ಶ್ರಾವಣ ಶುಕ್ರವಾರ: ಚಿನ್ನದ ದರ 30 ಸಾವಿರ

ಆಭರಣ ಚಿನ್ನದ ಬೆಲೆ ಶ್ರಾವಣ ಶುಕ್ರವಾರವಾದ ಇಂದು 30,000 ರೂ ಗಡಿಗೆ ಬಂದು ನಿಂತಿದೆ. ಚಿನ್ನದ ಸರಕು ಮಾರುಕಟ್ಟೆಯಲ್ಲೂ ಚಿನ್ನದ ಮೌಲ್ಯ ಹೆಚ್ಚಾಗಿದೆ. ಏಪ್ರಿಲ್‌ನಿಂದ ಕುಸಿತಕಂಡಿದ್ದ ಚಿನ್ನದ ದರ ಮೊದಲ ಬಾರಿಗೆ 30000 ಸಾವಿರ ರೂಪಾಯಿ ಗಡಿ ದಾಟಿದ್ದು 10 ಗ್ರಾಂ ಚಿನ್ನಕ್ಕೆ 1100 ರೂಪಾಯಿ ಏರಿಕೆ ಕಂಡಿದೆ.
2013ರ ಮೊದಾಲರ್ಧದಲ್ಲಿ ಚೀನಾದಲ್ಲಿ ಎಂದಿನಂತೆ ಚಿನ್ನಕ್ಕೆ ಬೇಡಿಕೆ ಅಧಿಕವಾಗಿಯೇ (ಶೇ. 54ರಷ್ಟು ಏರಿಕೆ) ಕಂಡುಬಂದಿದೆ. 2012ರಲ್ಲಿ ಭಾರತದಲ್ಲಿ 864 ಟನ್ ಚಿನ್ನ ಬಳಕೆಯಾಗಿದ್ದರೆ, ಚೀನಾದಲ್ಲಿ 832 ಟನ್ ಬಳಕೆಯಾಗಿತ್ತು. ಚೀನಾ ತನ್ನ ಬೇಡಿಕೆಯಲ್ಲಿ ಅರ್ಧದಷ್ಟನ್ನು ಸ್ವತಃ ಉತ್ಪಾದಿಸಿ ಪೂರೈಸಿದರೆ ಭಾರತ ಬಹುತೇಕ ಆಮದನ್ನು ಅವಲಂಬಿಸಿದೆ.
2013ರ ಏಪ್ರಿಲ್ -ಜೂನ್ ತ್ರೈಮಾಸಿಕದಲ್ಲಿ ಭಾರತದ ಚಿನ್ನದ ಆಮದು 338 ಮೆಟ್ರಿಕ್ ಟನ್ನಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 153 ಟನ್ ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು.
ಚಿನ್ನದ ಸರಕು ವಾಯಿದಾ ಮಾರುಕಟ್ಟೆಯಲ್ಲಿ 2013ರ ಅಕ್ಟೋಬರ್ ವಾಯಿದಾ ಅವಧಿಗೆ 10 ಗ್ರಾಂ ಗೆ 30,205 ರೂ. ಗೆ ಜಿಗಿದಿದೆ. ಇದು ಇಂದು ಒಂದು ಹಂತದಲ್ಲಿ 30,470 ರೂ. ಗೆ ಏರಿತ್ತು.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ












Click it and Unblock the Notifications