ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾವಿ 'ಪ್ರಧಾನಿ' ರಾಹುಲ್ ಗೆ ಜನತೆ ತರಾಟೆ

By Mahesh
|
Google Oneindia Kannada News

ನವದೆಹಲಿ, ಆ.7: 'ಬಡತನವೆಂಬುದು ಕೇವಲ ಮನಸ್ಥಿತಿಯಷ್ಟೇ. ನಾವು ಅಂದುಕೊಂಡರಷ್ಟೇ ಅದು ಇರುತ್ತದೆ, ನಾವು ಬಡವರಲ್ಲ ಎಂದು ಕೊಂಡರೆ ಇರುವುದಿಲ್ಲ, ಇದು ಹಣ ಅಥವಾ ಆಹಾರಕ್ಕಾಗಲಿ ಸಂಬಂಧಿಸಿಯೇ ಇಲ್ಲ' ಎಂದು ಕಾಂಗ್ರೆಸ್ ಯುವರಾಜ, ಭಾವಿ ಪ್ರಧಾನಿ ಎಂದೇ ಬಿಂಬಿತವಾಗಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇತ್ತೀಚೆಗಷ್ಟೇ ನರೇಂದ್ರ ಮೋದಿ ವಿರುದ್ಧ ಯಾರೂ ಬಹಿರಂಗ ಹೇಳಿಕೆ ನೀಡಬೇಡಿ, ಸಾಮಾಜಿಕ ಜಾಲತಾಣಗಳಲ್ಲಿ ಸುಮ್ಮನೆ ಏನೇನೋ ಸಂದೇಶ ಹಾಕಬೇಡಿ ಎಂದು ತಮ್ಮ ಸಹದ್ಯೋಗಿಗಳಿಗೆ ಕಟ್ಟಪ್ಪಣೆ ವಿಧಿಸಿದ್ದ ರಾಹುಲ್ ಅವರು ಈಗ ನಾಲಗೆ ಕಚ್ಚಿಕೊಳ್ಳುವಂತಾಗಿದೆ.

ಅಲಹಾಬಾದಿನಲ್ಲಿ ಆಯೋಜನೆಗೊಂಡಿದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ನೀಡಿದ ಭಾಷಣ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸದ್ದು ಮಾಡಿತ್ತು. ಬಡತನವೆಂಬುದು ಕೇವಲ ಮನಸ್ಥಿತಿಗೆ ಸಂಬಂಧಿಸಿದ್ದು. ಇದರರ್ಥ ಆಹಾರದ ಅಭಾವವಾಗಲಿ, ಹಣವಾಗಲಿ ಅಥವಾ ವಸ್ತುಗಳಾಗಲಿ ಇಲ್ಲ ಎಂಬುದಲ್ಲ. ಒಂದು ವೇಳೆ ಆತ್ಮ ವಿಶ್ವಾಸ ವೃದ್ಧಿಸಿಕೊಂಡಲ್ಲಿ ಬಡತನ ಎಂಬ ಮನಸ್ಥಿತಿಯಿಂದ ಹೊರಬರಬಹುದು ಎಂದಿದ್ದರು.

ರಾಹುಲ್ ಹೇಳಿಕೆಗೆ ಉತ್ತರ ಪ್ರದೇಶದ ಬಿಜೆಪಿ ಘಟಕದ ವಕ್ತಾರ ವಿಜಯ್ ಬಹುದ್ದೂರ್ ಪಾಠಕ್, ಬಿಎಸ್ಪಿಯ ನಸೀಮುದ್ದೀನ್ ಸಿದ್ಧಿಕಿ ಆಕ್ಷೇಪ ವ್ಯಕ್ತಪಡಿಸಿದ್ದರು. ಸಾರ್ವಜನಿಕರು ಹಿಗ್ಗಾ ಮುಗ್ಗಾ ಟೀಕಿಸಿದ್ದಾರೆ. ಭಾರತೀಯ ಯೋಧರು ಹುತಾತ್ಮರಾದರೂ ಒಂದು ಶಬ್ದ ರಾಹುಲ್ ಬಾಯಿಂದ ಹೊರಬಿದ್ದಿಲ್ಲ ಇವರೆಲ್ಲ ದೇಶದ ಮುಂದಿನ ಪ್ರಧಾನಿ ಪಟ್ಟದ ಅಭ್ಯರ್ಥಿ ಎಂದು ಹೀಯಾಳಿಸಲಾಗಿದೆ.. ಜನತೆಯ ಆಕ್ರೋಶದ ಸಂದೇಶಗಳು ಕೆಲವು ಇಲ್ಲಿವೆ ನೋಡಿ...

ಕಂಚನ್ ಗುಪ್ತಾ ಟ್ವೀಟ್ಸ್

ಕಂಚನ್ ಗುಪ್ತಾ ಅವರಿಂದ ಪ್ರತಿಕ್ರಿಯೆ

ತಿದ್ದುಪಡಿ ಮಾಡಲಾಗಿದೆ

ರಾಹುಲ್ ಹೇಳಿಕೆ ಬಗ್ಗೆ ಅಪಾರ ಪ್ರತಿಕ್ರಿಯೆ ನಂತರ ಡ್ಯಾಮೇಜ್ ಕಂಟ್ರೋಲ್ ಮಾಡಲು ಕಾಂಗ್ರೆಸ್ ಸಜ್ಜಾಗಿದೆ

ನಿಮಗೆ ಗೊತ್ತೇ?

ಪ್ರಧಾನಿಯಾಗಲು ಹಕ್ಕು ನಿರ್ಣಯ ಮಂಡಿಸಲಾಗಿದೆಯಂತೆ

ಈಗ ಹೇಳಿದ್ದರು ರಾಹುಲ್

ಪಕ್ಷದ ಸದಸ್ಯರಿಗೆ ನಿಯಮ ವಿಧಿಸಿ ನಾಲಗೆ ತಪ್ಪಿ ಮಾತಾಡಿದ ರಾಹುಲ್ ಗಾಂಧಿ

ನೊಬೆಲ್ ನೀಡಿ

ಒಂದು ಹೇಳಿಕೆ ಮೂಲಕ ಬಡತನ ನಿರ್ಮೂಲನೆ ಮಾಡಿದ ರಾಹುಲ್ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ವಂತೆ

ರೈತರಿಗೆ ಸಹಾಯ

ರಾಹುಲ್ ಗಾಂಧಿ ರೈತರಿಗೆ ಹೇಗೆ ಸಹಾಯ ಮಾಡಬಹುದು ಗೊತ್ತಾ

ಆಜ್ಜಿ-ಮೊಮ್ಮಗನ ಹೇಳಿಕೆಗಳು

ಇಂದಿರಾಗಾಂಧಿ ಹೇಳಿಕೆ ಹಾಗೂ ರಾಹುಲ್ ಹೇಳಿಕೆ ವೈರುದ್ಧ್ಯ

Array

#YoRahulSoDumb

ರಾಹುಲ್ ಗಾಂಧಿ ಹುಟ್ಟಿದ ದಿನ ಬದಲಾಯಿಸಿದ ರಜನಿಕಾಂತ್

English summary
Congress vice president Rahul Gandhi's foot is in his mouth again. But it is only to be expected from someone with as large a disconnect with reality as Rahul's. When recycled quotes from thinkers of years past is all you can do by way of solving the nation's problems, such things will happen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X