೇರ್ ಬಿಡುಗಡೆ ಮಾಡಿದೆ. ನಗರದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಝೆಡಿಸ್ ಹೆಲ್ತ್ ಕೇರ್ ಐತಿಹಾಸಿಕ ಚಂಗಂಪಲ್ಲಿ ವೈದ್ಯ ಭವನ್ ಸಹಯೋಗದಲ್ಲಿ ಪ್ರಮೇಹ ಮೋಕ್ಷಂ ಅನ್ನು ಹೊರತಂದಿದೆ.

ಪ್ರಮೇಹ ಮೋಕ್ಷಂ- ಮಧುಮೇಹ ರೋಗಿಗಳಿಗೆ ಚಂಗಂಪಲ್ಲಿ ವೈದ್ಯ ಭವನ್ ನೀಡುತ್ತಿರುವ ಚಿಕಿತ್ಸೆಯಾಗಿದ್ದು ಮಧುಮೇಹ ನಿವಾರಿಸುವ ಥೆರಪಿಯಾಗಿದೆ. ಈ ಥೆರಪಿಯಲ್ಲಿ ಮಧುಮೇಹದ ದೇಹವನ್ನು ಗುಣಪಡಿಸುವುದು, ಮನಸ್ಸು, ದೇಹ ಮತ್ತು ಆತ್ಮವನ್ನು ಸಾಂತ್ವನಗೊಳಿಸುತ್ತದೆ. ಈ ಪ್ಯಾಕೇಜ್ ನಲ್ಲಿ ಹರ್ಬಲ್ ಮೆಡಿಸಿನ್ ಪ್ಯಾಕೇಜ್, ಡಯೆಟ್ ಪ್ಲಾನ್, ವ್ಯಾಯಾಮಗಳು ಇತ್ಯಾದಿ ಒಳಗೊಂಡಿದ್ದು ದೇಹದ ಸಮಗ್ರ ಆರೋಗ್ಯದ ಕಡೆಗೆ ಗಮನ ನೀಡುತ್ತದೆ.

ಮಧುಮೇಹಕ್ಕೆ ಈ ಪರಿಣಾಮಕಾರಿ ಚಿಕಿತ್ಸೆಯನ್ನು ಝೆಡಿಸ್ ಸಮೂಹದ ಸಂಸ್ಥಾಪಕ ಅಧ್ಯಕ್ಷ ಬಸ್ಸಂ ಮೊಹಮ್ಮದ್ ಬಿಡುಗಡೆ ಮಾಡಿದರು. ಝೆಡಿಸ್ ಹೆಲ್ತ್ ಕೇರ್ ಪ್ರೈ.ಲಿ.ಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಾ. ಆದಿಲ್ ಮೊಹಮ್ಮದ್ ಮತ್ತು ಝೆಡಿಸ್ ಹೆಲ್ತ್ ಕೇರ್ ಪ್ರೈ.ಲಿ.ಯ ತಾಂತ್ರಿಕ ಸಲಹೆಗಾರ ಡಾ.ಚೈತನ್ಯ ಕೆ.ಎಸ್ ಈ ಉತ್ಪನ್ನವನ್ನು ಪರಿಚಯಿಸಿದರು. ಡಾ.ಗಿಬು ಗುರುಕ್ಕಲ್ ಮಧುಮೇಹಕ್ಕೆ ಗಿಡಮೂಲಿಕೆಯ ಚಿಕಿತ್ಸೆ ನೀಡುವ ಪ್ರಮೇಹ ಮೋಕ್ಷಂ ವೆಬ್ ಸೈಟ್ ಅನ್ನು ಬಿಡುಗಡೆ ಮಾಡಿದರು.

ಆಂಡ್ರಾಯಿಡ್ ಅಪ್ಲಿಕೇಷನ್ ಅನ್ನು ಆಯುರ್ಕಾಯ ಗ್ಲೋಬಲ್ ನ ಸಂಸ್ಥಾಪಕ ಎಂ.ಡಿ. ಡಾ.ವಿನಾಯಕ್ ನಾಯರ್ ಬಿಡುಗಡೆ ಮಾಡಿದರು. ಪ್ರಮೇಹ ಮೋಕ್ಷಂ ಆಯುರ್ವೇದ ಉದ್ಯಮಕ್ಕೆ ಹೊಸದು. ಈ ಅಪ್ಲಿಕೇಷನ್ ಮೂಲಕ ಪ್ರಮೇಹ ಮೋಕ್ಷಂ ಬಳಸಿ ಮುಮೇಹ ರೋಗದ ಚಿಕಿತ್ಸೆಯ ಮಾಹಿತಿ ನೀಡಲಾಗುತ್ತದೆ.

Zediss Healthcare Launches Prameha Moksham

ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಝೆಡಿಸ್ ಹೆಲ್ತ್ ಕೇರ್ ಬೆಂಗಳೂರಿನ 12 ಅಧಿಕೃತ ಕೇಂದ್ರಗಳೊಂದಿಗೆ ಸಹಯೋಗ ಹೊಂದಿದ್ದು ಮಧುಮೇಹದಿಂದ ಸ್ವಾತಂತ್ರ್ಯ ನೀಡುತ್ತದೆ. ಈ ಎಲ್ಲ ಕಡೆ ವೈದ್ಯರ ಸಲಹೆಯ ಅನ್ವಯ ಪ್ರಮೇಹ ಮೋಕ್ಷಂ ದೊರೆಯುತ್ತದೆ. ಈ ಕೇಂದ್ರಗಳಲ್ಲಿ ಕೆಲವು ಕೈಲಾಸಂ ಕೇರಳ ಆಯುರ್ವೇದ, ವೇದಂ ಆಯುರ್ವೇದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಅಂಗಂ ಆಯುರ್ವೇದ, ಆಯುಷ್ ಥೆರಪಿ ಕೇಂದ್ರಗಳು, ಆಯುರ್ ಶ್ರೀ ಮತ್ತಿತರ ಸಂಸ್ತೆಗಳ ಔಷಧ ಕೂಡಾ ಸಿಗಲಿದೆ.

ಝೆಡಿಸ್ ಹೆಲ್ತ್ ಕೇರ್ ಪ್ರೈ.ಲಿ.ಕುರಿತು: ಝೆಡಿಸ್ ಸಮೂಹದ ಅಂಗವಾಗಿರುವ ಈ ಸಂಸ್ಥೆ ಮಧುಮೇಹಕ್ಕೆ ಆರೋಗ್ಯಸೇವಾ ಪರಿಹಾರಗಳನ್ನು ಒದಗಿಸುತ್ತದೆ. ಆರೋಗ್ಯವೇ ಭಾಗ್ಯ' ಎಂಬ ನಾಣ್ಣುಡಿಯಲ್ಲಿ ನಂಬಿಕೆ ಇಟ್ಟಿರುವ ಕಂಪನಿ ಆರೋಗ್ಯಕರ ಸಮುದಾಯ ಸೃಷ್ಟಿಸಲು ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದೆ. ಆಯುರ್ವೇದ ಸಾಂಪ್ರದಾಯಿಕವಾಗಿ ರೂಢಿಯಲ್ಲಿರುವ ಚಿಕಿತ್ಸೆಯಾಗಿದ್ದು ಝೆಡಿಸ್ ಹೆಲ್ತ್ ‍ಕೇರ್ ಆಯುರ್ವೇದದ ಚಿಕಿತ್ಸಾ ವಿಧಾನಗಳನ್ನು ಆಧುನಿಕ ರೋಗಪತ್ತೆ ವಿಧಾನಗಳಿಗೆ ಅಳವಡಿಸಿಕೊಂಡಿದೆ. ಕಂಪನಿ ಮತ್ತು ಅದರ ಸಹಸಂಸ್ಥೆಗಳು ಸಮಾಜದಲ್ಲಿ ಆರೋಗ್ಯದ ಕಾಳಜಿಯನ್ನು ಹೆಚ್ಚಿಸಲು ಶ್ರಮಿಸುತ್ತಿದೆ.

ಪ್ರಾರಂಭದಿಂದಲೂ ಝೆಡಿಸ್ ಹೆಲ್ತ್‍ಕೇರ್ ವಿವಿಧ ರೋಗಗಳಿಂದ ಬಳಲುವವರಿಗೆ ನೆರವಾಗುತ್ತಿದೆ. ಝೆಡಿಸ್ ಹೆಲ್ತ್ ಕೇರ್ ಅನ್ನು ಅನನ್ಯವಾಗಿಸಿರುವ ಒಂದೇ ಅಂಶವೆಂದರೆ ಕೈಗೆಟುಕುವ ದರದಲ್ಲಿ ಅದರ ಸಮಗ್ರ ಚಿಕಿತ್ಸಾ ವಿಧಾನ. ಝೆಡಿಸ್ ಹೆಲ್ತ್ ಕೇರ್ ನಲ್ಲಿ 'ಆಯುರ್ವೇದವನ್ನು ಮರುಜೀವಿಸಿ' ಎನ್ನುವುದೇ ಮಂತ್ರ.

ಝೆಡಿಸ್ ಸಮೂಹದ ಕಂಪನಿಗಳ ಕುರಿತು: ಝೆಡಿಸ್ ಸಮೂಹ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಭಾರತೀಯ ಸಂಘಟಿತ ವ್ಯಾಪಾರ ಸಂಸ್ಥೆಗಳಾಗಿದ್ದು ಆರೋಗ್ಯಸೇವೆ, ರಿಯಲ್ ಎಸ್ಟೇಟ್, ಹರ್ಬಲ್ ಉತ್ಪನ್ನಗಳು ಮತ್ತು ಇತರೆ ಉತ್ಪನ್ನಗಳನ್ನು ತಯಾರಿಸುತ್ತದೆ. ಗ್ರಾಹಕರ ನಿರೀಕ್ಷೆಗೂ ಮೀರಿ ಉತ್ಪನ್ನಗಳನ್ನು ತಯಾರಿಸಲು ಕಂಪನಿ ಕಂಕಣಬದ್ಧವಾಗಿದೆ. ಪ್ರಸ್ತುತದ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಅವರು ಸದಾ ಸನ್ನದ್ಧರಾಗಿರುತ್ತಾರೆ. ಝೆಡಿಸ್ ಸಮೂಹ ವಿಭಿನ್ನ ಆಲೋಚನೆಗಳ ಮೂಲಕ ಸಾರ್ವಜನಿಕರಿಗೆ ಶಕ್ತಿ ತುಂಬುವ ತತ್ವವನ್ನು ಆಚರಿಸುತ್ತದೆ.

ಚಂಗಂಪಲ್ಲಿ ವೈದ್ಯ ಭವನ್ : ಚಂಗಂಪಲ್ಲಿಯಲ್ಲಿ ಪ್ರಾರಂಭವಾದ ಗುರುಕ್ಕಲ್ ಕುಟುಂಬ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಖ್ಯಾತ ಆಯುರ್ವೇದ ಪಂಡಿತರ ಕುಟುಂಬ. ಅವರು ಅಸ್ಥಿ ಮರ್ಮ ಚಿಕಿತ್ಸೆಯಲ್ಲಿ ಪರಿಣಿತರಾಗಿದ್ದು ಕಲರಿಪಯಟ್ಟುವಿನಲ್ಲೂ ಪರಿಣಿತರು.ಅವರು ಮೂಲತಃ ಕರ್ನಾಟಕದವರಾಗಿದ್ದು ಬ್ರಾಹ್ಮಣ ತುಳು ಕುಟುಂಬ. ಝಮೌರಿನ್ಸ್ ಎಂಬ ರಾಜ ಇವರ ಖ್ಯಾತಿ ತಿಳಿದು ಅವರನ್ನು ಕಠಿಣ ಗಾಯ ಮತ್ತು ಮೂಳೆ ಮುರಿತ ಚಿಕಿತ್ಸೆಗಾಗಿ ಕರೆಸಿದ್ದನು. ಅವರು ಯುದ್ಧದಲ್ಲಿ ಭಾಗವಹಿಸಿದ್ದ ಸೈನಿಕರಿಗೆ ಚಿಕಿತ್ಸೆ ನೀಡಿದರು. ಅಂದಿನಿಂದ ಕೇರಳದ ಉತ್ತರ ಮಲಬಾರ್ ನಲ್ಲಿ ಆಯುರ್ವೇದ ಜನಪ್ರಿಯವಾಯಿತು. ಈಗ ಇದು ಮಲಪ್ಪುರಂ ಜಿಲ್ಲೆಯ ತಿರುನವಯದಲ್ಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+