ಅಪಾರ್ಟ್ ಮೆಂಟುಗಳಲ್ಲೂ ಆಧಾರ್ ಕಾರ್ಡ್ ನೋಂದಣಿ!

ಏನಿಲ್ಲ. ಇನ್ನು ಮುಂದೆ ನಿಮ್ಮ ಮನೆಯ ಬಾಗಿಲಲ್ಲೇ ನೀವು ಆಧಾರ್ ಕಾರ್ಡ್ ನೋಂದಣಿ ಮಾಡಿಸಬಹುದಾಗಿದೆ. ಆಧಾರ್ ಕಾರ್ಡ್ ನೋಂದಣಿ ಮಾಡಿಸಲು ಹರಸಾಹಸ ಪಡುತ್ತಿದ್ದ ಜನ ಈ ಸುದ್ದಿಯನ್ನು ಕೇಳಿ ಬೆಚ್ಚಿಬಿದ್ದಿದ್ದಾರೆ. ಆದರೆ ಇದು ವಾಸ್ತವ. ಜನರ ಮನೆ ಬಾಗಿಲಿಗೇ ಬಂದು ಆಧಾರ್ ಕಾರ್ಡ್ ನೋಂದಣಿ ಮಾಡಿಸುತ್ತಿದೆ.
ಆದರೆ ಇದು ದೊಡ್ಡ ದೊಡ್ಡ ಅಪಾರ್ಟ್ ಮೆಂಟ್ ಗಳಿಗೆ ಸೀಮಿತ. ನೀವು ಮಾಡಬೇಕಿರುವುದು ಇಷ್ಟೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಶಕ್ತಿ ಭವನದ ಎದುರಿಗಿರುವ ಖನಿಜ ಭನವದಲ್ಲಿ Unique Identification Authority of India (UIDAI) ಪ್ರಾಧಿಕಾರದ ಪ್ರಧಾನ ಕಚೇರಿ ಇದೆ.
ಇಲ್ಲಿಗೆ ಅರ್ಜಿಯೊಂದನ್ನು ಹಾಕಿಕೊಂಡು, ನಿಮ್ಮ ಅಪಾರ್ಟ್ ಮೆಂಟಿನಲ್ಲಿ ಎಷ್ಟು ಮಂದಿ ಇದ್ದಾರೆ ಎಂದು ತಿಳಿಸಿದರೆ ಸಾಕು. ಪ್ರಾಧಿಕಾರದ ತಾಂತ್ರಿಕ ತಂಡ ನಿಮ್ಮ ಅಪಾರ್ಟ್ ಮೆಂಟಿಗೆ ಬಂದು ಎಲ್ಲರಿಗೂ ಆಧಾರ್ ಕಾರ್ಡ್ ನೋಂದಣಿ ಮಾಡಿಸಿಕೊಡುತ್ತಾರೆ.
ಇದಲ್ಲದೆ, ಇನ್ನೊಂದು ವರ್ಷದಲ್ಲಿ ಕರ್ನಾಟಕದಲ್ಲಿ ಸಂಪೂರ್ಣವಾಗಿ ಎಲ್ಲರಿಗೂ ಆಧಾರ್ ಕಾರ್ಡ್ ನೋಂದಣಿ ಮಾಡಿಸಲಾಗುವುದು ಎಂದು ಸಿಎಂ ಸಿದ್ದು ಮತ್ತು UIDAI ಅಧಿಪತಿ ನಂದನ್ ನಿಲೇಕಣಿ ಹೇಳಿರುವುದನ್ನು ಸಾಕ್ಷಾತ್ಕರಿಸಲು ದೊಡ್ಡ ದೊಡ್ಡ ಅಪಾರ್ಟ್ ಮೆಂಟ್ ಗಳು ಮತ್ತು ದೊಡ್ಡ ದೊಡ್ಡ ಕಂಪನಿ/ ಸಂಸ್ಥೆಗಳಲ್ಲಿಯೂ ಸಾಮೂಹಿಕ ನೋಂದಣಿ ಮಾಡಿಸಲಾಗುತ್ತಿದೆ.
Infosys, Bosch, L&T, Tech Mahindra, Wipro, AMC Engineering, LifeStyle ಮತ್ತು Sap Labs ಕಂಪನಿಗಳು ಈ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿದೆ.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ












Click it and Unblock the Notifications