ಫೇಸ್ ಬುಕ್ ಜನಕನಿಂದ ಹೊಸ ಇಂಟರ್ನೆಟ್

Mark Zuckerberg launches internet.org to make internet access available to all
ಬೆಂಗಳೂರು, ಆ.21: ಸಾಮಾಜಿಕ ಜಾಲ ತಾಣಗಳಲ್ಲಿ ಹೊಸ ಕ್ರಾಂತಿ ಹುಟ್ಟುಹಾಕಿದ ಫೇಸ್ ಬುಕ್ ಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಹೊಸ ಕ್ರಾಂತಿಗೆ ಮುಂದಾಗಿದ್ದಾರೆ. ಇಂಟರ್ನೆಟ್.ಆರ್ಗ್ ಎಂಬ ಜಾಗತಿಕ ಪಾಲುದಾರಿಕೆ ಮೂಲಕ ಸುಮಾರು 5 ಬಿಲಿಯನ್ ಜನರಿಗೆ ಅಂತರ್ಜಾಲ ಸಂಪರ್ಕ ಸಿಗುವಂತೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.

ಜಗತ್ತಿನೆಲ್ಲೆಡೆ ಇರುವ ಸಮಾನ ಮನಸ್ಕರ ನಡುವೆ ಸಂಪರ್ಕ ಸಾಧಿಸುವ ಕನಸನ್ನು ಫೇಸ್ ಬುಕ್ ನನಸು ಮಾಡಿದೆ ಎಂದು ಝುಕರ್ ಬರ್ಗ್ ಹೇಳಿದ್ದಾರೆ.ಜ್ಞಾನ ವಾಹಿನಿಯ ಹರಿವು ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಅಲ್ಲಲ್ಲಿ ಕುಂಠಿತಗೊಳ್ಳುತ್ತಿದೆ. ಇದನ್ನು ನಿವಾರಿಸಲು ಇಂಟರ್ನೆಟ್.ಆರ್ಗ್ ಸ್ಥಾಪನೆ ಮಾಡಲಾಗಿದೆ. ಸದ್ಯ ಇಂಟರ್ನೆಟ್ ಸಂಪರ್ಕ ಸಾಧಿಸಲು ಕಷ್ಟಪಡುತ್ತಿರುವವರಿಗೆ internet. org ವರದಾನವಾಗಲಿದೆ ಎಂದಿದ್ದಾರೆ.

ಇಂದು ಕೇವಲ 2.7 ಬಿಲಿಯನ್ ಜನ ಅಥವಾ ವಿಶ್ವದ ಮೂರನೇ ಒಂದು ಭಾಗದಷ್ಟು ಜನ ಮಾತ್ರ ಇಂಟರ್ನೆಟ್ ಬಳಕೆ ಮಾಡುತ್ತಿದ್ದಾರೆ. ಅಂತರ್ಜಾಲ ಬಳಕೆ ವಾರ್ಷಿಕವಾಗಿ ಶೇ 9 ರಷ್ಟು ಪ್ರಗತಿ ಕಾಣುತ್ತಿದೆ. ಇಂಟರ್ನೆಟ್. ಆರ್ಗ್ ನಿಂದ ಈ ಚಿತ್ರಣ ಬದಲಾಗಲಿದೆ.

ಅಂತರ್ಜಾಲ ಬಳಕೆ ಮಾಡದ ಮೂರನೇ ಎರಡು ಭಾಗದ ಜನಸಂಖ್ಯೆಗೆ ಇಂಟರ್ನೆಟ್ ಸಂಪರ್ಕ ಒದಗಿಸುವುದು ನಮ್ಮ ಉದ್ದೇಶ. ಇಂಟರ್ನೆಟ್. ಆರ್ಗ್ ನ ಜತೆ ಫೇಸ್ ಬುಕ್, ಎರಿಕ್ಸನ್, ಮೀಡಿಯಾ ಟೆಕ್, ನೋಕಿಯಾ, ಒಪೆರಾ, ಕ್ವಲ್ ಕಾಮ್ ಹಾಗೂ ಸ್ಯಾಮ್ ಸಂಗ್ ಸಂಸ್ಥೆಗಳು ಜಂಟಿಯಾಗಿ ಕೈ ಜೋಡಿಸಿವೆ. ಜ್ಞಾನ ಹಂಚಿಕೆ, ಸಂಸ್ಥೆ ಪ್ರಸರಣ ಹಾಗೂ ಸರ್ಕಾರಗಳನ್ನು ಜಾಗತಿಕ ಮಟ್ಟದಲ್ಲಿ ಜೋಡಿಸುವ ಮಹತ್ವದ ಯೋಜನೆ ಇದಾಗಿದೆ.

ಈ ಯೋಜನೆ ಪ್ರಗತಿ ಕಾಣುತ್ತಿದ್ದಂತೆ ಸರ್ಕಾರೇತರ ಸಂಸ್ಥೆಗಳು, ಸ್ಥಳೀಯ ಸಂಘ ಸಂಸ್ಥೆಗಳು, ಇಂಟರ್ನೆಟ್ ತಜ್ಞರನ್ನು ಸೇರಿಸಿಕೊಳ್ಳಲು ಮಾರ್ಕ್ ಯೋಜಿಸಿದ್ದಾರೆ. ಕ್ಲೌಂಡ್ ಕಂಪ್ಯೂಟಿಂಗ್ ನ ನೈಜ ಉದಾಹರಣೆಯಾಗಿ ಈ ಯೋಜನೆ ಸಾಕಾರಗೊಳ್ಳುವ ಇರಾದೆ ಮಾರ್ಕ್ ಅವರಿಗಿದೆ. ಹೆಚ್ಚಿನ ಮಾಹಿತಿಗೆ ಇಂಟರ್ನೆಟ್.ಆರ್ಗ್ ತಾಣ ವೀಕ್ಷಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+