ಉದ್ಘಾಟನೆಗೆ ಸಜ್ಜಾಗಿದೆ ಚಿಟ್ಟೆಗಳ ಪಾರ್ಕ್

Sammilan Shetty
ಮಂಗಳೂರು, ಆ.14 : ಚಿತ್ತಾಕರ್ಷಕವಾದ ಚಿಟ್ಟೆಗಳನ್ನು ನೋಡಲು ನೀವು ಇನ್ನು ಮುಂದೆ ಚೆಟ್ಟೆ ಪಾರ್ಕ್ ಗೆ ಭೇಟಿ ನೀಡಬಹುದು. ಮೂಡಿಗೆರೆ ಸಮೀಪದ ಬೆಳುವಾಯಿ ಗ್ರಾಮದ ಬಳಿ ಚಿಟ್ಟೆಗಳಿಗಾಗಿಯೇ 'ಸಮ್ಮಿಲನ್‌ ಶೆಟ್ಟಿ ಬಟರ್ ಫ್ಲೈ ಪಾರ್ಕ್‌' ನಿರ್ಮಾಣಗೊಂಡಿದೆ.

ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಪಾರ್ಕ್ ನ ಸಂಸ್ಥಾಪಕ ಸಮ್ಮಿಲನ್ ಶೆಟ್ಟಿ, ರಾಜ್ಯದಲ್ಲೇ ಮೊದಲ ಖಾಸಗಿ ಚಿಟ್ಟೆ ಪಾರ್ಕ್ ಆ.18ರಂದು ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.

ಕಾರ್ಕಳ ಮತ್ತು ಮೂಡಬಿದಿರೆ ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ- 169ರಿಂದ 8 ಕಿ.ಮೀ. ದೂರದ ಬೆಳುವಾಯಿ ಗ್ರಾಮದಲ್ಲಿ ಪಾರ್ಕ್‌ ತಲೆ ಎತ್ತಿದ್ದು, ಚಿಟ್ಟೆ ತಜ್ಞ ಐಸಾಕ್‌ ಕೆಹ್ಮಿಕರ್‌, ಪಾರ್ಕ್‌ ಉದ್ಘಾಟಿಸಲಿದ್ದಾರೆ ಎಂದರು.

ಕಾಂತಾವರ ಕಾಡಿನ 7.35 ಎಕರೆ ಭೂವಿಯಲ್ಲಿ ಪಾರ್ಕ್‌ ನಿರ್ಮಾಣ ಮಾಡಲಾಗಿದ್ದು, ಇಲ್ಲಿ 113 ಚಿಟ್ಟೆ ಪ್ರಬೇಧಗಳನ್ನು ಕಾಣಬಹುದಾಗಿದೆ. ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಮಾತ್ರ ಕಂಡು ಬರುವ ಮಲಬಾರ್ ಪಿಕಾಕ್‌, ಸದರ್ನ್ ಬರ್ಡ್‌ ವಿಂಗ್‌, ತಮಿಳ್‌ ಲೇಸ್‌ ವಿಂಗ್‌, ತಮಿಳ್‌ ಓಕ್‌ ಬ್ಲೂ ಮುಂತಾದ ಚಿಟ್ಟೆಗಳು ಪಾರ್ಕ್ ನಲ್ಲಿ ಇರಲಿವೆ ಎಂದು ಮಾಹಿತಿ ನೀಡಿದರು.

ಸಂರಕ್ಷಣೆ : ಕೃಷಿಗೆ ರಾಸಾಯನಿಕ ಗೊಬ್ಬರ ಬಳಸುತ್ತಿರುವುದರಿಂದ ಪತಂಗಗಳ ಸಂತತಿ ವಿನಾಶದ ಅಂಚಿನಲ್ಲಿದೆ. ಚಿಟ್ಟೆಗಳನ್ನು ಸಂರಕ್ಷಿಸುವ ಕೆಲಸವನ್ನು ಪಾರ್ಕ್ ಮಾಡಲಿದೆ ಎಂದು ಸಮ್ಮಿಲನ್ ಶೆಟ್ಟಿ ತಿಳಿಸಿದರು.

ಭೇಟಿಯ ಸಮಯ : ಚಿಟ್ಟೆಯ ಪಾರ್ಕ್ ನೋಡಲು ಆಸಕ್ತಿ ಉಳ್ಳವರು ಪ್ರತಿ ಭಾನುವಾರ ಬೆಳಗ್ಗೆ 8.30 ರಿಂದ ಮಧ್ಯಾಹ್ನ 12.30ರ ವರೆಗೆ ಭೇಟಿ ನೀಡಬಹುದು. 8.45ರಿಂದ 9.45ರ ತನಕ ಚಿಟ್ಟೆಗಳ ಜೀವನಕ್ರಮ ಹಾಗೂ ಸಂರಕ್ಷಣೆಯ ಅಗತ್ಯದ ಕುರಿತು ಮಾಹಿತಿ ನೀಡಲಾಗುವುದು ಎಂದರು.

12 ಪಾರ್ಕ್ ಗಳಿವೆ : ದೇಶದಲ್ಲಿ 12 ಖಾಸಗಿ ಮತ್ತು ಸರ್ಕಾರಿ ಚಿಟ್ಟೆ ಪಾರ್ಕ್‌ಗಳಿವೆ. ಬೆಂಗಳೂರಿನ ಬನ್ನೇರುಘಟ್ಟ ಬಟರ್ ಫ್ಲೈ ಪಾರ್ಕ್‌ ಮತ್ತು ಮೈಸೂರಿನ ಕಾರಂಜಿ ಬಟರ್ ಫ್ಲೈ ಪಾರ್ಕ್‌ ಸರ್ಕಾರಕ್ಕೆ ಸೇರಿವೆ.

(67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+