ನಮ್ಮನ್ನು ಸಾಯಿಸಿ ಭಾರತೀಯ ಖೈದಿಗಳ ಮನವಿ

ಲೋಕಸಭೆ ಅಧಿವೇಶನದಲ್ಲಿ ಬಿಜೆಪಿ ಸಂಸದ ಅವಿನಾಶ್ ರಾಯ್ ಖನ್ನಾ, ಖೈದಿಗಳು ಬರೆದ ಪತ್ರವನ್ನು ಬಿಡುಗಡೆ ಮಾಡಿ ಕೇಂದ್ರ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಬೇಕು ಎಂದು ಮನವಿ ಮಾಡಿದ್ದಾರೆ.
ಲಾಹೋರ್ ನ ಲಖ್ ಪತ್ ಜೈಲಿನಲ್ಲಿರುವ 11 ಭಾರತೀಯ ಖೈದಿಗಳು ಜೈಲಿನ ಅಧಿಕಾರಿಗಳಿಂದ ಚಿತ್ರಹಿಂಸೆ ಅನುಭವಿಸುತ್ತಿದ್ದೇವೆ. 'ನಮ್ಮನ್ನು ಗುಂಡಿಟ್ಟು ಸಾಯಿಸಿಬಿಡಿ' ಎಂದು ಪತ್ರದಲ್ಲಿ ಪಾಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹಿಂದಿಯಲ್ಲಿ ಬರೆದಿರುವ ಪತ್ರದಲ್ಲಿ 4 ಮಂದಿ ಮಹಿಳೆಯರು ಸೇರಿದಂತೆ, 21 ಮಂದಿ ಪಾಕ್ ಜೈಲಿನ ಅಧಿಕಾರಿಗಳ ಚಿತ್ರಹಿಂಸೆಯಿಂದಾಗಿ ಮಾಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ನಿರಂತರ ಚಿತ್ರಹಿಂದೆ ನೀಡುವ ಬದಲು, ನಮ್ಮನ್ನು ಕೊಂದು ಬಿಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಭಾರತೀಯ ಖೈದಿಗಳಾದ ಕೃಪಾಲ್ ಸಿಂಗ್, ಕುಲದೀಪ್ ಸಿಂಗ್, ಧರ್ಮಸಿಂಗ್, ಮಹಮ್ಮದ್ ಫರೀದ್, ತಿಲಕ್ ರಾಜ್, ಅಬ್ದುಲ್ ಮಜೀದ್, ಶಂಭುನಾಥ್, ಮೋಹಿಂದರ್ ಸಿಂಗ್ ಮುಂತಾದವರ ಸಹಿ ಇದೆ.
ಪಾಕಿಸ್ತಾನದ ಜೈಲುಗಳಲ್ಲಿ 200ಕ್ಕೂ ಹೆಚ್ಚು ಭಾರತೀಯ ಖೈದಿಗಳಿದ್ದಾರೆ. ಕೆಲವು ದಿನಗಳ ಹಿಂದೆ, ಇದೇ ಜೈಲಿನಲ್ಲಿದ್ದ ಸರಬ್ ಜಿತ್ ಸಿಂಗ್ ಮೇಲೆ ಪಾಕಿಸ್ತಾನದ ಖೈದಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಲಾಹೋರ್ ನ ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದ್ದರು.(ಪಿಟಿಐ)












Click it and Unblock the Notifications