ಚಿತ್ರಗಳಲ್ಲಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ಸಂಸತ್ ಪ್ರವೇಶ

ಬೆಂಗಳೂರು, ಆ.5: ಕ್ರಿಕೆಟರ್, ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರು ಸಂಸತ್ ಬಳಿ ಕಾಣಿಸಿಕೊಳ್ಳುತ್ತಿದ್ದಂತೆ ಕೆಮೆರಾಮ್ಯಾನ್ ಗಳಿಗೆ ಸುಗ್ಗಿಯೋ ಸುಗ್ಗಿ, ಎಲ್ಲರೂ ಸಚಿನ್ ಅವರ ಸಂಸತ್ ಪ್ರವೇಶದ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದರು.

ನೀಲಿ ಬಣ್ಣದ ಸ್ಟ್ರಿಪ್ ಶರ್ಟ್ ಹಾಗೂ ಕಪ್ಪು ಟ್ರೌಸರ್ ಧರಿಸಿದ್ದ ಸಚಿನ್ ಅವರ ಜೊತೆಗೆ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ರಾಜೀವ್ ಶುಕ್ಲಾ ಅವರು ಸಾಥ್ ನೀಡಿದರು. ಕಳೆದ ವರ್ಷ ಏಪ್ರಿಲ್ ನಲ್ಲಿ ರಾಜ್ಯಸಭೆಗೆ ಸಚಿನ್ ಅವರನ್ನು ನಾಮಾಂಕಿತಗೊಳಿಸಲಾಗಿತ್ತು. ರೇಖಾ, ಅನು ಆಗಾ ಅವರು ಕೂಡಾ ಸಚಿನ್ ಜೊತೆ ಈ ಪ್ರತಿಷ್ಠಿತ ಗೌರವ ಪಡೆದಿದ್ದರು.

ಮೊದಲ ದಿನ ಸಚಿನ್ ಅವರು ಸಾಹಿತಿ ಜಾವೇದ್ ಅಖ್ತರ್ ಅವರ ಜತೆ ಕುಳಿತು ಚರ್ಚೆ ನಡೆಸಿದ್ದು ಕಂಡು ಬಂದಿತ್ತು.ಸಚಿನ್ ಅವರನ್ನು ಸಭಾಪತಿ ಹಮೀದ್ ಅನ್ಸಾರಿ ಅವರು ಸ್ವಾಗತಿಸಿದರು. ನಂತರ ಬ್ರೇಕ್ ನಲ್ಲಿ ಇತರೆ ಸದಸ್ಯರು ಸಚಿನ್ ಕೈ ಕುಲುಕಲು ಮುಗಿಬಿದ್ದರು. ಸಚಿನ್ ಅವರ ಪತ್ನಿ ಅಂಜಲಿ ಅವರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಮುಂಗಾರು ಅಧಿವೇಶದನ ಕಲಾಪಗಳನ್ನು ವೀಕ್ಷಿಸಿದರು.

ಉಳಿದಂತೆ, ಎಲ್ಲೆಡೆ ರಂಜಾನ್ ಹಬ್ಬಕ್ಕಾಗಿ ಖರೀದಿ ಜೋರಾಗಿದೆ. ಮುಸ್ಲಿಂ ಮಹಿಳೆಯರು ಬಳೆ, ಹೊಸ ಬಟ್ಟೆ ಖರೀದಿ ನಡೆದ ದೃಶ್ಯಗಳು ಕೋಲ್ಕತ್ತಾ ಹಾಗೂ ಕಾಶ್ಮೀರದ ಬಜಾರಿನಿಂದ ಸಿಕ್ಕಿದೆ.

ಇಸ್ರೇಲಿನ ಪ್ರಧಾನಿ ಬೆಂಜಮೀನ್ ನೆತಾಯಾಥು ಅವರು ಮಕ್ಕಳೊಡನೆ ಫುಟ್ಬಾಲ್ ಆಡಿದ ಚಿತ್ರ, ಬಾಲಿವುಡ್ ನಟ ಶಾರುಖ್ ಚೆನ್ನೈ ಎಕ್ಸ್ ಪ್ರೆಸ್ ಈಗ ಯಾವೂರು ತಲುಪಿದೆ. ಇಂಡಿಯನ್ ಜ್ಯೂನಿಯರ್ ಮಹಿಳೆಯರು ಹಾಕಿ ವಿಶ್ವಕಪ್ ನಲ್ಲಿ ಕಂಚಿನ ಪದಕ ಗೆದ್ದ ಖುಷಿ, ಭಾರತಕ್ಕೆ ಬರಲು ಕಾದಿರುವ ಬಾಂಗ್ಲಾದೇಶಿಗಳು, ಸಂಬಳ ಸಾಲದೆ ಕಂಬ ಏರಿದ ಯೋಧ, ತುಂಬಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಭಕ್ತರ ಆಟ ಇನ್ನಷ್ಟು ಚಿತ್ರಗಳು ಇಲ್ಲಿವೆ

ಸಚಿನ್ ಸಂಸತ್ ಪ್ರವೇಶ

ಸಚಿನ್ ಸಂಸತ್ ಪ್ರವೇಶ

ಸಚಿನ್ ಅವರ ಪತ್ನಿ ಅಂಜಲಿ ಅವರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಮುಂಗಾರು ಅಧಿವೇಶನ ಕಲಾಪಗಳನ್ನು ವೀಕ್ಷಿಸಿದರು.

ಹಾಕಿ ವಿಶ್ವಕಪ್ ನಲ್ಲಿ ಕಂಚಿನ ಪದಕ

ಹಾಕಿ ವಿಶ್ವಕಪ್ ನಲ್ಲಿ ಕಂಚಿನ ಪದಕ

ಜರ್ಮನಿಯಲ್ಲಿ ನಡೆದ ವಿಶ್ವಕಪ್ ಜ್ಯೂನಿಯರ್ ಹಾಕಿ ಪಂದ್ಯವಾಳಿಯಲ್ಲಿ ಇಂಗ್ಲೆಂಡ್ ತಂಡವನ್ನು 3-2 ಅಂತರದಲ್ಲಿ ಸೋಲಿಸಿದ ಭಾರತದ ಮಹಿಳೆಯರು ವಿಜಯೋತ್ಸವ ಆಚರಿಸಿದರು.

ಭಾರತಕ್ಕೆ ಕಂಚು

ಭಾರತಕ್ಕೆ ಕಂಚು

ಜರ್ಮನಿಯಲ್ಲಿ ನಡೆದ ವಿಶ್ವಕಪ್ ಜ್ಯೂನಿಯರ್ ಹಾಕಿ ಪಂದ್ಯವಾಳಿಯಲ್ಲಿ ಇಂಗ್ಲೆಂಡ್ ತಂಡವನ್ನು 3-2 ಅಂತರದಲ್ಲಿ ಸೋಲಿಸಿದ ಭಾರತದ ಆಟಗಾರ್ತಿಯರು ನಾಯಕಿ ರಾಣಿಯನ್ನು ಹೊತ್ತು ವಿಜಯೋತ್ಸವ ಆಚರಿಸಿದರು.

ಭಾರತದ ಆಶ್ರಯಕ್ಕಾಗಿ

ಭಾರತದ ಆಶ್ರಯಕ್ಕಾಗಿ

ಕಾರ್ಬೂಕ್ : ಗಡಿಭಾಗದಲ್ಲಿ ಭಾರತದ ಆಶ್ರಯಕ್ಕಾಗಿ ಕಾದಿರುವ ಬಾಂಗ್ಲಾದೇಶ ಪ್ರಜೆಗಳು. ಅಗರ್ತಲದಿಂದ 105 ಕಿ.ಮೀ ದೂರದ ಗಡಿ ಭಾಗದಲ್ಲಿ ಕಂಡು ಬಂದ ದೃಶ್ಯ

ಗುರ್ ಗಾಂವ್ ನಲ್ಲಿ ಚೆನ್ನೈ ಎಕ್ಸ್ ಪ್ರೆಸ್

ಗುರ್ ಗಾಂವ್ ನಲ್ಲಿ ಚೆನ್ನೈ ಎಕ್ಸ್ ಪ್ರೆಸ್

ಗುರ್ ಗಾಂವ್: ನಟ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ಅವರು ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ಪ್ರಚಾರದಲ್ಲಿ

ಹಬ್ಬಕ್ಕಾಗಿ ಎಲ್ ಪಿಜಿ

ಹಬ್ಬಕ್ಕಾಗಿ ಎಲ್ ಪಿಜಿ

ಶ್ರೀನಗರ ಭಾನುವಾರ ಶಾಬ್ ಇ ಖಾದರ್ ಅಂಗವಾಗಿ ನಿಗೀನ್ ಸರೋವರದಲ್ಲಿ ಅನಿಲ ಸಿಲೆಂಡರ್ ಗಳನ್ನು ಹೊತ್ತೊಯ್ಯ್ಯುತ್ತಿರುವ ಮುಸ್ಲಿಂ ವ್ಯಕ್ತಿ

ಬಳೆ ಖರೀದಿ

ಬಳೆ ಖರೀದಿ

ರಂಜಾನ್ ನ ಕೊನೆ ಭಾನುವಾರದಂದು ಕೋಲ್ಕತ್ತಾದಲ್ಲಿ ಬಳೆ ಕೊಳ್ಳುತ್ತಿರುವ ಮುಸ್ಲಿಂ ಮಹಿಳೆ PTI Photo by Ashok Bhaumi

ರಂಜಾನ್ ಗಾಗಿ

ರಂಜಾನ್ ಗಾಗಿ

ರಂಜಾನ್ ಅಂಗವಾಗಿ ವಿವಿಧ ಬಣ್ಣಗಳಲ್ಲಿ ಶ್ಯಾವಿಗೆ ತಯಾರಾಗುತ್ತಿದೆ.

ಇಸ್ರೇಲಿನ ಪ್ರಧಾನಿ

ಇಸ್ರೇಲಿನ ಪ್ರಧಾನಿ

ಇಸ್ರೇಲಿನ ಪ್ರಧಾನಿ ಬೆಂಜಮೀನ್ ನೆತಾಯಾಥು ಅವರು ಮಕ್ಕಳೊಡನೆ ಫುಟ್ಬಾಲ್ ಆಡಿದ ಚಿತ್ರ. ಇಸ್ರೇಲ್ ಹಾಗೂ ಪ್ಯಾಲೇಸ್ಟೇನ್ ನಡುವಿನ ಅಂತರ ಕಡಿಮೆ ಮಾಡಲು ಕ್ಯಾನ್ಸರ್ ಪೀಡಿತ ಮಕ್ಕಳ ಜೊತೆ ಪ್ರಧಾನಿ ಆಟವಾಡುವ ಮೂಲಕ ಶಾಂತಿ ಮಾತುಕತೆಗೆ ನಾಂದಿ ಹಾಡಿದ್ದಾರೆ.

ಬೋಧ್ ಗಯಾದಲ್ಲಿ

ಬೋಧ್ ಗಯಾದಲ್ಲಿ

ಬೋಧ್ ಗಯಾದ ಮಂದಿರಗಳಲ್ಲಿ ಪ್ರಾರ್ಥನೆ ಸಾಂಗವಾಗಿ ಸಾಗಿದ್ದು, ಎಲ್ಲೆಡೆ ಶಾಂತಿ ಮಂತ್ರ ಕೇಳಿಬಂದಿದೆ.

ಹೈದರಾಬಾದಿನಲ್ಲಿ

ಹೈದರಾಬಾದಿನಲ್ಲಿ

ರಾಜ್ಯಸಭಾ ಸದಸ್ಯೆ ರೇಣುಕಾ ಚೌಧುರಿ ಅವರು ಬೊನಮ್ ಹಬ್ಬದ ಅಂಗವಾಗಿ ಕಲಶ ಹೊತ್ತು ಸಾಗಿದರು.

ಕಾವೇರಿ ನದಿಯಲ್ಲಿ

ಕಾವೇರಿ ನದಿಯಲ್ಲಿ

ತಿರುಚನಾಪಳ್ಳಿ ಸಮೀಪ ಕಾವೇರಿ ನದಿಯಲ್ಲಿ ಮಹಿಳೆಯರ ಆಟ

ನವದೆಹಲಿಯಲ್ಲಿ

ನವದೆಹಲಿಯಲ್ಲಿ

ನವದೆಹಲಿ: ಅಸ್ಸಾಂ ರೈಫಲ್ಸ್ ನ ಯೋಧರೊಬ್ಬರು ಸಿಗುತ್ತಿರುವ ಸಂಬಳದಿಂದ ಅತೃಪ್ತಿಗೊಂಡು 200 ಅಡಿ ಎತ್ತರ ವಿದ್ಯುತ್ ಪ್ರಸರಣ ಗೋಪುರವನ್ನು ಏರಿದ ಘಟನೆ ನಡೆಯಿತು. PTI Photo by Atul Yadav

ಶ್ರೀನಗರದಲ್ಲಿ

ಶ್ರೀನಗರದಲ್ಲಿ

ಈದ್ ಅಲ್ ಫಿತ್ರ್ ಮುನ್ನ ಮುಸ್ಲಿಮರು ಭರ್ಜರಿ ಶಾಪಿಂಗ್ ನಡೆಸಿದ್ದಾರೆ. ಕಾಶ್ಮೀರದಲ್ಲಿ ರಂಜಾನ್ ಆಚರಣೆ ಆ.9ರಂದು ನಿಗದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+