ರೇಪ್ ಬಾಧಿತರಿಗೆ ವಿತರಣೆಯಾಗದ 221 ಕೋಟಿ ಪರಿಹಾರ

ನವದೆಹಲಿ, ಆಗಸ್ಟ್ 16: ಅತ್ಯಾಚಾರ ಬಾಧಿತರಿಗೆ ಆರ್ಥಿಕವಾಗಿಯಾದರೂ ನೆರವಾಗಲೆಂದು ಕೇಂದ್ರ ಸರಕಾರ ಕಳೆದ ಮೂರು ವರ್ಷಗಳಲ್ಲಿ ಅತ್ಯಾಚಾರ ಬಾಧಿತರ ಪರಿಹಾರ ನಿಧಿಗೆಂದು 200 ಕೋಟಿ ರೂ. ಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಿದೆ. ದೌರ್ಭಾಗ್ಯವೆಂದರೆ ಈ ನಿಧಿಯಿಂದ ಕವಡೆ ಕಾಸೂ ಇನ್ನೂ ಬಾಧಿತರನ್ನು ತಲುಪಿಲ್ಲ. ಅಷ್ಟೂ ಹಣ ಹಾಗೆಯೇ ಕೊಳೆಯುತ್ತಾ ಬಿದ್ದಿದೆ.

ಚೋದ್ಯವೆಂದರೆ ಅತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಕ್ಕೆ ಕೇಂದ್ರ ಸರಕಾರ ಒದಗಿಸುತ್ತಿರುವ ಈ ಅನುದಾನ ಬಳಕೆಯಾಗದೇ ಖಜಾನೆಯಲ್ಲೇ ಕೊಳೆಯುತ್ತಿದ್ದರೆ ಇತ್ತ ದೌರ್ಜನ್ಯಕ್ಕೊಳಗಾದ ಮಹಿಳೆಯರು ಆರ್ಥಿಕ ಸಹಾಯಕ್ಕಾಗಿ ಕಾದುಕುಳಿತಿದ್ದಾರೆ.

ಈ ಅವಾಂತರಕ್ಕೆ ಮುಖ್ಯವಾಗಿ ಕಾರಣವಾಗಿರುವುದು ಯೋಜನಾ ಆಯೋಗ ಅನುದಾನ ಬಳಕೆಗೆ ಅಸ್ತು ಅನ್ನದಿರುವುದು.

221 ಕೋಟಿ ರೂ ಅನುದಾನ ಖಜಾನೆಯಲ್ಲೇ ಇದೆ

221 ಕೋಟಿ ರೂ ಅನುದಾನ ಖಜಾನೆಯಲ್ಲೇ ಇದೆ

2009ರಿಂದ 2012ರ ನಡುವೆ ಬಜೆಟಿನಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಕ್ಕೆ 221 ಕೋಟಿ ರೂ ಅನುದಾನ ತೆಗೆದಿರಿಸಲಾಗಿದೆಯಾದರೂ ಅದು ಸದ್ಬಳಕೆಯಾಗದೆ ಅಷ್ಟೂ ಹಣ ಖಜಾನೆಯಲ್ಲೇ ಕೊಳೆಯುತ್ತಿದೆ.

ಬಳಕೆ ವಿಚಾರದಲ್ಲಿ ತೀವ್ರ ಗೊಂದಲ

ಬಳಕೆ ವಿಚಾರದಲ್ಲಿ ತೀವ್ರ ಗೊಂದಲ

ಅನುದಾನ ಬಳಕೆ ವಿಚಾರದಲ್ಲಿ ತೀವ್ರ ಗೊಂದಲ ಏರ್ಪಟ್ಟಿದೆ. ಸಚಿವಾಲಯವು ಅನುದಾನ ಬಳಕೆಗೆ ಅನುಮತಿ ಕೋರಿ ಸತತವಾಗಿ ಯೋಜನಾ ಆಯೋಗ ಪ್ರಸ್ತಾವನೆ ಸಲ್ಲಿಸುತ್ತಿದೆ. ಆದರೆ ಆಯೋಗ ಮಾತ್ರ ಮಗುಮ್ಮಾಗಿ ಕುಳಿತಿದೆ.

ಎರಡೂ ಕಡೆ ಜಟಾಪಟಿ ಜೋರಾಗಿದೆ

ಎರಡೂ ಕಡೆ ಜಟಾಪಟಿ ಜೋರಾಗಿದೆ

ಬಿಡುಗಡೆಯಾದ ಅನುದಾನವನ್ನು ರಾಜ್ಯ ಸರಕಾರಗಳ ಸಂಬಂಧಿಸಿದ ಸಚಿವಾಲಯಕ್ಕೆ ಹಂಚಿಕೆ ಮಾಡಬೇಕು ಎಂದು ಯೋಜನಾ ವಿಭಾಗ ತಿಳಿಸಿದ್ದರೆ ಕೇಂದ್ರ ಯೋಜನಾ ಆಯೋಗ ಹೆಚ್ಚುವರಿ ಸಹಾಯ ಯೋಜನೆ ಮೂಲಕ ಸಂತ್ರಸ್ಥರಿಗೆ ಸಹಾಯ ಮಾಡಬೇಕು ಎಂದು ಹೇಳುತ್ತಿದೆ. ಒಟ್ಟಿನಲ್ಲಿ ಎರಡೂ ಕಡೆ ಜಟಾಪಟಿ ಜೋರಾಗಿದೆ.

ಅತ್ಯಾಚಾರ - 2 ಲಕ್ಷ ರೂ ಪರಿಹಾರ

ಅತ್ಯಾಚಾರ - 2 ಲಕ್ಷ ರೂ ಪರಿಹಾರ

ಈ ಮಧ್ಯೆ, ದೇಶಾದ್ಯಂತ 2012ರಲ್ಲಿ ಸುಮಾರು 25 ಸಾವಿರ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅತ್ಯಾಚಾರ ಸಂತ್ರಸ್ತರ ಪುನರ್ವಸತಿ ಪ್ರಕಾರ ಒಟ್ಟಾರೆಯಾಗಿ 2 ಲಕ್ಷ ರೂ ಪರಿಹಾರ ವಿತರಣೆಯಾಗಬೇಕು. ಎಫ್ಐಆರ್ ದಾಖಲಾಗುತ್ತಿದ್ದಂತೆ ಮಧ್ಯಂತರ ಪರಿಹಾರವೆಂದು 20 ಸಾವಿರ ರೂ. ವಿತರಿಸಬೇಕು. ಸಂತ್ರಸ್ಥೆಯ ಪರಿಹಾರ ಯೋಜನೆ ಅಗತ್ಯತೆಯ ಪ್ರಕಾರ 50 ಸಾವಿರ ರೂ ವರೆಗೂ ಪರಿಹಾರ ನೀಡಬೇಕು. ನ್ಯಾಯಾಲಯದ ತೀರ್ಪಿನ ದಾಖಲೆ ಸಲ್ಲಿಸಿದ ಬಳಿಕ ಒಟ್ಟು ಗರಿಷ್ಠ 1.3 ಲಕ್ಷ ರೂ. ನೀಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+