ನರೇಂದ್ರ ಮೋದಿಯನ್ನು ಹಾಡಿಹೊಗಳಿದ ಅಡ್ವಾಣಿ

ಮೊನ್ನೆ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯೊದಗುವಂತೆ ಸ್ವಾತಂತ್ರ್ಯ ದಿನದಂದು ಪ್ರಧಾನಿಯ ಭಾಷಣಕ್ಕೆ ಮೋದಿ ಸವಾಲೆಸೆದು ರಾಡಿ ಎಬ್ಬಿಸಿದ್ದರು. ಅದಕ್ಕೆ ತಕ್ಷಣ ಮೋದಿಯ ಕಿವಿಹಿಂಡಿದ್ದ ಅಡ್ವಾಣಿ ಅವರು ತುಂಬಿದ ಬಿಜೆಪಿ ಸಭೆಯಲ್ಲಿ ಮುಕ್ತ ಕಂಠದಿಂದ ಮೋದಿಯನ್ನು ಹಾಡಿಹೊಗಳಿದ್ದಾರೆ.
ಭಾನುವಾರ ನಡೆದ ಪಕ್ಷದ ಚುನಾವಣಾ ಸಭೆಯಲ್ಲಿ ಪಾಲ್ಗೊಂಡಿದ್ದ ಅಡ್ವಾಣಿ ಅವರು ತಮ್ಮ ಭಾಷಣದಲ್ಲಿ 'ಬೂತ್ ಮಟ್ಟದಲ್ಲಿ ಪಕ್ಷವನ್ನು ಸದೃಢಗೊಳಿಸುವ ಮತ್ತು ಪ್ರತಿಯೊಬ್ಬ ಮತದಾರರನ್ನೂ ತಲುಪುವ ಮೋದಿ ಅವರ ಕಾರ್ಯಯೋಜನೆಯ ಬಗ್ಗೆ ಅಪಾರ ಮೆಚ್ಚುಗೆ ಸೂಚಿಸಿದರು' ಎಂದು ಪಕ್ಷದ ಮೂಲಗಳು ಹೇಳಿವೆ.
ಲೋಕಸಭೆ ಚುನಾಣೆಯಲ್ಲಿ ಎಲ್ಲಾ ವರ್ಗದವರು ಬಿಜೆಪಿಯನ್ನು ಬೆಂಬಲಿಸುವಂತೆ ಮಾಡಬೇಕು. ಮುಸ್ಲಿಂ ಮತದಾರರು ಬಿಜೆಪಿ ಬೆಂಬಲಿಸಿ ಮತ ನೀಡುವಂತೆ ಕಾರ್ಯತಂತ್ರ ರೂಪಿಸಬೇಕು ಎಂದು ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ನವದೆಹಲಿಯಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಪ್ರಚಾರ ಸಮಿತಿಯ ಮಹತ್ವದ ಸಭೆಯಲ್ಲಿ, ಬಿಜೆಪಿ ರಾಜ್ಯ ಘಟಕಗಳ ಅಧ್ಯಕ್ಷರಿಗೆ ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸುವ ಕುರಿತು ಮೋದಿ ಸಲಹೆ ನೀಡಿದ್ದಾರೆ.












Click it and Unblock the Notifications