ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದನದ ಕರುವಿಗೆ ಹಾಲುಣಿಸುವ ವಿಚಿತ್ರ ಶ್ವಾನ

|
Google Oneindia Kannada News

ತುಮಕೂರು, ಆ.18 : ನಾಯಿಯೊಂದು ತಾಯಿ ಇಲ್ಲದ ದನದ ಕರುವಿಗೆ ಹಾಲುಣಿಸುತ್ತಿರುವ ಅಚ್ಚರಿಯ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಡೆದಿದೆ. ತಾಯಿಯನ್ನು ಕಳೆದುಕೊಂಡಿರುವ ದನದ ಕರು ಹಾಲಿಗಾಗಿ ನಾಯಿಯನ್ನೇ ಆಶ್ರಯಿಸಿದೆ.

ತಿಪಟೂರು ತಾಲೂಕಿನ ಅಲಬೂರು ಗ್ರಾಮದ ಬೋರೇಗೌಡ ಮತ್ತು ಗಾಯತ್ರಿ ದಂಪತಿಯ ಮನೆಯಲ್ಲಿ ಈ ಅಚ್ಚರಿಯ ಘಟನೆ ನಡೆಸಿದೆ. ನಾಲ್ಕು ತಿಂಗಳ ದನದ ಕರುವಿಗೆ ನಾಯಿ ಪ್ರತಿದಿನ ಹಾಲುಣಿಸುತ್ತಿದೆ.

dog

ನಾಯಿ ತನ್ನ ಮರಿಗಳನ್ನು ಕಳೆದುಕೊಂಡಿದೆ. ದನದ ಕರು ತನ್ನ ತಾಯಿಯನ್ನು ಕಳೆದುಕೊಂಡಿದೆ. ನಾಲ್ಕು ತಿಂಗಳಿನಿಂದ ನಾಯಿಯು ದನದ ಕರುವಿಗೆ ಹಾಲುಣಿಸುತ್ತಿದ್ದು, ಅಚ್ಚರಿಗೆ ಕಾರಣವಾಗಿದೆ.

ಕರುವಿಗೆ ಜನ್ಮ ನೀಡಿ ದನ ಮೃತಪಟ್ಟ ತಕ್ಷಣ ಬೋರೇಗೌಡ ದಂಪತಿ ಆತಂಕಗೊಂಡಿದ್ದರು. ತಾಯಿಯ ಹಾಲಿಲ್ಲದೆ ಕರುವನ್ನು ಹೇಗೆ ಸಾಕುವುದು? ಎಂಬ ಪ್ರಶ್ನೆ ಅವರಿಗೆ ಎದುರಾಗಿತ್ತು. ಕೆಲವು ದಿನ ಬೇರೆ ಹಸುವಿನ ಹಾಲು ಕುಡಿಸಿ ಕರುವಿನ ಜೀವ ಉಳಿಸಿದರು.

ಇದೇ ಸಮಯದಲ್ಲಿ ಮನೆಯ ನಾಯಿ ತನ್ನ ಮೂರು ಮರಿಗಳನ್ನು ಕಳೆದುಕೊಂಡಿತು. ದನದ ಕರು ಓಡಾಡುವಂತಾದ ಮೇಲೆ ನಾಯಿಯ ಬಳಿ ಹೋಗಿ ಪ್ರತಿದಿನ ಹಾಲು ಕುಡಿಯಲು ಪ್ರಾರಂಭಿಸಿತು. ಕೆಲವು ದಿನ ಇವು ಒಟ್ಟಿಗೆ ಆಟವಾಡುತ್ತಿವೆ ಎಂದು ದಂಪತಿ ತಿಳಿದುಕೊಂಡಿದ್ದರು.

ಆದರೆ, ಪ್ರತಿದಿನ ನಾಯಿ ಕರುವನ್ನು ಹುಡುಕಿಕೊಂಡು ಹೋಗಿ ಹಾಲುಣಿಸುವುದನ್ನು ಕಂಡು ಸ್ವತಃ ಬೋರೇಗೌಡ ದಂಪತಿಗಳು ಅಚ್ಚರಿಗೊಂಡಿದ್ದಾರೆ. ಮರಿಗಳನ್ನು ಕಳೆದುಕೊಂಡಿರುವ ನಾಯಿ ದನದ ಕರುವಿಗೆ ಪ್ರತಿನಿತ್ಯ ಹಾಲುಣಿಸುತ್ತದೆ.

ಪ್ರತಿದಿನ ನಾಯಿಯ ಹಾಲು ಕುಡಿದರೂ ದನದ ಕರು ಆರೋಗ್ಯಕರವಾಗಿದೆ. ನಾಯಿಯ ಮಾತೃಪ್ರೇಮವನ್ನು ನೋಡಿದ ದಂಪತಿ ಅದಕ್ಕೆ ಹೆಚ್ಚಿನ ಪೌಷ್ಠಿಕ ಆಹಾರ ನೀಡಿ, ದನದ ಕರುವಿಗೆ ಉತ್ತಮವಾಗಿ ಹಾಲು ದೊರೆಯುವಂತೆ ನೋಡಿಕೊಳ್ಳುತ್ತಿದ್ದಾರೆ.

ದನದ ಕರು ನಾಯಿಯ ಹಾಲನ್ನು ಪ್ರತಿದಿನ ಕುಡಿದರೆ, ಕರುವಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ ಎಂದು ಸ್ಥಳೀಯ ಪಶುವೈದ್ಯರಾದ ಪರುಶರಾಮ್ ಹೇಳಿದ್ದಾರೆ. ಹೆತ್ತ ಮಕ್ಕಳನ್ನು ಬಿಟ್ಟು ಹೋಗುವ ಇಂತಹ ಕಾಲದಲ್ಲಿ ಇದು ನಿಜಕ್ಕೂ ಅಚ್ಚರಿಯೇ ಸರಿ.

English summary
Size and species don’t seem to matter when it comes to motherly instinct. A dog suckling a four-month-old calf has left Bore Gowda and Gayathri, a farming couple from Albooru village near Tiptur Tumkuar district wonder-struck.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X