ಹರ್ಯಾಣ: ಕ್ಯಾಬ್ ಡ್ರೈವರ್ ಪುತ್ರಿಗೆ ಅಮೆರಿಕ ಸ್ಕಾಲರ್‌ಶಿಪ್

ಚಂಡೀಗಢ, ಆ.6: ಹರ್ಯಾಣ ಸರಕಾರದಲ್ಲಿ ಚಾಲಕನಾಗಿ ಉದ್ಯೋಗದಲ್ಲಿರುವ ವ್ಯಕ್ತಿಯೊಬ್ಬರ ಪುತ್ರಿಗೆ ರಸಾಯನ ಶಾಸ್ತ್ರದಲ್ಲಿ ಪಿಎಚ್‌ ಡಿ ಅಧ್ಯಯನ ನಡೆಸಲು ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ 50 ಸಾವಿರ ಡಾಲರ್‌ ಶಿಷ್ಯವೇತನ ದೊರೆತಿದೆ.

ಹರ್ಯಾಣದ ಕೈತಾಲ್ ಜಿಲ್ಲೆಯ ಬಾನಾ ಗ್ರಾಮದ ನಿವಾಸಿ, 24 ಹರೆಯದ ಪೂನಂ ಧುಲ್ (Poonam Dhull) ಕ್ಯಾಲಿಫೋರ್ನಿಯಾ ವಿವಿಯ ವಿದ್ಯಾರ್ಥಿವೇತನ ಪಡೆದುಕೊಂಡ ಪ್ರತಿಭಾವಂತ ವಿದ್ಯಾರ್ಥಿನಿ. ಈಕೆ ಸರಕಾರದ ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಚಾಲಕರಾಗಿರುವ ಸುರೇಶ್‌ ಪಾಲ್ ಪುತ್ರಿ.

haryana-cab-driver-sureshpal-daughter-poonam-dhull-gets-us-scholarship

ಕೈತಾಲ್‌ನ ಹಿರಿಯ ಪ್ರೌಢಶಾಲೆಯಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದ ಬಳಿಕ ಈಕೆ ಬಿಎಸ್‌ ಸಿ ಅಧ್ಯಯನ ಮಾಡಿದರು. ಚಂಡೀಗಢದ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ರಾಸಾಯನ ಶಾಸ್ತ್ರದಲ್ಲಿ ಎಂಎಸ್‌ ಸಿ ಪದವಿ ಪಡೆದ ಆನಂತರ ಅವರು Structure- activity relationships in a-fluorohydrins and their derivatives: A structural investigation ವಿಷಯದಲ್ಲಿ ಪಿಎಚ್‌ ಡಿ ಸಂಶೋಧನೆ ಕೈಗೆತ್ತಿಕೊಂಡರು.

ತನ್ನ ಯಶಸ್ಸಿಗೆ ಹೆತ್ತವರ ಸಹಕಾರ ಹಾಗೂ ಪ್ರೋತ್ಸಾಹವೇ ಕಾರಣ ಎಂದು ಪೂನಂ ಸಂತಸದಿಂದ ಸ್ಮರಿಸುತ್ತಾಳೆ. ಏತನ್ಮಧ್ಯೆ ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಕೂಡಾ ಪೂನಂ ಸಾಧನೆಯನ್ನು ಕೊಂಡಾಡಿದ್ದಾರೆ.

ಚಿಕ್ಕಪ್ಪ ಭಯೋತ್ಪಾದಕ ಎಂದು ಪಾಸ್‌ಪೋರ್ಟ್ ನಿರಾಕರಣೆ:
ಕಾಶ್ಮೀರದ ಬುದ್ಧಿವಂತ ಬಾಲಕಿ ಸಫೇರಿಯಾಗೆ ಅಮೆರಿಕ ಸರಕಾರವೇನೋ ವಿದ್ಯಾರ್ಥಿವೇತನ ನೀಡಿದೆ. ಆದರೆ, ಆಕೆ ಹುಟ್ಟುವ ಮೊದಲೇ ಆಕೆಯ ಚಿಕ್ಕಪ್ಪನೊಬ್ಬ ಭಯೋತ್ಪಾದಕನಾಗಿದ್ದ ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರಕಾರ ಆಕೆಗೆ ಪಾಸ್‌ಪೋರ್ಟ್ ನೀಡಲು ನಿರಾಕರಿಸಿರುವ ಪ್ರಸಂಗವೂ ನಡೆದಿದೆ.

ಬಡ್ಗಾಮಿನ ಅನಾಥಾಲಯವೊಂದರಲ್ಲಿರುವ 15 ವರ್ಷದ ಸಫೇರಿಯಗೆ ಭಾರತ-ಅಮೆರಿಕ ಯುವಶಕ್ತಿ ವಿನಿಮಯ ಅಧ್ಯಯನ ಯೋಜನೆಯಂತೆ ಒಂದು ವರ್ಷದ ವಿದ್ಯಾರ್ಥಿವೇತನ ಲಭಿಸಿತ್ತು. ಆಕೆ ಆಗಸ್ಟ್ ಮೊದಲ ವಾರದಲ್ಲಿ ಅಮೆರಿಕಕ್ಕೆ ಹೋಗಬೇಕಾಗಿತ್ತು. ಆದರೆ... (PTI)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+