ಚುನಾವಣೆ ಖರ್ಚಿಗೆ ದೇವೇಗೌಡರು ಸಾಲ ಮಾಡಿದ್ದಾರಂತೆ!

dk shivakumar
ಬೆಂಗಳೂರು, ಆ.16 : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ದೇವೇಗೌಡರಿಗೆ 6 ಕೋಟಿ ರೂ. ಸಾಲ ಮಂಜೂರು ಮಾಡಬಾರದು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಅವರಿಗೆ ದೂರು ನೀಡಿರುವ ಡಿ.ಕೆ.ಶಿವಕುಮಾರ್, ಎಚ್.ಡಿ.ದೇವೇಗೌಡ ಅವರು ಬೇನಾಮಿ ಹೆಸರಿನಲ್ಲಿ 6 ಕೋಟಿ ರೂ.ಸಾಲ ಪಡೆಯುತ್ತಿದ್ದಾರೆ. ಲೋಕಸಭೆ ಉಪ ಚುನಾವಣೆಯಲ್ಲಿ ಖರ್ಚು ಮಾಡಲು ಈ ಹಣ ಬಳಸುತ್ತಾರೆ ಎಂದು ದೂರಿದ್ದಾರೆ.

ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಜಿಲ್ಲೆಗಳ ಲೋಕಸಭೆ ಉಪ ಚುನಾವಣೆ ಮುಗಿಯುವ ತನಕ ದೇವೇಗೌಡರಿಗೆ ಸಾಲ ಮಂಜೂರು ಮಾಡಬಾರದು ಎಂದು ಶಿವಕುಮಾರ್ ತಮ್ಮ ದೂರಿನಲ್ಲಿ ಮನವಿ ಮಾಡಿದ್ದಾರೆ.

ದೂರಿನ ವಿವರ : ಬೆಂಗಳೂರಿನ ವಿಜಯನಗರದ ಜನತಾ ಕೋ ಆಪರೇಟಿವ್‌ ಬ್ಯಾಂಕ್‌ ನಲ್ಲಿ ದೇವೇಗೌಡರ ಆಪ್ತ, ಜವರೇಗೌಡ ಕುಟುಂಬ ಸದಸ್ಯರಿಗೆ ಆಗಸ್ಟ್‌ 13 ರಂದು ಆರು ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ.

ದೇವೇಗೌಡರು ತಮ್ಮ ಆಪ್ತರ ಮೂಲಕ ಇದನ್ನು ಉಪ ಚುನಾವಣೆಯಲ್ಲಿ ಅಕ್ರಮವಾಗಿ ವೆಚ್ಚ ಮಾಡಲು ಪಡೆಯುತ್ತಿದ್ದಾರೆ. ಆದ್ದರಿಂದ ಚುನಾವಣೆ ಮುಗಿಯುವ ತನಕ ಈ ಹಣವನ್ನು ಬಿಡುಗಡೆ ಮಾಡಬಾರದು ಎಂದು ಶಿವಕುಮಾರ್ ಮನವಿ ಮಾಡಿದ್ದಾರೆ.

ಜವರೇಗೌಡರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ದೇವೇಗೌಡರ ಶಿಫಾರಸ್ಸಿನಂತೆ ಈ ಹಣವನ್ನು ಪಡೆಯಲಾಗುತ್ತಿದೆ ಎಂಬುದು ಶಿವಕುಮಾರ್ ಅವರ ಆರೋಪ.

(67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+