ವಿ.ನಿಲ್ದಾಣಕ್ಕೆ ಸ್ತನ ಬಾಂಬ್ ಬೆದರಿಕೆ- ಅಲ್ ಖೈದಾ ಕೈವಾಡ
ಲಂಡನ್, ಆಗಸ್ಟ್ 17: ಭಯೋತ್ಪಾದನೆ ಇಮ್ಮೂ ಯಾವೆಲ್ಲಾ ರೂಪದಲ್ಲಿ ನಮ್ಮನ್ನು ಕಾಡಲಿದೆಯೋ ಆ ಉಗ್ರರೇ ಹೇಳಬೇಕು. ಅಥವಾ ಅವರಿಗೂ ಸದ್ಯಕ್ಕೆ ಗೊತ್ತಿಲ್ಲ. ತಂತ್ರಜ್ಞಾನ ಹೊಸದಾದಂತೆಲ್ಲಾ ನಾನಾ ನಮೂನೆಯ ಭಯೋತ್ಪಾದನೆಗಳು ಅಟಕಾಯಿಸಿಕೊಳ್ಳುತ್ತಿವೆ.
ತಾಜಾ ಆಗಿ ಹೀಥ್ರೂ ವಿಮಾನ ನಿಲ್ದಾಣಕ್ಕೆ ಉಗ್ರರ ಕಾಟ ಕಾಡತೊಡಗಿದೆ. ಅದೂ ಸ್ತನ ಬಾಂಬ್ ರೂಪದಲ್ಲಿ. ಇದು ಆಶ್ಚರ್ಯವೇ ಆದರೂ ವಾಸ್ತವ.

ಅಲ್ ಖೈದಾ ಉಗ್ರ ಸಂಘಟನೆ ಕೈವಾಡ
ಈ ಅಲ್ ಖೈದಾ ಸಂಘಟನೆ ಇದೆಯಲ್ಲಾ? ಅದರ ಉಗ್ರರು ಬ್ರಿಟನ್ನಿನ ಹೆಸರುವಾಸಿ ಹೀಥ್ರೂ ವಿಮಾನ ನಿಲ್ದಾಣಕ್ಕೆ ಈ ಬಾಂಬ್ ಬೆದರಿಕೆ ಇದೆ ಎಂದು ಅದು ಯಾವಾಗ ಸ್ಫೋಟವಾಗುತ್ತದೋ ಎಂದು ಆತಂಕದಿಂದ ರಕ್ಷಣಾ ಪಡೆಗಳು ಅದರತ್ತಲೇ ಎವೆಯಿಕ್ಕದೆ ನೋಡುತ್ತಿವೆ. ಇದರಿಂದ ಮಹಿಳಾ ಪ್ರಯಾಣಿಕರು ತೀವ್ರ ಮುಜುಗುರಪಡುವಂತಾಗಿದೆ.

ಹೀಥ್ರೂ: ಭಯೋತ್ಪಾದನೆ ಬೆದರಿಕೆ ಗಂಭೀರ
ಬ್ರಿಟನ್ ಗುಪ್ತಚರ ವಿಭಾಗ ಹೆಚ್ಚು ನಂಬಿಕಾರ್ಹ. ಗುಪ್ತಚರಕ್ಕೆ ಬಂದಿರುವ ಮಾಹಿತಿ ಪ್ರಕಾರ ಈ breast implantಗಳಲ್ಲಿ (ಕನ್ನಡದಲ್ಲಿ ಏನು ಹೇಳುವುದೋ ಗೊತ್ತಾಗ್ತಿಲ್ಲ) ಬಾಂಬುಗಳನ್ನು ಹುದುಗಿಸಿಕೊಂಡ ಮಹಿಳೆಯರು ಯಾವುದೇ ಕ್ಷಣ ಹೀಥ್ರೂ ವಿಮಾನ ನಿಲ್ದಾಣಕ್ಕೆ ನುಗ್ಗಿ ಭಯೋತ್ಪಾದನೆ ಸೃಷ್ಟಿಸಬಹುದಾಗಿದೆ. Intelligence and Security Committee (ISC) of Parliament ಸಹ ಇದನ್ನು ಗಂಭೀರವಾಗಿ ಪರಿಗಣಿಸಿದೆ.

ವಕ್ಷಸ್ಥಳಗಳಲ್ಲಿ ಬಾಂಬುಗಳು
ಈ ಅಲ್ ಖೈದಾ ಸಂಘಟನೆಯಲ್ಲಿ ಬಾಂಬ್ ಉತ್ಪಾದನಾ ಘಟಕದ ಮುಖ್ಯಸ್ಥ Ibrahim al-Asiri ಇದ್ದಾನಲ್ಲಾ ಅವನು ಇದರ ಉಸ್ತುವಾರಿ ಹೊತ್ತಿದ್ದಾನಂತೆ. ಅದಕ್ಕಾಗಿಯೇ ಭಾರಿ ಸಂಖ್ಯೆಯಲ್ಲಿ ಆಕರ್ಷಕ ಯುವತಿಯರನ್ನು ನೇಮಕ ಮಾಡಿಕೊಂಡಿದ್ದು, ಅವರ ವಕ್ಷಸ್ಥಳಗಳಲ್ಲಿ ಬಾಂಬುಗಳನ್ನು ತುರುಕಿ ಉಡಾಯಿಸಲು ಸಜ್ಜಾಗಿದ್ದಾನೆ ಎಂದು ಬ್ರಿಟನ್ ಗುಪ್ತಚರ ಮೂಲಗಳು ಸುಳಿವು ನೀಡಿವೆ.

ಹೆಚ್ಚುವರಿ ತಪಾಸಣೆ- ಪ್ರಯಾಣಿಕರಿಗೆ ತ್ರಾಸ
ಇದರಿಂದ ಹೀಥ್ರೂ ವಿಮಾನ ನಿಲ್ದಾಣದ ಅಧಿಕಾರಿಗಳು ಹೆಚ್ಚುವರಿ ತಪಾಸಣೆಗೆ ಗಮನ ನೀಡಿದ್ದು, ಪ್ರಯಾಣಿಕರಿಗೆ ತ್ರಾಸವಾಗುತ್ತಿದೆ. ಇರಾಕ್, ಲಿಬಿಯಾ, ಪಾಕಿಸ್ತಾನ ಮುಂತಾದ ಕಡೆಗಳಲ್ಲಿ ಇತ್ತೀಚೆಗೆ ಅನೇಕ ಜೈಲು ಪರಾರಿ ಘಟನೆಗಳು ನಡೆದಿವೆ. ಇದಕ್ಕೆ ಅಲ್ ಖೈದಾ ಕುಮ್ಮಕ್ಕು ನೀಡಿದೆ. ಇಂತಹ ಅವಾಂತರಗಳನ್ನು ಸೃಷ್ಟಿಸುವುದು ಅಲ್ ಖೈದಾ ಉದ್ದೇಶವಾಗಿದೆ ಎಂದು ಇಂಟರ್ ಪೋಲ್ ಸಹ ಎಚ್ಚರಿಸಿದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications