ಪಿಎಂ, ಬಡತನ, ಮದುವೆ ಬಗ್ಗೆ ರಾಹುಲ್ 'ಮನಸ್ಥಿತಿ'
ಬೆಂಗಳೂರು, ಆ.8: 'ಬಡತನವೆಂಬುದು ಕೇವಲ ಮನಸ್ಥಿತಿಯಷ್ಟೇ. ನಾವು ಅಂದುಕೊಂಡರಷ್ಟೇ ಅದು ಇರುತ್ತದೆ, ನಾವು ಬಡವರಲ್ಲ ಎಂದು ಕೊಂಡರೆ ಇರುವುದಿಲ್ಲ, ಇದು ಹಣ ಅಥವಾ ಆಹಾರಕ್ಕಾಗಲಿ ಸಂಬಂಧಿಸಿಯೇ ಇಲ್ಲ' ಎಂದು ಹೇಳಿ ವಿವಾದಕ್ಕೀಡಾಗಿದ್ದ ಕಾಂಗ್ರೆಸ್ ಯುವರಾಜ ರಾಹುಲ್ ಗೆ ಮತ್ತೆ ಕಾಟ ಶುರುವಾಗಿದೆ. ಆದರೆ, ಈ ಬಾರಿ ರಾಹುಲ್ ಪರವಾಗಿ ಹೊಸದಾಗಿ ನೇಮಕಗೊಂಡಿರುವ ಎಐಸಿಸಿ ಕಾರ್ಯದರ್ಶಿ ಸ್ವರಾಜ್ ಜೀವನ್ ವಾಲ್ಮಿಕಿ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ವಂಶಪಾರಂಪಾರ್ಯ ರಾಜಕೀಯವನ್ನು ತಡೆಯುವ ನಿಟ್ಟಿನಿಂದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮದುವೆಯಾಗದಿರಲು ಶಪಥ ಮಾಡಿಕೊಂಡಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಶಯೊರಾಜ್ ಜೀವನ್ ವಾಲ್ಮೀಕಿ ಹೇಳಿಕೆ ನೀಡಿದ್ದಾರೆ. [ಇದನ್ನೂ ಓದಿ: ಭಾವಿ 'ಪ್ರಧಾನಿ' ರಾಹುಲ್ ಗೆ ಜನತೆ ತರಾಟೆ]
ರಾಹುಲ್ ಗಾಂಧಿ ಅನೇಕ ತ್ಯಾಗಗಳನ್ನು ಮಾಡಿರುವ 'ಮಹಾನ್ ಜೀವಿ'. ಪಕ್ಷ, ಸಂಘಟನೆಯಲ್ಲಿ ಮುಳುಗಿ ಮದುವೆಯಾಗದೆ ಉಳಿದ ಬಿಜೆಪಿ ಹಿರಿಯ ಮುಖಂಡ ಅಟಲ್ ಬಿಹಾರಿ ವಾಜಪೇಯಿ ಅವರ ಉದಾಹರಣೆಯನ್ನು ವಾಲ್ಮೀಕಿ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುವಾಗ ವಾಲ್ಮೀಕಿ, ರಾಹುಲ್ ಅವರು ವಂಶಪಾರಂಪಾರ್ಯ ರಾಜಕೀಯ ತಡೆಯುವ ಸಲುವಾಗಿ ಮದುವೆಯಾಗಿಲ್ಲ ಹೇಳಿದ್ದರು ಆದರೆ, ನಂತರ ಕ್ಷಮೆಯಾಚಿಸಿ ನಾನು ಹೇಳಿದ್ದು ಆ ರೀತಿ ಅಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುವಾಗ ವಾಲ್ಮೀಕಿ, ರಾಹುಲ್ ಅವರು ವಂಶಪಾರಂಪಾರ್ಯ ರಾಜಕೀಯ ತಡೆಯುವ ಸಲುವಾಗಿ ಮದುವೆಯಾಗಿಲ್ಲ ಹೇಳಿದ್ದರು ಆದರೆ, ನಂತರ ಕ್ಷಮೆಯಾಚಿಸಿ ನಾನು ಹೇಳಿದ್ದು ಆ ರೀತಿ ಅಲ್ಲ ಎಂದಿದ್ದಾರೆ.
ನಿಮಗೆ ರಾಹುಲ್ ಗಾಂಧಿ ಅವರು ಈ ಬಗ್ಗೆ ನೇರವಾಗಿ ಹೇಳಿದ್ದಾರಾ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಲು ಆಗದೆ ವಾಲ್ಕ್ಮೀಕಿ ಒದ್ದಾಡಿ, 'ನಾನು ರಾಹುಲ್ ಅವರನ್ನು ನೇರ ಭೇಟಿ ಮಾಡಿಲ್ಲ, ಆದರೆ, ಈ ಬಗ್ಗೆ ನನಗೆ ಮಾಧ್ಯಮಗಳಿಂದ ತಿಳಿದು ಬಂದಿದೆ. ಆದರೆ, ಈ ಮಾಹಿತಿ ತಪ್ಪಾಗಿರಬಹುದು ಎಂದು ಅಪರಾಧಿ ಮನೋಭಾವದಲ್ಲಿ ಹೇಳಿದರು.
ತಮ್ಮ ಹಿರಿಯ ಸಹದ್ಯೋಗಿಗಳ ವೈಯಕ್ತಿಕ ಮಾಹಿತಿ ಗೊತ್ತಿಲ್ಲದ್ದಷ್ಟು ದಡ್ಡತನ ಕಾಂಗ್ರೆಸ್ ನಾಯಕರನ್ನು ಆವರಿಸಿದೆಯೇ? ಎಂಬ ಪ್ರಶ್ನೆ ಏಳುತ್ತದೆ. 'ಬಡತನ ಎಂದರೆ ಕೇವಲ ಮನಸ್ಥಿತಿಯಷ್ಟೇ' ಎಂದು ಹೇಳಿದ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರು 'ದೇಶ ಉದ್ಧಾರ ಮಾಡಲು ವೈಯಕ್ತಿಕ ಹಿತಾಸಕ್ತಿ ಬಲಿ ಕೊಟ್ಟು ಮದುವೆಯಾಗಿಲ್ಲ' ಎಂದರೆ ದ್ವಂದ್ವ ಎದ್ದು ಕಾಣುತ್ತದೆ. ಇಷ್ಟಕ್ಕೂ ಮದುವೆಯಾಗದಿದ್ದರೆ ಮಾತ್ರ ದೇಶದ ಹಿತ ಕಾಯಲು ಸಾಧ್ಯ ಎಂದು ಕಾಂಗ್ರೆಸ್ಸಿಗರ ತಲೆಯೊಳಗೆ ಯಾರಾದರೂ ತುಂಬಿದ್ದಾರಾ? ಗೊತ್ತಿಲ್ಲ. ಮಹಾತ್ಮಾ ಗಾಂಧೀಜಿ ಅವರು ಮದುವೆ, ಮಕ್ಕಳು ಕಂಡವರು ಆದರೆ, ಎಂದಿಗೂ ವೈಯಕ್ತಿಕ ಬದುಕು, ಸಾರ್ವಜನಿಕ ಸೇವೆ ಅಡ್ಡಿ ಪಡಿಸಲಿಲ್ಲ.
ಇಷ್ಟಕ್ಕೂ ರಾಹುಲ್ ಗೆ ಏಕೆ ಚಿಂತೆ? ಇದುವರೆವಿಗೂ ರಾಹುಲ್ ಗಾಂಧಿ ಯಾವುದೇ ಪ್ರಮುಖ ಟಾಸ್ಕ್ ಪೂರೈಸಿಲ್ಲ.ಕಾಂಗ್ರೆಸ್ಸಿನ ಭಾವಿ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಅವರನ್ನು ಬಿಂಬಿಸಬೇಕಾದರೆ ಒಂದು ಅವರ ಅನುಭವದ ಆಧಾರ ಇರಬೇಕು ಇಲ್ಲವೇ ತ್ಯಾಗ ಕಥೆ ನಿಜವಾಗಬೇಕು ಇಲ್ಲದಿದ್ದರೆ ಹೇಳಿಕೆಗಳು ಅರ್ಥ ಕಳೆದುಕೊಳ್ಳುತ್ತವೆ. ಈ ಬಗ್ಗೆ ರಾಹುಲ್ 'ಮನಸ್ಥಿತಿ' ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಮುಂದಿನ ಚುನಾವಣೆ ವೇಳೆಗೆ ಎಡಪಕ್ಷಗಳನ್ನು ಪುನಃ ಕಾಂಗ್ರೆಸ್ ತನ್ನತ್ತ ಸೆಳೆದುಕೊಳ್ಳುತ್ತದೆಯೇ? ಅಥವಾ ಸ್ವಂತ ಬಲದ ಮೇಲೆ ಕಾಂಗ್ರೆಸ್ ಎಲ್ಲೆಡೆ ವಿಜಯ ಪಾತಕೆ ಹಾರಿಸಲು ಸಾಮರ್ಥ್ಯ ಪಡೆದುಕೊಂಡಿದೆಯೇ? ರಾಹುಲ್ ಉತ್ತರಿಸಬೇಕಿದೆ. ಅಲ್ಲಿ ತನಕ ಮಾಧ್ಯಮ ಹಾಗೂ ಕಾಂಗ್ರೆಸ್ಸಿಗರ ಹೇಳಿಕೆಗಳ ಮಧ್ಯೆ ರಾಹುಲ್ ಬಂದಿಯಾಗಲಿದ್ದಾರೆ.












Click it and Unblock the Notifications