• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಾತನ ಹೆಸರು ಜಪಿಸಿದ ನಟಿ ರಮ್ಯಾಗೆ ಮುಖಭಂಗ

By Srinath
|

ಮಂಡ್ಯ, ಆಗಸ್ಟ್ 17: ಮಂಡ್ಯ ಲೋಕಸಭೆ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ, ನಟಿ ರಮ್ಯಾ ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಮತ್ತೆ ಪ್ರಜ್ಞಾಪೂರ್ವಕವಾಗಿ ತಂದೆ ಹೆಸರನ್ನು ಹೇಳಲೊಲ್ಲದ ರಮ್ಯಾ, ಅಪ್ಪನ ಹೆಸರನ್ನು ಮರೆಮಾಚಿದ್ದಾರೆ. ಆದರೆ ತಾನು ಇದೇ ಮಂಡ್ಯದ ಬೋರೇಗೌಡರ ಮೊಮ್ಮಗಳು ಎಂದಿದ್ದಾರೆ.

ಇಷ್ಟು ಹೇಳಿದ್ದೇ ತಡ. ನಿನ್ನೆ ಸುದ್ದಿ ಮಾಧ್ಯಮಗಳು ಬೋರೇಗೌಡರ ಮನೆಯತ್ತ ಠಾಳಾಸಿ, ಸಾಕಷ್ಟು ಮಾಹಿತಿಗಳನ್ನು ಹೊರಹಾಕಿದೆ. ಈ ಮಧ್ಯೆ, 'ಇಷ್ಟಕ್ಕೂ ರಮ್ಯಾ ತಮ್ಮತಂದೆಯ ಹೆಸರನ್ನು ಮರೆಮಾಚುತ್ತಿರುವುದೇಕೆ?' ಎಂದು ಜನ ಕೇಳುವಂತಾಗಿದೆ.

ಸಾಕುತಂದೆ ನಾರಾಯಣ್ ಅವರ ಹಠಾತ್ ಸಾವು ರಮ್ಯಾರನ್ನು ನಿಜಕ್ಕೂ ಸಂಕಷ್ಟಕ್ಕೀಡುಮಾಡಿದೆ. ಇದುವರೆಗೆ ಗುಪ್ತವಾಗಿ/ಸುಪ್ತವಾಗಿದ್ದ ರಮ್ಯಾ ತಂದೆ ವಿಷಯ ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಬಹುಶಃ ನಾರಾಯಣ್ ಅವರು ಇದ್ದಿದ್ದರೆ ಇದನ್ನೆಲ್ಲಾ 'ಮ್ಯಾನೇಜ್' ಮಾಡುತ್ತಿದ್ದರೇನೋ.

ಅಸಲಿಗೆ ರಮ್ಯಾ ಕಥೆ ಕಟ್ಟಿದಂತೆ ಬೋರೇಗೌಡರು ಸಹ ರಮ್ಯಾರ ತಾತ ಅಲ್ಲವಂತೆ. ಬೋರೇಗೌಡರಿಗೋ ಇಬ್ಬರು ಹೆಂಡಿರು. ಅಸಲಿಗೆ ಅವರು ಯಾರೂ ರಮ್ಯಾರ ತಾಯಿ ರಂಜಿತಾ ಅವರಿಗೆ ಜನ್ಮ ನೀಡಿಲ್ಲ. ಅಂದಹಾಗೆ ಬೋರೇಗೌಡರು ಮುನ್ಸಿಪಲ್‌ ಉಪಾಧ್ಯಕ್ಷರಾಗಿದ್ದವರು. (ಇತ್ತೀಚೆಗೆ ಅಂಬರೀಷ್ ಸಹ ಇದನ್ನೇ ಹೇಳಿದ್ದರು).

ಮಾಧ್ಯಮಗಳಿಗೆ ಬೇರೆಯದೇ ಜಗತ್ತು ಅನಾವರಣ

ಮಾಧ್ಯಮಗಳಿಗೆ ಬೇರೆಯದೇ ಜಗತ್ತು ಅನಾವರಣ

ರಮ್ಯಾ ಹೇಳಿದ ಬೋರೇಗೌಡರನ್ನು ಹುಡುಕಿಕೊಂಡು ಹೋದಾಗ ಮಾಧ್ಯಮಗಳಿಗೆ ಬೇರೆಯದೇ ಜಗತ್ತು ಅನಾವರಣಗೊಂಡಿದೆ. ಇತ್ತ ರಮ್ಯಾ ತನ್ನ ಪೂರ್ವಜರ ಬಗ್ಗೆ ಇದುವರೆಗೆ ಮೌನವಾಗಿಯೇ ಇದ್ದ ನಟಿ ರಮ್ಯಾ ನಿನ್ನೆ ಶುಕ್ರವಾರ ಆವೇಶಕ್ಕೊಳಗಾದವರಂತೆ ಮದ್ದೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ 'ನಾನು ಅನಾಥೆ ಅಲ್ಲ. ಮಂಡ್ಯ ಜಿಲ್ಲೆಯ ಜಿಎಸ್ ಬೋರೇಗೌಡರ ಮೊಮ್ಮಗಳು' ಎಂದು ಹೇಳಿದ್ದಾರೆ.

ರಮ್ಯಾ ಆಪ್ತರು ಬೋರೇಗೌಡರ ಮನೆಯತ್ತ ದೌಡು

ರಮ್ಯಾ ಆಪ್ತರು ಬೋರೇಗೌಡರ ಮನೆಯತ್ತ ದೌಡು

ರಮ್ಯಾ ಹೀಗೆ ಹೇಳುತ್ತಿದ್ದಂತೆ ರಮ್ಯಾ ಆಪ್ತರು ಅತ್ತ ಬೋರೇಗೌಡರ ಕುಟುಂಬದವರನ್ನು ಸಂಪರ್ಕಿಸಿದ್ದಾರೆ. 'ಮೇಡಂ ರಮ್ಯಾ ಅವರು ನಿಮ್ಮ ಮನೆಗೆ ಬರುತ್ತಾರಂತೆ. ಚುನಾವಣೆ ಸಂದರ್ಭದಲ್ಲಿ ಅಜ್ಜಿಯ ಆಶೀರ್ವಾದ ಪಡೆಯಲು ಹಂಬಲಿಸುತ್ತಿದ್ದಾರೆ' ಎಂದು ಅಲವತ್ತುಕೊಂಡಿದ್ದಾರೆ.

ಮಂಡ್ಯದಲ್ಲಿ ರಮ್ಯಾ ಅಜ್ಜಿಯರು ಸಾಕಷ್ಟು ಮಂದಿಯಿದ್ದಾರೆ

ಮಂಡ್ಯದಲ್ಲಿ ರಮ್ಯಾ ಅಜ್ಜಿಯರು ಸಾಕಷ್ಟು ಮಂದಿಯಿದ್ದಾರೆ

ಇಷ್ಟು ಹೇಳಿದ್ದೇ ತಡ ಮಂಡ್ಯದಲ್ಲಿ ಜಿಎಸ್ ಬೋರೇಗೌಡರ ಮೊದಲ ಪತ್ನಿ ಸರೋಜಮ್ಮ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾರವರು? ನಮಗೆ ರಮ್ಯಾನೂ ಗೊತ್ತಿಲ್ಲ ರಂಜಿತಾನೂ ಗೊತ್ತಿಲ್ಲ. ರಮ್ಯಾಗೆ ಅಜ್ಜಿಯ ಆಶೀರ್ವಾದ ಬೇಕೇ ಬೇಕು ಅಂದರೆ ಮಂಡ್ಯದಲ್ಲಿ ಅವರ ಅಜ್ಜಿಯರು ಸಾಕಷ್ಟು ಮಂದಿಯಿದ್ದಾರೆ. ಮೊದಲು ಅವರೆಲ್ಲರ ಆಶೀರ್ವಾದ ಪಡೆಯಲಿ ಎಂದು ಕಿಡಿಕಿಡಿಯಾಗಿದ್ದಾರೆ.

ರಮ್ಯಾ- ರಂಜಿತಾ ಕೂಡಲೇ ಕ್ಷಮೆಯಾಚಿಸಲಿ

ರಮ್ಯಾ- ರಂಜಿತಾ ಕೂಡಲೇ ಕ್ಷಮೆಯಾಚಿಸಲಿ

'ರಂಜಿತಾ ತಮ್ಮ ಗಂಡನ ಹೆಸರನ್ನು ರಾಜಕೀಯ ಉದ್ದೇಶ ಸಾಧನೆಗಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡುವುದಿಲ್ಲ. ನನ್ನ ಗಂಡನ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ ರಮ್ಯಾ ಹಾಗೂ ರಂಜಿತಾ ಕೂಡಲೇ ಕ್ಷಮೆಯಾಚಿಸಬೇಕು. ಕ್ಷಮೆ ಕೆಳದಿದ್ದರೆ ಅವರಿಬ್ಬರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ' ಸರೋಜಮ್ಮ ಗುಡುಗಿದ್ದಾರೆ.

ಸರೋಜಮ್ಮ ಹೇಳುವುದೇನು?:

ಸರೋಜಮ್ಮ ಹೇಳುವುದೇನು?:

ಮದ್ದೂರು ತಾಲೂಕು ನಗರಕೆರೆ ಗ್ರಾಮದ ಎಂಪಿ ಲಿಂಗೇಗೌಡರ ಮಗಳಾದ ತಮ್ಮನ್ನು ಗೋಪಾಲಪುರ ಶಿವಗೇಗೌಡರ ಮಗ ಬೋರೇಗೌಡರಿಗೆ ಕೊಟ್ಟು 1949ರಲ್ಲಿ ಮದುವೆ ಮಾಡಿದರು. ಆಗ ನನ್ನ ವಯಸ್ಸು 8 ವರ್ಷ. ಚಿಕ್ಕ ಹುಡುಗಿ ಮದುವೆ ಮಾಡಿಸಿದರೆಂಬ ಕಾರಣಕ್ಕೆ ಬೋರೇಗೌಡರು ಸ್ವಲ್ಪ ಕಾಲ ಮುನಿಸಿಕೊಂಡಿದ್ದರು.

ಮಗನ ಸಂಕಟ ನೋಡಲಾಗದೆ ಅವರ ತಂದೆ-ತಾಯಿ ನನಗಿಂತಲೂ ಹಿರಿಯರಾದ ಮೈಸೂರಿನ ಲಕ್ಷ್ಮಮ್ಮ ಜೊತೆ 1951 ರಲ್ಲಿ ಮದುವೆ ಮಾಡಿಸಿದರು. ನಾನು ಪ್ರಾಪ್ತ ವಯಸ್ಸಿಗೆ ಕಾಲಿಟ್ಟ ಬಳಿಕ ನನಗೂ ಒಂದು ಮಗುವಾಗಿ ಅದು ಸತ್ತು ಹೋಯಿತು. ಲಕ್ಷ್ಮಮ್ಮನವರಿಗೆ ರುಕ್ಮಿಣಮ್ಮ ಹಾಗೂ ಶ್ರೀನಿವಾಸ್‌ ಎಂಬ ಇಬ್ಬರು ಮಕ್ಕಳಿದ್ದಾರೆ.

ಬೋರೇಗೌಡರಿಗೆ ಸರೋಜಮ್ಮ- ಲಕ್ಷ್ಮಮ್ಮ ಧರ್ಮಪತ್ನಿಯರು

ಬೋರೇಗೌಡರಿಗೆ ಸರೋಜಮ್ಮ- ಲಕ್ಷ್ಮಮ್ಮ ಧರ್ಮಪತ್ನಿಯರು

'ಬೋರೇಗೌಡರಿಗೆ ನಾನು ಹಾಗೂ ಲಕ್ಷ್ಮಮ್ಮ ಇಬ್ಬರೂ ಧರ್ಮಪತ್ನಿಯರು. ನಮ್ಮಿಬ್ಬರಲ್ಲಿ ರಂಜಿತಾ ಯಾರ ಮಗಳೂ ಅಲ್ಲ. ಅಂದ ಮೇಲೆ ಆಕೆ ಬೋರೇಗೌಡರ ಮಗಳಾಗಲು ಹೇಗೆ ಸಾಧ್ಯ. ರಂಜಿತಾ ಯಾವ ಉದ್ದೇಶದಿಂದ ಈ ಮಾತನ್ನು ಹೇಳುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಇದು ನನ್ನ ಗಂಡನ ಹೆಸರಿಗೆ ಕಳಂಕ ತರುವ ವಿಷಯವಾಗಿದೆ' ಎಂದು ಸರೋಜಮ್ಮ ಹೇಳಿದರು.

ಮೊಮ್ಮಗಳು ರಮ್ಯಾ ದಿಢೀರನೆ ಉದ್ಭವವಾದಳೇ?

ಮೊಮ್ಮಗಳು ರಮ್ಯಾ ದಿಢೀರನೆ ಉದ್ಭವವಾದಳೇ?

'ರಂಜಿತಾ ಹೇಳುತ್ತಿರುವುದೆಲ್ಲಾ ಸುಳ್ಳು. ಅವರು ಬೋರೇಗೌಡರ ಮಗಳೇ ಆಗಿದ್ದರೆ ಅವರು ಮೃತಪಟ್ಟಾಗ ಅಂತ್ಯಕ್ರಿಯೆ, ಉತ್ತರಕ್ರಿಯೆಗೆ ಏಕೆ ಬರಲಿಲ್ಲ. ಇಷ್ಟು ವರ್ಷ ರಂಜಿತಾ ನಮ್ಮೊಂದಿಗೆ ಯಾವುದೇ ಸಂಪರ್ಕವಿಟ್ಟುಕೊಂಡಿಲ್ಲ. ಬೋರೇಗೌಡರ ತಮ್ಮ ಶಂಕ್ರಣ್ಣ ಮೃತಪಟ್ಟಾಗಲೂ ರಂಜಿತಾ ಬರಲಿಲ್ಲ. ಈಗ ಚುನಾವಣೆ ವೇಳೆ ಬೋರೇಗೌಡರ ಮಗಳು, ಮೊಮ್ಮಗಳು ದಿಢೀರನೆ ಉದ್ಭವವಾದರೇ ಎಂದು ಬೋರೇಗೌಡರ ಅಣ್ಣನ ಮಗಳು ಶರ್ವಾಣಿ ಪ್ರಶ್ನಿಸಿದ್ದಾರೆ.

ರಮ್ಯಾ ವೃತ್ತಿ ಜೀವನದ ಮೇಲೂ ಪ್ರಭಾವ

ರಮ್ಯಾ ವೃತ್ತಿ ಜೀವನದ ಮೇಲೂ ಪ್ರಭಾವ

ಹಾಗಾದರೆ ಬೋರೇಗೌಡರ ಕುಟುಂಬಸ್ಥರು ಕಿಡಿಕಾರುವಂತೆ ರಾಜಕೀಯ ಸ್ವಾರ್ಥ ಸಾಧನೆಗೆ ನಾಟಕವಾಡುತ್ತಾ ರಮ್ಯಾ ಅಮ್ಮ-ಮಗಳು ಬೋರೇಗೌಡರ ಹೆಸರನ್ನು ದುರುಪಯೋಗ ಮಾಡಿಕೊಳ್ಳಲು ಯತ್ನಿಸಿದರಾ? ಇದು ರಮ್ಯಾ ರಾಜಕೀಯದ ಮೇಲಷ್ಟೇ ಅಲ್ಲ ಅವರ ಸಿನಿ ವೃತ್ತಿ ಜೀವನದ ಮೇಲೂ ಪ್ರಭಾವ ಬೀರುವ ಲಕ್ಷಣಗಳಿವೆ. ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ಲೋಕದಲ್ಲಿ ಯಾವುದೇ ನಟ/ನಟಿ ತಮ್ಮ ಖಾಸಗಿ ಬದುಕಿನ ಬಗ್ಗೆ ಇಷ್ಟೊಂದು ರಂಪಾಟ ಮಾಡಿಕೊಂಡಿರಲಿಲ್ಲ.

ರಂಜಿತಾ ಯಾರ ಮಗಳು ?

ರಂಜಿತಾ ಯಾರ ಮಗಳು ?

ಇಷ್ಟೆಲ್ಲಾ ಆದ ಮೇಲೆ 'ರಮ್ಯಾ ಯಾರ ಮಗಳು ಎಂಬ ಪ್ರಶ್ನೆ ಹಿಂದೆ ಸರಿದು ರಂಜಿತಾ ಯಾರ ಮಗಳು ಎಂಬ ಪ್ರಶ್ನೆ ಉದ್ಭವವಾಗಿದೆ? ಒಟ್ಟಿನಲ್ಲಿ ಮಂಡ್ಯ ಮತದಾರರಿಗೆ ಎಲ್ಲ ಗೋಜಲು ಗೋಜಲು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mandya Lok Sabha bypoll Congress candidate Kannada Actress Ramya takes grandfather Boregowda's name Stirs up a hornets' nest. Boregowda family members denie Ramya's claim thet she (Ramya) is a grand daughter of Boregowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more