ಮಂಡ್ಯದಲ್ಲಿ ರಮ್ಯಾ ಗೆಲುವಿಗೆ 10 ಕಾರಣಗಳು!

ಮಂಡ್ಯ, ಆ.24 : ಸಕ್ಕರೆ ನಾಡು ಮಂಡ್ಯ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪಾಲಾಗಿದೆ. ಸ್ಪರ್ಧಿಸಿದ ಚೊಚ್ಚಲ ಚುನಾವಣೆಯಲ್ಲಿಯೇ ರಮ್ಯಾ ಲೋಕಸಭೆ ಮೆಟ್ಟಿಲು ಹತ್ತಿದ್ದಾರೆ. ಜೆಡಿಎಸ್ ಭದ್ರಕೋಟೆ ಮಂಡ್ಯಗೆ ಲಗ್ಗೆ ಇಟ್ಟು ಹಿರಿಯ ನಾಯಕರಿಗೆ ಅಚ್ಚರಿ ಉಂಟುಮಾಡಿದ್ದಾರೆ.

ಶನಿವಾರ ನಡೆದ ಮತ ಎಣಿಕೆಯಲ್ಲಿ ರಮ್ಯಾ ಜೆಡಿಎಸ್ ಅಭ್ಯರ್ಥಿ, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ವಿರುದ್ಧ 67,611 ಮತಗಳ ಭಾರೀ ಅಂತದಿಂದ ಗೆಲುವು ಸಾಧಿಸಿ ದೆಹಲಿ ವಿಮಾನವೇರಿದ್ದಾರೆ. ಮಂಡ್ಯದ ಜನರು ರಮ್ಯಾಗೆ ತಮ್ಮ ಸಂಪೂರ್ಣ ಬೆಂಬಲ ನೀಡಿದ್ದಾರೆ.

ಮಂಡ್ಯ ಕ್ಷೇತ್ರದಲ್ಲಿ ನಟಿ ರಮ್ಯಾ ಕಾಂಗ್ರೆಸ್ ಅಭ್ಯರ್ಥಿ ಎಂದಾಗಲೇ ಕಾಂಗ್ರೆಸ್ ನಾಯಕರು ಕ್ಷೇತ್ರ ಕೈತಪ್ಪುವುದು ಖಚಿತ ಎಂಬ ಲೆಕ್ಕಾಚಾರ ಹಾಕಿದ್ದರು. ಮಂಡ್ಯ ಜೆಡಿಎಸ್ ಭದ್ರಕೋಟೆ, ಅಲ್ಲಿ ರಾಜಕೀಯದ ಕೊಂಚ ಅನುಭವವೂ ಇಲ್ಲದ ರಮ್ಯಾ ಗೆಲ್ಲುವುದು ಕಷ್ಟ ಎಂಬುದು ನಾಯಕರ ಲೆಕ್ಕಾಚಾರವಾಗಿತ್ತು. (ಉಪ ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ 6 ಕಾರಣಗಳು)

ಆದರೆ, ಚುನಾವಣೆಯಲ್ಲಿ 4,84,085 ಮತಗಳನ್ನು ಪಡೆದು ರಮ್ಯಾ ಜೆಡಿಎಸ್ ಭದ್ರಕೋಟೆಗೆ ಲಗ್ಗೆ ಇಟ್ಟಿದ್ದಾರೆ. ಕ್ಷೇತ್ರ ಕೈತಪ್ಪಿತು ಎಂಬ ನಾಯಕರ ಲೆಕ್ಕಾಚಾರ ತೆಲೆಕೆಳಗು ಮಾಡಿ ಭಾರೀ ಅಂತರದಿಂದಲೇ ಜಯಗಳಿಸಿದ್ದಾರೆ. ರಮ್ಯಾ ಗೆಲುವಿಗೆ ಪ್ರಮುಖ ಕಾರಣಗಳನ್ನು ತಿಳಿಯೋಣ ಬನ್ನಿ.(ಬೆಂಗಳೂರು ಗ್ರಾಮಾಂತರದಲ್ಲೂ ಕೈ ಕಲರವ)

ಚಿತ್ರ ನಟಿ ಎಂಬ ಹಣೆಪಟ್ಟಿ

ಚಿತ್ರ ನಟಿ ಎಂಬ ಹಣೆಪಟ್ಟಿ

ರಮ್ಯಾ ಮಂಡ್ಯದಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಆಕೆ ಸ್ಯಾಂಡಲ್ ವುಡ್ ಕ್ವೀನ್ ಎಂಬ ಹಣೆಪಟ್ಟಿ ಬಿಟ್ಟು ಬೇರೆ ಯಾವ ಅಂಶವೂ ಅವರ ಬೆನ್ನಿಗಿರಲಿಲ್ಲ. ರಾಜಕೀಯದ ಅನುಭವವಿರಲಿ. ಮಂಡ್ಯ ಜಿಲ್ಲೆಯ ಗ್ರಾಮದ ಹೆಸರುಗಳೇ ಸರಿಯಾಗಿ ತಿಳಿದಿರಲಿಲ್ಲ. ಆದರೂ, ಮತದಾರ ಪ್ರಭು ಆಕೆಗೆ ಪೂರ್ಣ ಬೆಂಬಲ ನೀಡಿದ್ದಾನೆ. ಚೊಚ್ಚಲ ಚುನಾವಣೆಯಲ್ಲಿಯೇ ಜಯಗಳಿಸುವಂತೆ ಮಾಡಿದ್ದಾನೆ.

ಅನುಕಂಪದಲ್ಲಿ ತೇಲಿಬಂತು ಮತ

ಅನುಕಂಪದಲ್ಲಿ ತೇಲಿಬಂತು ಮತ

ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಿ ರಮ್ಯಾ ನಾಮಪತ್ರ ಸಲ್ಲಿಸಿದ ದಿನವೇ ಅವರ ಸಾಕು ತಂದೆ ಆರ್.ಟಿ.ನಾರಾಯಣ್ ಹೃದಯಾಘಾತದಿಂದಾಗಿ ಸಾವನ್ನಪ್ಪಿದರು. ಇದರಿಂದ ರಮ್ಯಾ ಕೆಲವು ದಿನ ಪ್ರಚಾರದಿಂದ ಹಿಂದೆ ಸರಿದಿದ್ದರು. ನಂತರ ಕಣ್ಣೀರಿಡುತ್ತಲೇ ಪ್ರಚಾರ ನಡೆಸಿದ್ದರು. ಅಭ್ಯರ್ಥಿಯ ತಂದೆಯ ಸಾವಿನ ಅನುಕಂಪ ಮತಗಳಾಗಿ ಪರಿವರ್ತನೆ ಆಗಿದ್ದು, ರಮ್ಯಾ ಗೆಲುವಿಗೆ ಪ್ರಮುಖ ಕಾರಣವಾಗಿದೆ.

ಜೆಡಿಎಸ್ ಎಡವಟ್ಟು

ಜೆಡಿಎಸ್ ಎಡವಟ್ಟು

ಉಪ ಚುನಾವಣೆ ಪ್ರಚಾರದ ಭರಾಟೆಯಲ್ಲಿ ಜೆಡಿಎಸ್ ಮಾಜಿ ಶಾಸಕ ಎಂ.ಶ್ರೀನಿವಾಸ್ ನಟಿ ರಮ್ಯಾಗೆ ತಂದೆ ಯಾರೆಂದು ಗೊತ್ತಿಲ್ಲ. ಅವರೊಬ್ಬ ಪ್ರನಾಳ ಶಿಶು ಎಂದು ಹೇಳಿಕೆ ನೀಡಿ ಭಾರೀ ವಿವಾದ ಹುಟ್ಟು ಹಾಕಿದ್ದರು. ರಾಜಕೀಯ ಪಕ್ಷಗಳ ನಾಯಕರು, ಜನರಿಂದ ಶ್ರೀನಿವಾಸ್ ಹೇಳಿಕೆಗೆ ವಿರೋಧ ಎದುರಾಗಿತ್ತು. ಇದು ಚುನಾವಣೆಯಲ್ಲಿಯೂ ಪ್ರಭಾವ ಬೀರಿದ್ದು ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರ ಖಾತೆಯಿಂದ ಮತಗಳನ್ನು ಕದ್ದಿದೆ.

ಭಿನ್ನಮತ ಶಮನ

ಭಿನ್ನಮತ ಶಮನ

ವಿಧಾನಸಭೆ ಚುನಾವಣೆ ಕಾಲದಿಂದಲೂ ಮಂಡ್ಯ ಕಾಂಗ್ರೆಸ್ ಅಧ್ಯಕ್ಷ ಆತ್ಮಾನಂದ ಮತ್ತು ವಸತಿ ಸಚಿವ ಅಂಬರೀಶ್ ನಡುವೆ ಉಂಟಾಗಿದ್ದ ಭಿನ್ನಮತ ಉಪ ಚುನಾವಣೆ ವೇಳೆಗೆ ಶಮನವಾಗಿತ್ತು. ಸ್ವತಃ ರಮ್ಯಾ ಆತ್ಮಾನಂದ ಅವರ ಮನೆಗೆ ಹೋಗಿ, ಗೆಲುವಿಗೆ ಸಹಕರಿಸುವಂತೆ ಕೋರಿದ್ದರು. ಆದ್ದರಿಂದ ಆತ್ಮಾನಂದ ತಮ್ಮ ಕಾರ್ಯಕರ್ತರ ಜೊತೆ ಪ್ರಚಾರ ಮಾಡಿದ್ದರು. ಇದು ಉತ್ತಮ ಪ್ರಭಾವ ಬೀರಿದ್ದು ರಮ್ಯಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಅಂಬರೀಶ್ ವರ್ಚಸ್ಸು

ಅಂಬರೀಶ್ ವರ್ಚಸ್ಸು

ರಮ್ಯಾ ಅವರು ನಾಮಪತ್ರ ಸಲ್ಲಿಸುವ ವೇಳೆಯಿಂದ ಅವರ ಬೆಂಬಲಕ್ಕೆ ನಿಂತಿದ್ದು, ವಸತಿ ಸಚಿವ ಅಂಬರೀಶ್. ಕ್ಷೇತ್ರದಲ್ಲಿ ತಮಗೆ ಇದ್ದ ಪ್ರಭಾವದಿಂದ ಮತದಾರರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆದರು. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದ ತುಂಬಾ ಪ್ರಚಾರ ಮಾಡಿ ರಮ್ಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಎಸ್.ಎಂ.ಕೃಷ್ಣ ಬೆಂಬಲ

ಎಸ್.ಎಂ.ಕೃಷ್ಣ ಬೆಂಬಲ

ಮಾಜಿ ವಿದೇಶಾಂಗ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಎಂ.ಕೃಷ್ಣ ಲೋಕಸಭೆ ಉಪ ಚುನಾವಣೆ ಪ್ರಚಾರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡರು. ಇದರಿಂದ ಕೃಷ್ಣ ಅಭಿಮಾನಿಗಳು ರಮ್ಯಾ ಬೆಂಬಲಕ್ಕೆ ನಿಂತರು. ವಿಧಾನಸಭೆ ಚುನಾವಣೆಗಿಂತ ಹೆಚ್ಚಿನ ಪ್ರಚಾರವನ್ನು ಕೃಷ್ಣ ಲೋಕಸಭೆ ಉಪ ಚುನಾವಣೆಯಲ್ಲಿ ಮಾಡಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದರು.

ಸಿದ್ದರಾಮಯ್ಯ ಪ್ರಭಾವ

ಸಿದ್ದರಾಮಯ್ಯ ಪ್ರಭಾವ

ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡು ಉತ್ತಮ ಆಡಳಿತ ನೀಡುತ್ತಿರುವುದು ರಮ್ಯಾ ಗೆಲುವಿಗೆ ಸಹಕಾರಿಯಾಯಿತು. ಮಂಡ್ಯ ಪಕ್ಕದ ಜಿಲ್ಲೆಯ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಪ್ರಚಾರ ಮಾಡಿ, ರಮ್ಯಾಗೆ ಮತ ನೀಡುವಂತೆ ಮನವಿ ಮಾಡಿದ್ದರು. ಸಿದ್ದರಾಮಯ್ಯ ಪ್ರಭಾವವೂ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು, ರಮ್ಯಾ ಅವರನ್ನು ಗೆಲುವಿನ ದಡ ಸೇರಿಸಿದೆ.

ಸರ್ಕಾರದ ಬೆಂಬಲ

ಸರ್ಕಾರದ ಬೆಂಬಲ

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ರಮ್ಯಾ ಅವರ ಬೆಂಬಲಕ್ಕೆ ನಿಂತು ಜೆಡಿಎಸ್ ಭದ್ರಕೋಟೆ ಭೇದಿಸಲು ನೆರವಾಯಿತು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರು ಸಚಿವರನ್ನು ಉಸ್ತುವಾರಿಯಾಗಿ ನೇಮಿಸಿದ ಕೆಪಿಸಿಸಿ, ಪ್ರತಿ ಕ್ಷೇತ್ರದ ಬಗ್ಗೆಯೂ ಗಮನವಹಿಸಿ ಚುನಾವಣೆಯಲ್ಲಿ ಜಯಗಳಿಸುವಂತೆ ಮಾಡಿದರು.

ಬಿಜೆಪಿ-ಜೆಡಿಎಸ್ ದೋಸ್ತಿ

ಬಿಜೆಪಿ-ಜೆಡಿಎಸ್ ದೋಸ್ತಿ

ರಮ್ಯಾ ಗೆಲುವಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ದೋಸ್ತಿ ಸಹ ಪ್ರಮುಖ ಪಾತ್ರ ವಹಿಸಿದೆ. ಒಕ್ಕಲಿಗರು ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದರು. ಆದರೆ, ಈ ಬಾರಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಕೋಪಗೊಂಡಿರುವ ಅವರು ರಮ್ಯಾ ಅವರಿಗೆ ಮತ ಹಾಕಿರುವ ಸಾಧ್ಯತೆ ಇದೆ.

ಅಭ್ಯರ್ಥಿ ಕೊರತೆ

ಅಭ್ಯರ್ಥಿ ಕೊರತೆ

ಜೆಡಿಎಸ್ 2009ರ ಚುನಾವಣೆಯಲ್ಲಿ ಜೆಡಿಎಸ್ ಹಿರಿಯ ನಾಯಕ, ಕುಮಾರಸ್ವಾಮಿ ಅವರ ಪರಮಾಪ್ತರಾದ ಚೆಲುವರಾಯ ಸ್ವಾಮಿ ಅವರನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿತ್ತು. ಆದ್ದರಿಂದ ಅವರು ಜಯಗಳಿಸಿದ್ದರು. ಈ ಬಾರಿ ಬೆಂಗಳೂರು ಗ್ರಾಮಾಂತರದಿಂದ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿತು. ಆದರೆ, ಮಂಡ್ಯದಲ್ಲಿ ಪ್ರಬಲ ಅಭ್ಯರ್ಥಿಯನ್ನು ಹುಡುಕಾಡಿ ಕಣಕ್ಕೆ ಇಳಿಸಲಿಲ್ಲ ಎಂಬ ಆರೋಪಗಳು ರಮ್ಯಾ ಗೆಲುವಿಗೆ ಸಹಕಾರಿಯಾಗಿರಬಹುದು.

ಟೀಟ್ವರ್ ನಲ್ಲಿ ರಮ್ಯಾ ಸಂತಸ

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ ಸಂತಸವನ್ನು ಟೀಟ್ವರ್ ಮೂಲಕವೂ ಹಂಚಿಕೊಂಡಿರುವ ರಮ್ಯಾ ಈ ಜಯವನ್ನು ತಂದೆಗೆ ಅರ್ಪಣೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+