ಕರ್ನಾಟಕ ಇಬ್ಬರಿಗೆ ಗಲ್ಲು ಖಾಯಂಗೊಳಿಸಿದ ರಾಷ್ಟ್ರಪತಿ

ಸ್ವಾತಂತ್ರ್ಯ ದಿನಾಚರಣೆ ಮುಗಿದ ಬಳಿಕ ಶುಕ್ರವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕ್ಷಮಾದಾನ ಅರ್ಜಿಯನ್ನು ಪರಿಶೀಲಿಸಿದ್ದು, ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಶಿವು ಮತ್ತು ಜಡೇಸ್ವಾಮಿ ಅವರ ಕಮಾದಾನ ಅರ್ಜಿಯನ್ನು ತಿಸ್ಕರಿಸಿದ್ದಾರೆ.
18 ವರ್ಷದ ಯುತಿಯ ಮೇಲೆ ಶಿವು ಮತ್ತು ಜಡೇಸ್ವಾಮಿ ಅತ್ಯಾಚಾರ ನಡೆಸಿ, ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದರು. ಇವರ ಮೇಲಿನ ಆರೋಪ ಸಾಬೀತಾಗಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿತ್ತು.
ಹಿಂಡಲಗಾ ಜೈಲಿನಲ್ಲಿರುವ ಇಬ್ಬರು ಆರೋಪಿಗಳು ಪ್ರಕರಣದಲ್ಲಿ ತಮಗೆ ಕ್ಷಮಾದಾನ ನೀಡುವಂತೆ ಕೋರಿ ರಾಷ್ಟ್ರಪತಿ ಅವರಿಗೆ ಅರ್ಜಿ ಸಲ್ಲಿಸಿದ್ದರು. ಇವರ ಕ್ಷಮಾದಾನ ಅರ್ಜಿಯನ್ನು ಪ್ರಣಬ್ ಮುಖರ್ಜಿ ತಿರಸ್ಕರಿಸಿದ್ದು, ಇಬ್ಬರಿಗೂ ಗಲ್ಲು ಶಿಕ್ಷೆ ಜಾರಿಯಾಗುವುದು ಖಾತ್ರಿಯಾಗಿದೆ.
ಪ್ರಕರಣವೇನು : ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಭದ್ರಯ್ಯನಹಳ್ಳಿ ಗ್ರಾಮದ ಶಿವು ಮತ್ತು ಜಡೇಸ್ವಾಮಿ 2001ರ ಅಕ್ಟೋಬರ್ 15ರಂದು 18 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದರು.
ಅತ್ಯಾಚಾರದ ಸಂದರ್ಭದಲ್ಲಿ ಯುವತಿ ಶಿವು ಮತ್ತು ಜಡೇಸ್ವಾಮಿ ಅವರ ಕೈಯನ್ನು ಬಲವಾಗಿ ಕಚ್ಚಿದ್ದಳು ಇದರಿಂದ ಅವರ ಕೈ ಚರ್ಮ ಕಿತ್ತುಬಂದಿತ್ತು. ಯುವತಿ ತಾಯಿ ಚೆಲ್ಲಮ್ಮ ನೀಡಿದ ದೂರಿನ ಅನ್ವಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
ಇಬ್ಬರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಾಬೀತಾಗಿ ಕರ್ನಾಟಕ ಹೈಕೋರ್ಟ್ 2005ರಲ್ಲಿ ಇಬ್ಬರು ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ, ಆರೋಪಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
2007ರಲ್ಲಿ ಕರ್ನಾಟಕ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದ್ದ ಸುಪ್ರೀಂಕೋರ್ಟ್, ಶಿವು ಮತ್ತು ಜಡೇಸ್ವಾಮಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಪಕ್ರರಣದಲ್ಲಿ ಕ್ಷಮಾದಾನ ನೀಡಬೇಕೆಂದು ಕೋರಿ ಇಬ್ಬರು ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. (ರೇಪ್-ಮರ್ಡರ್ ಮಾಡಿದ ಶಿವು-ಜಡೇಸ್ವಾಮಿಗೆ ಗಲ್ಲು)












Click it and Unblock the Notifications