ಬೆಂಗಳೂರಿನಲ್ಲಿ ಅಮೆರಿಕ ಕಾಂಗ್ರೆಸ್ಸಿಗರ ಉಪನ್ಯಾಸ

ಭಾರತ ಮೂಲದ ಏಕೈಕ ಅಮೆರಿಕ ಸಂಯುಕ್ತ ಸಂಸ್ಥಾನದ ಕಾಂಗ್ರೆಸ್ ಸದಸ್ಯರಾದ ಡಾ.ಅಮಿ ಬೆರಾ ಅವರು 2013ರ ಆಗಸ್ಟ್ 24ರಂದು ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಲ್ಲಿರುವ ದಯಾನಂದ ಸಾಗರ್ ವಿದ್ಯಾಸಂಸ್ಥೆಗಳ ಆವರಣದಲ್ಲಿನ ಡಾ.ಪ್ರೇಮಚಂದ್ರ ಸಾಗರ್ ಸಭಾಂಗಣ ಮತ್ತು ಪ್ರದರ್ಶನ ಕಲಾ ಕೇಂದ್ರದಲ್ಲಿ ಉಪನ್ಯಾಸ ನೀಡಲಿದ್ದಾರೆ.
ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಬೋಧಕ ವೃಂದದವರನ್ನು ಕುರಿತು 'ಭಾರತ ಮತ್ತು ಅಮೆರಿಕ ಸಂಸ್ಥಾನ: ಹೆಚ್ಚು ಭಾಗೀದಾರಿಕೆಯ ಅವಶ್ಯಕತೆ' ಕುರಿತಂತೆ ಡಾ.ಅಮಿ ಬೆರಾ ಉಪನ್ಯಾಸ ನೀಡಲಿದ್ದಾರೆ.
ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಪ್ರತಿನಿಧಿಗಳು (ಕಾರ್ಪೋರೇಟ್ಸ್), ವಿಜ್ಞಾನಿಗಳು, ಸರ್ಕಾರದ ಪ್ರತಿನಿಧಿಗಳು, ಪೌರಸಂಸ್ಥೆಗಳ ಪ್ರತಿನಿಧಿಗಳು, ಸಂಶೋಧಕರು, ವಿದ್ಯಾ ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ವಿಷಯ ತಜ್ಞರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ಆಹ್ವಾನ ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಮುಂಚಿತವಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಭಾಗವಹಿಸಲು ಆಸಕ್ತಿ ಇರುವವರು ತಮ್ಮ ವೈಯಕ್ತಿಕ ವಿವರಗಳನ್ನು [email protected] ಇ-ಮೈಲ್ ಗೆ ಪತ್ರ ಕಳುಹಿಸಿ, ಅಧಿಕೃತ ಆಹ್ವಾನವನ್ನು ಪಡೆಯಬಹುದು ಎಂದು ಹಿರಿಯ ಕಾರ್ಯಕಾರಿ ಉಪಾಧ್ಯಕ್ಷ ಆರ್.ಜನಾರ್ಧನ್ ಹೇಳಿದ್ದಾರೆ.












Click it and Unblock the Notifications