ಅಮೆರಿಕ : ಇನ್ಫೋಸಿಸ್ ಮೇಲೆ ಮತ್ತೆ ದಾವೆ

Infosys in trouble again: US job seeker files lawsuit for ‘hiring bias’
ಬೆಂಗಳೂರು, ಆ.6: ಇತ್ತೀಚೆಗಷ್ಟೇ ಎರಡೆರಡು ವೀಸಾ ಕೇಸುಗಳನ್ನು ಇತ್ಯರ್ಥಗೊಳಿಸಿಕೊಂಡು ಸುಧಾರಿಸಿಕೊಳ್ಳುತ್ತಿದ್ದ ಇನ್ಫೋಸಿಸ್ ಸಂಸ್ಥೆಗೆ ಮತ್ತೆ ಆಘಾತ ಎದುರಾಗಿದೆ. ಅಮೆರಿಕದಲ್ಲಿ ಇನ್ಫಿ ಸಂಸ್ಥೆ ನನಗೆ ಮೋಸ ಮಾಡಿದೆ ಅಲ್ಲಿನ ಉದ್ಯೋಗಾರ್ಥಿಯೊಬ್ಬರು ದಾವೆ ಹೂಡಿದ್ದಾರೆ.

ವಿಸ್ಕೊಸಿನ್ ಮೂಲದ ಐಟಿ ತಜ್ಞೆಯೊಬ್ಬರು ಇನ್ಫೋಸಿಸ್ ಕಂಪನಿ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಇನ್ಫೋಸಿಸ್ ಸಂಸ್ಥೆ ದಕ್ಷಿಣ ಏಷ್ಯನ್ನರು ನೇಮಿಸಿಕೊಳ್ಳುವ ಇಚ್ಛೆ ಹೊಂದಿರುವಂತೆ ಕಾಣುತ್ತದೆ ಹೀಗಾಗಿ ಸ್ಥಳೀಯರಿಗೆ ಉದ್ಯೋಗ ನೀಡಲು ನಿರಾಕರಿಸಿದೆ ಎಂದು ಆಕೆ ತನ್ನ ದೂರಿನಲ್ಲಿ ಹೇಳಿದ್ದಾರೆ.

ಬ್ರೆಂಡಾ ಕೊಹ್ಲರ್ ಎಂಬ ಐಟಿ ತಜ್ಞೆ ಸುಮಾರು 15 ವರ್ಷಗಳ ಉದ್ಯೋಗ ಅನುಭವ ಹೊಂದಿದ್ದು, ಇತ್ತೀಚೆಗೆ ಇನ್ಫೋಸಿಸ್ ಕರೆದಿದ್ದ ಸಂದರ್ಶನಕ್ಕೆ ಹಾಜರಾಗಿದ್ದರು. ಆದರೆ, ಹುದ್ದೆಗೆ ಆಯ್ಕೆಯಾಗುವ ಎಲ್ಲಾ ಅರ್ಹತೆ ಹೊಂದಿದ್ದರೂ ತನ್ನನ್ನು ನಿರ್ಲಕ್ಷಿಸಿ ಬೇರೊಬ್ಬರಿಗೆ ಉದ್ಯೋಗ ನೀಡಲಾಗಿದೆ ಎಂದು ಬ್ರೆಂಡಾ ಆರೋಪಿಸಿದ್ದಾರೆ.

ಇನ್ಫೋಸಿಸ್ ನ ನೇಮಕಾತಿ ಪ್ರಕ್ರಿಯೆ ಯುನೈಟೆಡ್ ಸ್ಟೇಟ್ಸ್ ನಾಗರಿಕ ಹಕ್ಕು ಕಾಯ್ದೆಯ VII ಭಾಗದ ಉಲ್ಲಂಘನೆ ಮಾಡಿದೆ. ಸ್ಥಳೀಯರಿಗೆ ಉದ್ಯೋಗ ನೀಡರೆ ದಕ್ಷಿಣ ಏಷ್ಯಯನ್ನರಿಗೆ ಇನ್ಫೋಸಿಸ್ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅರ್ಹ ಸ್ಥಳೀಯ ಉದ್ಯೋಗಿಗಳಿಗೆ ಇದರಿಂದ ತುಂಬಾ ಅನ್ಯಾಯವಾಗಿದೆ ಎಂದು ಬ್ರೆಂಡಾ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.

ದಿ ಬಿಸಿನೆಸ್ ಟುಡೇ ವರದಿ ಪ್ರಕಾರ' ಯುನೈಟೆಡ್ ಸ್ಟೇಟ್ಸ್ ನಲ್ಲಿ ಇನ್ಫೋಸಿಸ್ ಸಂಸ್ಥೆ ಸುಮಾರು 15,000ಕ್ಕೂ ಅಧಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ ಅದರೆ, ಇವರಲ್ಲಿ ಶೇ 90 ರಷ್ಟು ಭಾಗ ದಕ್ಷಿಣ ಏಷ್ಯ ಮೂಲದವರೇ ಇರುತ್ತಾರೆ ಎಂಬುದು ಗಮನಾರ್ಹ ಸಂಗತಿ. ಭಾರತ, ನೇಪಾಳ ಹಾಗೂ ಬಾಂಗ್ಲಾದೇಶಿಗಳನ್ನು ಹೆಚ್ಚಾಗಿ ಸೇರಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ದಕ್ಷಿಣ ಏಷ್ಯಾ ಮೂಲದವರು ಅಮೆರಿಕನ್ನರಿಗಿಂತ ಕಡಿಮೆ ವೇತನ ಪಡೆದು ಹೆಚ್ಚು ದುಡಿಮೆ ನೀಡುತ್ತಾರೆ ಇದರಿಂದ ಕಂಪನಿಗೆ ಲಾಭವಾಗುತ್ತಿದೆ ನಿಜ, ಅದರೆ, ಸ್ಥಳೀಯರಿಗೆ ಅನ್ಯಾಯವಾಗಿರುವುದಂತೂ ಸತ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+