ಗೆಳತಿ ಜತೆ ಮುನಿಸು, ಮಗಳನ್ನೇ ಮಾರಾಟಕ್ಕಿಟ್ಟ ಧೂರ್ತ

angered-with-girlfriend-us-youth-paul-marquez-puts-her-baby-on-sale
ನ್ಯೂಯಾರ್ಕ್, ಆಗಸ್ಟ್ 7: ತಾನು ಡೇಟಿಂಗ್ ಮಾಡುತ್ತಿದ್ದ ಯುವತಿ ತನ್ನನ್ನು ಕಡೆಗಣಿಸುತ್ತಿದ್ದಾಳೆ ಎಂದು ಯುವಕನೊಬ್ಬ ಸಿಟ್ಟಿಗೆದ್ದು ಗೆಳತಿಯ ಎರಡೂವರೆ ತಿಂಗಳ ಮಗಳನ್ನೇ ಜಾಹೀರಾತು ಮೂಲಕ ಮಾರಾಟಕ್ಕಿಟ್ಟ ಪ್ರಸಂಗ ನಡೆದಿದೆ. ಆಮೇಲೆ ವಿಷಯ ತಿಳಿದು ಪೊಲೀಸರಿಂದ ಸರಿಯಾಗಿ ಉಗಿಸಿಕೊಂಡಿದ್ದಾನೆ.

ಸ್ಟೇಟನ್ ಐಲ್ಯಾಂಡಿನ ಪಾಲ್ ಮಾರ್ಕ್ವೆಜ್ (23) ಈ ದುಸ್ಸಾಹಸಕ್ಕೆ ಮುಂದಾದ ಧೂರ್ತ ಅಪ್ಪ. ವೆಬ್‌ಸೈಟ್‌ವೊಂದರಲ್ಲಿ ವರ್ಗೀಕೃತ ಜಾಹೀರಾತು ನೀಡಿದ ಮಾರ್ಕ್ವೆಜ್, 100 ಡಾಲರಿಗೆ ಹೆಣ್ಣುಮಗು ಮಾರಾಟಕ್ಕಿದೆ ಎಂದು ಕಳೆದ ತಿಂಗಳು ಎರಡು ಬಾರಿ ಜಾಹೀರಾತು ನೀಡಿದ್ದ.

ಏನಾಯಿತೆಂದರೆ 19 ವರ್ಷದ ತರುಣಿಯೊಬ್ಬಳು ಈತನಿಗೆ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದಳು. ನಂತರ ಇವರಿಬ್ಬರು ಹಲವು ಬಾರಿ ಸಾಂಗತ್ಯದಲ್ಲಿದ್ದರು. ಮುಂದೆ ಕಾಲಾಂತರದಲ್ಲಿ... ಸದರಿ ಗೆಳತಿ ತನ್ನೊಂದಿಗೆ ಹೆಚ್ಚು ಸಮಯ ಕಳೆಯುತ್ತಿಲ್ಲ ಎಂಬ ಕೋಪಕ್ಕೆ ಈತ ಆಕೆಯ ಮಗುವನ್ನು ಮಾರಾಟ ಮಾಡಲು ಹೊರಟಿದ್ದ.

ಈ ಕೃತ್ಯಕ್ಕಾಗಿ ಪೊಲೀಸರು ಮಾರ್ಕ್ವೆಜ್‌ ನನ್ನು ಬಂಧಿಸಿದ್ದಾರೆ. ಆರೋಪ ಸಾಬೀತಾದರೆ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಈ ಮಗು ಆಸ್ತಮದಿಂದ ಬಳಲುತ್ತಿದು, ಅದನ್ನು ನಿಭಾಯಿಸಲಾಗದೆ ಮಾರಾಟ ಮಾಡುತ್ತಿರುವುದಾಗಿ ಆತ ಹೇಳಿದ್ದ. ಜಾಹೀರಾತಿನಲ್ಲಿ ಮಗು ಹಾಗೂ ತಾಯಿಯ ಭಾವಚಿತ್ರಗಳು ಮತ್ತು ದೂರವಾಣಿ ಸಂಖ್ಯೆ ನೀಡಿದ್ದ.

I have a 2-month-old baby, she loves to play and have her little fun, but there's one problem. Doctors say she has asthma and if she turns a certain way she can stop breathing. She's really getting on my nerves and I don't want her- ಎಂದು ಜಾಹೀರಾತು ನೀಡಿದ್ದ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+