ಯುವತಿ ಅಪಹರಣ- ಅಕ್ರಮ ಬಂಧನ: ಯುವಕನ ಸೆರೆ

facebook-friend-confines-girl-mangalore-karkala-police-arrest
ಕಾರ್ಕಳ, ಆಗಸ್ಟ್ 1: ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಕಾಲೇಜಿನಿಂದ ಅಪಹರಣ ಮಾಡಿ, ಆಕೆಯನ್ನು ಮಂಗಳೂರಿನ ಫ್ಲಾಟ್ ಒಂದರಲ್ಲಿ ಅಕ್ರಮವಾಗಿ ಬಂಧಿಸಿಟ್ಟಿದ್ದ ಯುವಕನೊಬ್ಬನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೊಹಮದ್ ನಸಮೀದ್ (21) ಎಂದು ಗುರುತಿಸಲಾಗಿದ್ದು, ಆತ ಕೇರಳದ ಪಯ್ಯನೂರು ನಿವಾಸಿ ಎಂದು ತಿಳಿದುಬಂದಿದೆ. ಈತ ಇತ್ತೀಚೆಗೆ ಮಂಗಳೂರಿನಲ್ಲಿ ವಾಸಿಸುತ್ತಿದ್ದ. ಫೇಸ್ ಬುಕ್ ಮೂಲಕ ಯುವತಿಯ ಜತೆ ಮೊಹಮದ್ ನಸಮೀದ್ ಸ್ನೇಹ ಬೆಳೆಸಿದ್ದಾನೆ. ಮುಂದೆ ಆಕೆಯನ್ನು ಪ್ರೀತಿಸತೊಡಗಿದ್ದಾನೆ.

ಜುಲೈ 29ರಂದು ಸದರಿ ಯುವತಿ ಕಾಲೇಜಿಗೆ ಹೋಗುತ್ತಿದ್ದಾಗ ಈ ಅಪಹರಣ/ ಅಕ್ರಮ ಬಂಧನ ನಡೆದಿದೆ. ಮಗಳು ಮನೆಗೆ ಬಾರದೇ ಹೋದಾಗ ಗಾಬರಿಗೊಂಡ ಆಕೆಯ ಪೋಷಕರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ನಂತರ ಪೊಲೀಸರು, ಪೋಷಕರು ಮತ್ತು ಯುವತಿಯ ಸ್ನೇಹಿತರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಆಕೆ ಮಂಗಳೂರಿನತ್ತ ಪ್ರಯಾಣ ಮಾಡುತ್ತಿದ್ದಾಗಿ ಒಬ್ಬರು ಮಾಹಿತಿ ಕೊಟ್ಟಿದ್ದಾರೆ.

ಆ ಸುಳಿವಿನ ಮೇರೆಗೆ ಪೊಲೀಸರು ಮಂಗಳೂರಿನಲ್ಲಿ ಹುಡುಕಾಟ ನಡೆಸಿದಾಗ ಫ್ಲಾಟ್ ಒಂದರಲ್ಲಿ ಅಕ್ರಮವಾಗಿ ಬಂಧಿಸಲ್ಪಟ್ಟಿರುವುದು ಗಮನಕ್ಕೆ ಬಂದಿದೆ. ಕಾರ್ಯಾಚರಣೆಗಿಳಿದ ಪೊಲೀಸರು ಆಕೆಯನ್ನು ಬಂಧಮುಕ್ತಗೊಳಿಸಿ, ಪೋಷಕರಿಗೆ ಒಪ್ಪಿಸಿದ್ದಾರೆ. ಯುವತಿಯ ಹೇಳಿಕೆಯನ್ನಾಧರಿಸಿ ಪೊಲೀಸರು ಮೊಹಮದ್ ನಸಮೀದನನ್ನು ಬಂಧಿಸಿದ್ದಾರೆ.

ಅದಕ್ಕೂ ಮುನ್ನ ಪೊಲೀಸರು ಇಬ್ಬರನ್ನೂ ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+